ಪವರ್ ಸ್ಟಾರ್ ಫ್ಯಾಮಿಲಿ ಪವರ್ ಶೋ ಇಂದಿನಿಂದ ಪ್ರಾರಂಭ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಡೆಸಿಕೊಡಲಿರುವ'ಫ್ಯಾಮಿಲಿ ಪವರ್' ರಿಯಾಲಿಟಿ ಶೋ ಇಂದಿನಿಂದ ಪ್ರಾರಂಭವಾಗಲಿದೆ.
ಪವರ್ ಸ್ಟಾರ್ ಫ್ಯಾಮಿಲಿ ಪವರ್ ಶೋ ಇಂದಿನಿಂದ ಪ್ರಾರಂಭ
ಪವರ್ ಸ್ಟಾರ್ ಫ್ಯಾಮಿಲಿ ಪವರ್ ಶೋ ಇಂದಿನಿಂದ ಪ್ರಾರಂಭ
Updated on: 
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಡೆಸಿಕೊಡಲಿರುವ'ಫ್ಯಾಮಿಲಿ ಪವರ್' ರಿಯಾಲಿಟಿ ಶೋ ಇಂದಿನಿಂದ ಪ್ರಾರಂಭವಾಗಲಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ ಪ್ರಸಾರ ಆಗುವ ಈ ಶೋ ಸಂಪೂರ್ಣವಾಗಿ ಕೌಟುಂಬಿಕ ರಿಯಾಲಿಟಿ ಶೋ ಎನಿಸಿದೆ.
ಇದಾಗಲೇ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮ ನಡೆಸಿಕೊಟ್ಟಿದ್ದ ಪುನೀತ್ ಇದೀಗ ಮತ್ತೆ ಎರಡನೇ ಬಾರಿ ಕಿರುತೆರೆಗೆ ಬಂದಿದ್ದಾರೆ.
ಕಾರ್ಯಕ್ರಮದಲ್ಲಿ ಎರಡು ಕುಟುಂಬಗಳು ಭಾಗವಹಿಸಲಿದ್ದು ಅಜ್ಜ, ಅಪ್ಪ, ಮಗ ಹೀಗೆ ಮೂರು ಜನರೇಷನ್ ಅವರು ಇರಲಿದ್ದಾರೆ. ಇದರಲ್ಲಿ ಒಟ್ಟು ನಾಲ್ಕು ಸುತ್ತುಗಳಿದ್ದು ಒಂದು ಕುಟುಂಬದ ಐದು ಮಂದಿ ಸ್ಪರ್ಧಿಗಳಾಗಲಿದ್ದಾರೆ.
ಕುಟುಂಬ ಸಂಬಂಧ ಕೆಲವು ಸ್ಪರ್ಧೆಗಳು, ಪ್ರಶ್ನೆಗಳು ಕಾರ್ಯಕ್ರಮದಲ್ಲಿದ್ದು ಇದರಲ್ಲಿ ವಿಜೇತರಾದವರಿಗೆ ಹತ್ತು ಲಕ್ಷ ಬಹುಮಾನ ಸಿಗಲಿದೆ..

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com