
ನಿರ್ದೇಶಕ ಪ್ರೇಮ್ ಅವರ ಬಹು ನಿರೀಕ್ಷಿತ ಚಿತ್ರ ವಿಲನ್ ನ ಹಾಡಿನ ಚಿತ್ರೀಕರಣ ಇತ್ತೀಚೆಗೆ ಮೈಸೂರಿನಲ್ಲಿ ನಡೆಯಿತು. ಸುದೀಪ್ ಮತ್ತು ಆಮಿ ಜಾಕ್ಸನ್ ಹಾಡಿನಲ್ಲಿ ಮಿಂಚಿದ್ದಷ್ಟೇ ಅಲ್ಲ ಎಲ್ಲರ ಗಮನ ಸೆಳೆದದ್ದು ಆಮಿ ಜಾಕ್ಸನ್ ಅವರ ಸಾಂಪ್ರದಾಯಿಕ ಉಡುಗೆ.
ವಿಲನ್ ಚಿತ್ರೀಕರಣ ಸೆಟ್ ನಿಂದ ಆಗಾಗ ಪೋಸ್ಟ್ ಆಗುತ್ತಿರುವ ಫೋಟೋಗಳು ವೈರಲ್ ಆಗುತ್ತಿವೆ. ಆಧುನಿಕ ಉಡುಪು ತೊಟ್ಟು ಸಿಗರೇಟು ಸೇದುವ ಚಿತ್ರದಲ್ಲಿ ಕಾಣಿಸಿಕೊಂಡಿರುವ ಆಮಿ ಜಾಕ್ಸನ್ ಸಾಂಪ್ರದಾಯಿಕ ಶೈಲಿಯ ಉಡುಪಿನಲ್ಲಿ ಕೂಡ ಅಷ್ಟೇ ಸೊಗಸಾಗಿ ಕಂಗೊಳಿಸುತ್ತಿದ್ದಾರೆ.
ಈ ಮಧ್ಯೆ ಸಾಂಸ್ಕೃತಿಕ ಜಿಲ್ಲೆ ಮೈಸೂರಿನಲ್ಲಿ ಇರುವಷ್ಟು ದಿನ ಅಲ್ಲಿನ ವಾತಾವರಣ, ಹಳ್ಳಿಯ ಜೀವನಶೈಲಿಯನ್ನು ಆಮಿ ಪ್ರತಿ ಕ್ಷಣ ಸವಿಯುತ್ತಿದ್ದಾರೆ. ಸರಳತೆಯಲ್ಲಿ ಬಹಳ ಸೌಂದರ್ಯವಿದೆ ಎಂದು ಬರೆದು ಎತ್ತಿನ ಗಾಡಿಯ ಹಳ್ಳಿ ಜೀವನದ ಫೋಟೋವೊಂದನ್ನು ತಮ್ಮ ಟ್ವಿಟ್ಟರ್ ಪುಟದಲ್ಲಿ ಹಾಕಿಕೊಂಡಿದ್ದಾರೆ. ಪ್ರಾಣಿಗಳನ್ನು ಕೂಡ ಅಷ್ಟೇ ಪ್ರೀತಿಸುವ ಆಮಿ ವಿರಾಮದ ವೇಳೆಯಲ್ಲಿ ನಾಯಿಗಳ ಜೊತೆ ಆಟವಾಡುತ್ತಾರೆ.
ಶಿವರಾಜ್ ಕುಮಾರ್ ಕೂಡ ಪ್ರಧಾನ ಪಾತ್ರದಲ್ಲಿರುವ ವಿಲನ್ ಚಿತ್ರದ ಚಿತ್ರೀಕರಣ ಡಿಸೆಂಬರ್ ವರೆಗೆ ಮುಂದುವರಿಯಲಿದೆ.
Advertisement