ಬೆಂಗಳೂರು: ಮಲಯಾಳಂ ಸಿನಿಮಾವೊಂದನ್ನು ನಿರ್ಮಿಸುವುದಾಗಿ ಹೇಳಿದ್ದ ತಮಿಳು ನಟ ಧನುಷ್ ಸದ್ಯ ಕನ್ನಡ ಸಿನಿಮಾ ನಿರ್ಮಾಣ ಮಾಡಲು ಹೊರಟಿದ್ದಾರೆ.
ತಮ್ಮ ವಂಡರ್ ಬಾರ್ ಫಿಲ್ಮ್ಸ್ ಹಾಗೂ ಕನ್ನಡ ನಿರ್ಮಾಪಕ ಜಾಕೋಬ್ ವರ್ಗೀಸ್ ಸಹಯೋಗದಲ್ಲಿ ಕನ್ನಡ ಸಿನಿಮಾ ನಿರ್ಮಾಣ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಆಪರೇಷನ್ ಅಲಮೇಲಮ್ಮ ಖ್ಯಾತಿಯ ರಿಷಿ ಪ್ರಧಾನ ಪಾತ್ರದಲ್ಲಿ ನಟಿಸಲಿದ್ದು, ಇಸಾಲುದ್ದೀನ್ ನಿರ್ದೇಶನ ಮಾಡಲಿದ್ದಾರೆ ಇನ್ನೂ ಹೆಸರಿಡದ ಈ ಚಿತ್ರಕ್ಕೆ ಇಸಾಲುದ್ದೀನ್ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಶೀಘ್ರದಲ್ಲಿಯೇ ಚಿತ್ರ ಸೆಟ್ಟೇರಲಿದೆ.