ಪ್ರತಿಯೊಬ್ಬ ವ್ಯಕ್ತಿಯೂ ಒಂದಲ್ಲ ಒಂದು ಸಂದರ್ಭದಲ್ಲಿ ಮಫ್ತಿಯಲ್ಲಿರುತ್ತಾನೆ: ಶ್ರೀಮುರಳಿ

ಇದೇ ವಾರ ಸ್ಯಾಂಡಲ್ವುಡ್ ನಟ ಶಿವರಾಜ್ ಕುಮಾರ್ ಮತ್ತು ಶ್ರೀಮುರಳಿ ಅಭಿನಯದ ಮಫ್ತಿ ಚಿತ್ರ ರಾಜ್ಯಾದ್ಯಂತ 400ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ...
ಶ್ರೀಮುರಳಿ
ಶ್ರೀಮುರಳಿ
ಇದೇ ವಾರ ಸ್ಯಾಂಡಲ್ವುಡ್ ನಟ ಶಿವರಾಜ್ ಕುಮಾರ್ ಮತ್ತು ಶ್ರೀಮುರಳಿ ಅಭಿನಯದ ಮಫ್ತಿ ಚಿತ್ರ ರಾಜ್ಯಾದ್ಯಂತ 400ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ. 
ಮಫ್ತಿ ಚಿತ್ರ ನನ್ನ ವೃತ್ತಿಯಲ್ಲೇ ಅತೀ ದೊಡ್ಡ ಚಿತ್ರವಾಗಿದೆ. ಹೀಗಾಗಿ ನನಗೂ ಸ್ವಲ್ಪ ಆತಂಕದಲ್ಲಿದ್ದೇನೆ. ಆದರೆ ನನ್ನು ದಾರಿ ದೊಡ್ಡದು ಎಂದು ನಂಬಿದ್ದು ಅದಕ್ಕಾಗಿ ಸ್ವಲ್ಪ ಕಾಯಬೇಕು ಮತ್ತು ಅನುಭವಿಸಬೇಕು ಎಂದು ಮುರಳಿ ಹೇಳಿದ್ದಾರೆ. 
ಇದೇ ಶುಕ್ರವಾರಕ್ಕಾಗಿ ನಾನು ಕಾಯುತ್ತಿದ್ದೇನೆ. ಚಿತ್ರವನ್ನು ಕಂಡ ನನ್ನ ಅಭಿಮಾನಿಗಳು ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬ ಆತಂಕವಿದೆ ಎಂದು. ಚಿತ್ರಕ್ಕಾಗಿ ರಾಜ್ಯಾದ್ಯಂತ ಸಂಚರಿಸಲಿರುವ ಶ್ರೀಮುರಳಿ ಅವರನ್ನು ತಮ್ಮ ಚಿತ್ರದ ಕುರಿತಂತೆ ಪ್ರಶ್ನಿಸಿದಾಗ ಅವರ ಪ್ರತಿಕ್ರಿಯೆ ಹೀಗಿತ್ತು. 
ಕೆಲವೊಮ್ಮೆ ನಮ್ಮ ತೆರೆಯ ಮೇಲಿನ ಪಾತ್ರ ನಮ್ಮನ್ನು ಆಶ್ಚರ್ಯ ಚಕಿತನನ್ನಾಗಿ ಮಾಡುತ್ತವೆ
ನನ್ನ ನಿಜ ಜೀವನಕ್ಕಿಂತಲೂ ಹೆಚ್ಚು ತೆರೆಯ ಮೇಲಿನ ಪಾತ್ರಗಳು ನನ್ನನ್ನು ಹೆಚ್ಚು ಆಶ್ಚರ್ಯ ಚಕಿತನನ್ನಾಗಿ ಮಾಡುತ್ತವೆ. ಇದು ನಿಜನ ಎಂದು ನನ್ನನ್ನೇ ನಾನು ಹಲವು ಬಾರಿ ಪ್ರಶ್ನಿಸಿಕೊಂಡಿದ್ದೇನೆ. ಆದರೆ ನನ್ನನ್ನು ತೆರೆಯ ಮೇಲೆ ಕಂಡ ಪ್ರೇಕ್ಷಕರು ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ನೋಡು ಕಾತುರದಿಂದ ಕಾಯುತ್ತಿದ್ದೇನೆ. ಇದು ಸ್ಟಾರ್ ಆಗುವ ಸ್ಕ್ರೀಪ್ಟ್. ಮಫ್ತಿಯಂತ ವಿಭಿನ್ನ ಪಾತ್ರದಲ್ಲಿ ನಟಿಸುವುದು ತುಂಬಾ ಅಪಾಯಕಾರಿ. ಆದರೆ ಪ್ರೇಕ್ಷಕರ ಮುಂದು ನಿಮ್ಮನ್ನು ಹೇಗೆ ಪ್ರದರ್ಶಿಸಬೇಕು ಎಂದು ನೀವು ನಿರ್ಧರಿಸುತ್ತೀರಿ ಎಂದು ಹೇಳಿದರು. 
ಪ್ರತಿಯೊಬ್ಬರು ಬೇಹುಗಾರಿಕೆ ವ್ಯಕ್ತಿಯಾಗಿ ಕಂಡುಬರುತ್ತಾರೆ
ಪೊಲೀಸ್ ಅಧಿಕಾರಿಯೊಬ್ಬ ರಹಸ್ಯವಾಗಿ ಕಾರ್ಯಾಚರಣೆ ನಡೆಸುವುದಕ್ಕೆ ನಾವು ಮಫ್ತಿ ಎಂದು ಕರೆಯುತ್ತೇವೆ. ಆದರೆ ಇದಕ್ಕೆ ನಾನಾ ಅರ್ಥಗಳಿವೆ. ಪ್ರತಿಯೊಬ್ಬರು ಒಂದಲ್ಲ ಒಂದು ಸಮಯದಲ್ಲಿ ಮಫ್ತಿಯಲ್ಲಿ ಸುತ್ತಾಡುತ್ತಿರುತ್ತಾರೆ. ನಾವು ನಮ್ಮ ಮಾನವೀಯತೆಯನ್ನು ಕಾಪಾಡಿಕೊಳ್ಳಬೇಕು ಮತ್ತು ನಮ್ಮ ಸುತ್ತಲಿರುವ ಜನರಿಗಾಗಿ ಕಾಳಜಿ ವಹಿಸಬೇಕು ಅಥವಾ ಕಾನೂನು ಅನುಸರಿಸಿ ಬದುಕಬೇಕು. ಅದೇ ರೀತಿ ಒಬ್ಬ ಡಾನ್ ಮಫ್ತಿಯನ್ನು ಆರಿಸಿಕೊಳ್ಳುತ್ತಾನೆ ಎಂದರು. 
ನನ್ನ ಈ ಹಿಂದಿನ ಎರಡು ಚಿತ್ರಗಳಿಗಿಂತ ಮಫ್ತಿ ವಿಭಿನ್ನ ಚಿತ್ರ
ಉಗ್ರಂ ಮತ್ತು ರಥಾವರ ನನಗೆ ದೊಡ್ಡ ಬ್ರೇಕ್ ಕೊಟ್ಟ ಚಿತ್ರಗಳು. ಆದರೆ ಮಫ್ತಿ ಚಿತ್ರ ಈ ಎರಡು ಚಿತ್ರಗಳಿಗಿಂತ ವಿಭಿನ್ನವಾಗಿರುತ್ತದೆ. ಉಗ್ರಂ ಚಿತ್ರದಂತಾ ಉತ್ತಮ ಗುಣಮಟ್ಟದ ಚಿತ್ರವನ್ನು ಮಾಡಲು ನಿರ್ಧರಿಸಿದ್ದು ಅದರಂತೆ ರಥಾವರ ಮತ್ತು ಮಫ್ತಿ ಚಿತ್ರ ಮೂಡಿಬಂದಿದೆ ಎಂದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com