ಬೆಂಗಳೂರು: 18 ವರ್ಷಗಳ ಕಾಲ ಜಾಹೀರಾತು ತಯಾರಿಸಿ ಮೊದಲ ಬಾರಿಗೆ ಮಧುಸೂದನ್ ನಿರ್ದೇಶಿಸುತ್ತಿರುವ 3 ಗಂಟೆ 30 ದಿನ 30 ಸೆಕೆಂಡ್ ಎಂಬ ಸಿನಿಮಾ ಮನೋ ವಿಶ್ಲೇಷಾತ್ಮಕ ಚಿತ್ರವಾಗಿದೆ. ಇದೊಂದು ಪ್ರೇಮ ಕಥೆಯಾಗಿದ್ದು. ಉತ್ತಮ ಸಂಗೀತ ಪ್ರೇಕ್ಷಕರನ್ನು ಮನರಂಜಿಸಲಿದೆ.
ಅರುಣ್ ಗೌಡ ಮತ್ತು ಕಾವ್ಯಾ ಶೆಟ್ಟಿ ನಟಿಸಿರುವ ಚಿತ್ರಕ್ಕೆ ವಿ. ಶ್ರೀಧರ್ ಸಂಗೀತ ನೀಡಿದ್ದಾರೆ. ಸಿನಿಮಾದ ಅರ್ಧಚಂದ್ರ ಎಂಬ ಹಾಡಿಗೆ ಜಯಂತ್ ಕಾಯ್ಕಿಣಿ ಸಾಹಿತ್ಯ ಬರೆದಿದ್ದಾರೆ. ಈ ಹಾಡಿಗೆ ಸಂಗೀತ ಮಾಂತ್ರಿಕ ಹಂಸಲೇಖಾ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಸಾಹಿತ್ಯ ಮತ್ತು ಸಂಗೀತದ ನಡುವಿನ ಮ್ಯಾರಥಾನ್ ಎಂದು ವರ್ಣಿಸಿದ್ದಾರೆ.
ಬಿಟ್ಟಿ ಬಿಲ್ಡಪ್ ಎಂಬ ಮತ್ತೊಂದು ಹಾಡಿಗೆ ರಮೇಶ್ ಅರವಿಂದ್ ಮೆಚ್ಚಿದ್ದಾರೆ. ಮನಸು ಮನಸು ಹಾಡನ್ನು ಸಂಗೀತ ನಿರ್ದೇಶಕ ಗುರು ಕಿರಣ್ ಪ್ರಶಂಸಿದ್ದಾರೆ.
ಆಡಿಯೋ ಮೂಲಕ ನಮ್ಮ ಅರ್ಧ ಕೆಲಸ ಮಾಡಿ ಮುಗಿಸಿದ್ದೇವೆ, ಇದು ಸಾಮಾನ್ಯ ಪ್ರೇಕ್ಷಕರನ್ನು ಗೆದ್ದಿದೆ. ನಮ್ಮ ಪ್ರಯತ್ನಕ್ಕೆ ಸೆಲೆಬ್ರಿಟಿಗಳು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ, ಸದ್ಯ ಸಿನಿಮಾ ಸೆನ್ಸಾರ್ ಹಂತದಲ್ಲಿದ್ದು ನವೆಂಬರ್ ನಲ್ಲಿ ರಿಲೀಸ್ ಆಗುವ ಸಾಧ್ಯತೆಯಿದೆ ಎಂದು ನಿರ್ದೇಶಕರು ಹೇಳಿದ್ದಾರೆ.