ರವಿ ಬಸ್ರೂರ್ ಅವರ ಹಾರರ್ ಸಿನಿಮಾ 'ಕಟಕ'ದಲ್ಲಿ ಆ್ಯನಿಮೇಟೆಡ್ ಏಡಿ ವಿಲ್ಲನ್!

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅರ್ಪಿಸಿ ಎನ್,ಎಸ್ ರಾಜ್ ಕುಮಾರ್ ನಿರ್ಮಿಸುತ್ತಿರುವ ಕಟಕ ಸಿನಿಮಾವನ್ನು ರವಿ ಬಸ್ರೂರ್ ನಿರ್ದೇಶಿಸುತ್ತಿದ್ದಾರೆ...
ಆ್ಯನಿಮೇಟೆಡ್ ಏಡಿ
ಆ್ಯನಿಮೇಟೆಡ್ ಏಡಿ
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅರ್ಪಿಸಿ ಎನ್,ಎಸ್ ರಾಜ್ ಕುಮಾರ್ ನಿರ್ಮಿಸುತ್ತಿರುವ ಕಟಕ ಸಿನಿಮಾವನ್ನು ರವಿ ಬಸ್ರೂರ್ ನಿರ್ದೇಶಿಸುತ್ತಿದ್ದಾರೆ.
ಸದ್ಯ ರವಿ ಕೆಜಿಎಫ್ ಮತ್ತು ಅಂಜಿನೀಪುತ್ರ ಸಿನಿಮಾಗಳಿಗೆ ಸಂಗೀತ ನೀಡಿದ್ದು,. ಗರ್‌ಗರ್‌ ಮಂಡ್ಲ', "ಬಿಲಿಂಡರ್‌' ಎಂಬ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ.
ವಾಮಾಚಾರ ಸುತ್ತ ನಡೆಯುವ ಸಿನಿಮಾ "ಕಟಕ'. ಇದು ನೈಜ ಘಟನೆಯನ್ನಾಧರಿಸಿದ ಸಿನಿಮಾ. ಐದು ವರ್ಷದ ಬಾಲಕಿಯೊಬ್ಬಳ ಮೇಲೆ ವಾಮಾಚಾರ ಪ್ರಯೋಗವಾದಾಗ ಏನೆಲ್ಲಾ ಆಗುತ್ತದೆ ಎಂಬ ಅಂಶವನ್ನಿಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ. 
ಕರಾವಳಿಯಲ್ಲಿ ನಡೆದ ಘಟನೆಗೆ ಸಿನಿಮೀಯ ಸ್ಪರ್ಶ ಕೊಟ್ಟು "ಕಟಕ' ಮಾಡಿದ್ದಾರೆ ರವಿ ಬಸ್ರೂರು. 5 ವರ್ಷದ ಬಾಲಕಿ ಮೇಲೆ ಹೇಗೆ ವಾಮಾಚಾರ ಪ್ರಯೋಗ ಮಾಡಲಾಗುತ್ತದೆ ಎಂಬುದರ ಬಗ್ಗೆ ಸಿನಿಮಾ ತಯಾರಾಗುತ್ತಿದೆ. 
ಆ್ಯನಿಮೇಟೆಡ್ ಏಡಿಯೊಂದು ಚಿತ್ರದ ವಿಲ್ಲನ್ ಆಗಿದೆ.ಚಿತ್ರದಲ್ಲಿ ವಾಮಚಾರ ಹಾಗೂ ಈ ಪ್ರಪಂಚ ಎಷ್ಟೊಂದು ಘೋರವಾಗಿದೆ ಎಂಬ ಅಂಶವನ್ನು ಹೇಳಲು ಪ್ರಯತ್ನಿಸಿದ್ದಾರಂತೆ.
ತಂದೆ-ಮಗಳು ಮತ್ತು ಏಡಿಯ ತ್ರಿಕೋನ ಕಥೆಯಾಗಿದ್ದು, ಇದರಲ್ಲಿ ಯಾವುದೇ ಸಾಧುಗಳು ಅಥವಾ ಪೂಜೆಗಳನ್ನು ಕಾಣುವುದಿಲ್ಲ ಎಂದು ಅವರು ಹೇಳಿದ್ದಾರೆ.
ಸಿನಿಮಾದಲ್ಲಿ ಆ್ಯನಿ ಮೇಟೆಡ್ ಏಡಿಯನ್ನು ಬಳಸಲಾಗಿದೆ. ನಾವೆಲ್ಲಾ ಕುಳಿತು ಒಟ್ಟಿಗೆ ಕೆಲ ಮಾಡಿದ್ದು, ಮೊದಲಿಗೆ ಫೈಬರ್ ಮಾಡಲಿಂಗ್ ಏಡಜಿ ಮಾಡಿದ್ದೆವು, ನಂತರ ಅದೇ ಮಾದರಿಯ 3ಡಿ ಮಾಡಲು ನಿರ್ಧರಿಸಿದೆವು ಎಂದಿ ಹೇಳಿದ್ದಾರೆ.
ಫಿಕ್ಸೆಲ್ ಫ್ರೇಮ್ಸ್ ವಿಸ್ಯುಯಲ್ ಎಫೆಕ್ಟ್ ನೀಡಿದೆ, ಅಂತಿಮ ಕೆಲಸ ಮುಗಿದಿದ್ದು, ತೆರೆಮೇಲೆ ಕಾಣಿಸಿಕೊಳ್ಳಲಿದೆ, ಈ ಚಿತ್ರದ ಮತ್ತೂಂದು ಹೈಲೈಟ್‌ ಅಂದರೆ ಸೌಂಡ್‌. ಚಿತ್ರದಲ್ಲಿ ಸೌಂಡಿಂಗ್‌ ತುಂಬಾ ವಿಭಿನ್ನವಾಗಿರಬೇಕು, ಕಥೆಯನ್ನು ಮತ್ತೂಂದು ಎತ್ತರಕ್ಕೆ ಕೊಂಡೊಯ್ಯಬೇಕೆಂಬ ಉದ್ದೇಶದಿಂದ ಹಾಲಿವುಡ್‌ ಚಿತ್ರಗಳ ಸೌಂಡಿಂಗ್‌ನಲ್ಲಿ ಕೆಲಸ ಮಾಡುವ ಸುಮಾರು 14 ಕಂಪೆನಿಗಳು ಈ ಚಿತ್ರಕ್ಕೆ ಸೌಂಡ್‌ ಎಫೆಕ್ಟ್ ನೀಡಿವೆ. ಶ್ಲಾಘ ಸಾಲಿಗ್ರಾಮ ಎಂಬ ಬಾಲಕಿ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com