ಸುದೀಪ್ ಜೊತೆ ನೀನಾಸಂ ಸತೀಶ್
ಸಿನಿಮಾ ಸುದ್ದಿ
ನೀನಾಸಂ ಸತೀಶ್ ಟೈಗರ್ ಗಲ್ಲಿಯಲ್ಲಿ ಕಿಚ್ಚ ಸುದೀಪ್!
ಸತೀಶ್ ನೀನಾಸಂ ಅಭಿನಯದ ಟೈಗರ್ ಗಲ್ಲಿ ಪ್ರಮೋಷನಲ್ ವಿಡಿಯೋ ಶೀಘ್ರದಲ್ಲೇ ರಿಲೀಸ್ ಆಗಲಿದೆ, ನಿರ್ದೇಶಕ ರವಿ ಶ್ರೀವಾತ್ಸವ ಟೈಗರ್...
ಬೆಂಗಳೂರು: ಸತೀಶ್ ನೀನಾಸಂ ಅಭಿನಯದ ಟೈಗರ್ ಗಲ್ಲಿ ಪ್ರಮೋಷನಲ್ ವಿಡಿಯೋ ಶೀಘ್ರದಲ್ಲೇ ರಿಲೀಸ್ ಆಗಲಿದೆ, ನಿರ್ದೇಶಕ ರವಿ ಶ್ರೀವಾತ್ಸವ ಟೈಗರ್ ಗಲ್ಲಿ ಕಥೆಯೊಂದಿಗೆ ನನ್ನ ಬಳಿ ಬಂದಾಗ, ಪಾತ್ರಕ್ಕೆ ಸೂಕ್ತ ನ್ಯಾಯ ಒದಗಿಸಲು ನನ್ನಿಂದ ಸಾಧ್ಯವೇ ಎಂಬ ತಳಮಳ ಆರಂಭವಾಗಿತ್ತು ಎಂದು ಸತೀಶ್ ಹೇಳಿದ್ದಾರೆ.
ಕನ್ನಡ ಚಿತ್ರರಂಗದ ಪ್ರಮುಖ ನಟರುಗಳಾದ ಸುದೀಪ್, ಶಿವರಾಜಾ ಕುಮಾರ್, ಪ್ರೇಮ್ ಮತ್ತು ಯೋಗರಾಜದ್ ಭಟ್ ಅವರಂಥವರಿಂದ ಫೀಡ್ ಬ್ಯಾಕ್ ತೆಗೆದುಕೊಂಡೆ, ಅವರ ಪ್ರತಿಕ್ರಿಯೆಯನ್ನು ಸೆರೆ ಹಿಡಿದು, ಗನ್ ಸೈಡ್ ಗಲ್ಲಿಯ ಟೈಟಲ್ ಸಾಂಗ್ ನಲ್ಲಿ ಪ್ರಮೋಷನಲ್ ವಿಡಿಯೋ ಮಾಡಲಾಗಿದೆ. 12 ನಿಮಿಷವಿರುವ ಮೊದಲ ಭಾಗವನ್ನು ಅಕ್ಟೋಬರ್ 6 ರಂದು ಸುದೀಪ್ ರಿಲೀಸ್ ಮಾಡಲಿದ್ದಾರೆ, ಅದಕ್ಕೆ ಸಿಕ್ಕ ಪ್ರತಿಕ್ರಿಯೆ ನಂತರ ಉಳಿದ ನಟರುಗಳ ವಿಡಿಯೋ ಬಿಡುಗಡೆ ಮಾಡಲಾಗುವುದು ಎಂದು ಸತೀಶ್ ನೀನಾಸಂ ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ