ಹರಿ ಪ್ರಿಯಾ
ಹರಿ ಪ್ರಿಯಾ

ಗೋವಾ ಬೀಚ್ ನಲ್ಲಿ ನಟಿ ಹರಿಪ್ರಿಯಾ ಬೈಕ್ ರೈಡಿಂಗ್ !

ನಟಿ ಹರಿಪ್ರಿಯಾ ಕಳೆದ ಕೆಲವು ದಿನಗಳಿಂದ ಗೋವಾ ಬೀಚ್ ನಲ್ಲಿ ಕ್ಯಾಂಪ್ ಹಾಕಿದ್ದಾರೆ. ದಿನಕರ್ ತೂಗುದೀಪ್ ನಿರ್ದೇಶನದ ...
Published on
ಬೆಂಗಳೂರು: ನಟಿ ಹರಿಪ್ರಿಯಾ ಕಳೆದ ಕೆಲವು ದಿನಗಳಿಂದ ಗೋವಾ ಬೀಚ್ ನಲ್ಲಿ ಕ್ಯಾಂಪ್ ಹಾಕಿದ್ದಾರೆ. ದಿನಕರ್ ತೂಗುದೀಪ್ ನಿರ್ದೇಶನದ ಲೈಫ್ ಜೊತೆ ಒಂದ್ ಸೆಲ್ಫಿ ಸಿನಿಮಾಗಾಗಿ ಚಿತ್ರ ತಂಡದ ಜೊತೆ ಹರಿಪ್ರಿಯಾ ಗೋವಾ ಬೀಚ್ ಗೆ ತೆರಳಿದ್ದಾರೆ.
ಪ್ರೇಮ್ ಮತ್ತು ಪ್ರಜ್ವಲ್ ದೇವರಾಜ್ ಜೊತೆಗಿನ ಫೋಟೋಗಳನ್ನು ಹರಿಪ್ರಿಯಾ ಶೇರ್ ಮಾಡಿದ್ದಾರೆ. ಜೊತೆಗೆ ಬೀಚ್ ನಲ್ಲಿನ ಶೂಟಿಂಗ್ ಅನುಭವವನ್ನು ಹಂಚಿಕೊಂಡಿದ್ದಾರೆ.
ಈ ಸಿನಿಮಾದಲ್ಲಿ ನಾನು ತುಂಬಾ ಬೋಲ್ಡ್ ಆದ ಪಾತ್ರದಲ್ಲಿ ನಟಿಸುತ್ತಿದ್ದೇನೆ, ರಶ್ಮಿಕಾ- ರಾಶ್ ಆಗಿದ್ದೇನೆ, ನನ್ನ ಈ ವಯಸ್ಸಿಗೆ ಈ ಪಾತ್ರ ಬಹಳ ವಿಶೇಷವಾದದ್ದು ಎಂದು ಹೇಳಿದ್ದಾರೆ. ಚಿತ್ರದಲ್ಲಿನ ರಶ್ಮಿ ಪಾತ್ರ ತಮ್ಮ ನೈಜ ಜೀವನಕ್ಕೆ ತೀರಾ ಹತ್ತಿರವಾದದ್ದು ಎಂದು ಹೇಳಿದ ಹರಿಪ್ರಿಯಾ ಕಥೆಯ ಪಾತ್ರದ ಬಗ್ಗೆ ಹೆಚ್ಚಿನ ಮಾಹಿತಿ ಬಿಟ್ಟುಕೊಟ್ಟಿಲ್ಲ.
ಗೋವಾದಲ್ಲಿ ಚಿತ್ರತಂಡ ತಾತ್ಕಾಲಿಕ ಕ್ಯಾಂಪ್ ಹೂಡಿದೆ, ಹಾಡಿನ ಚಿತ್ರೀಕರಣದಲ್ಲಿ ತಂಡ ನಿರತವಾಗಿದ್ದು, ಸಮುದ್ರದ ದಂಡೆಯ ಮೇಲೆ ಹರಿಪ್ರಿಯಾ ಬೈಕ್ ರೈಡಿಂಗ್ ಮಾಡುವ ದೃಶ್ಯ ಚಿತ್ರೀಕರಿಸಲಾಗಿದೆ.
ಸದ್ಯ ಹಲವು ಪ್ರಾಜೆಕ್ಟ್ ಗಳು ಹರಿಪ್ರಿಯಾ ಕೈಯ್ಯಲ್ಲಿವೆ. ಸಂಹಾರ, ಕನಕ, ಸೂಜಿದಾರ ಮುಂತಾದ ಸಿನಿಮಾಗಳಲ್ಲಿ ಹರಿಪ್ರಿಯಾ ನಟಿಸುತ್ತಿದ್ದಾರೆ. ತಮ್ಮ ಒತ್ತಡದ ಕೆಲಸದ ನಡುವೆಯು ಹರಿಪ್ರಿಯಾ ಹಲವು ಚಿತ್ರಗಳ ಶೂಟಿಂಗ್ ಮುಗಿಸಿ ಡಬ್ಬಿಂಗ್ ಕೆಲಸ ಕೂಡ ಮಾಡುತ್ತಿದ್ದಾರೆ.
ಲೈಫ್ ಜೊತೆ ಒಂದ್ ಸೆಲ್ಫೀ ಸೆಟ್ ನಲ್ಲಿ ಬ್ಯುಸಿ ಇರುವಾಗಲೇ ಹಲವು ಹೊಸ ಚಿತ್ರಗಳ ಕಥೆ ಕೇಳುತ್ತೇನೆ, ಅದರಲ್ಲಿ ಉತ್ತಮವಾದ ಕಥೆಯನ್ನು ಆರಿಸಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com