ಗೋಮಾಂಸ ಸೇವಿಸಿ ಬಲಪಂಥೀಯರ ಕೆಂಗಣ್ಣಿಗೆ ಗುರಿಯಾದ ನಟಿ ಸುರಭಿ ಲಕ್ಷ್ಮಿ

ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಸುರಭಿ ಲಕ್ಷ್ಮಿ ಓಣಂ ಪ್ರಯಕ್ತ ನಡೆದ ಟಿವಿ ಕಾರ್ಯಕ್ರಮದಲ್ಲಿ ಗೋಮಾಂಸ ಸೇವಿಸಿದ ಹಿನ್ನೆಲೆಯಲ್ಲಿ ಅವರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತ ವಾಗಿದೆ...
ಸುರಭಿ ಲಕ್ಷ್ಮಿ
ಸುರಭಿ ಲಕ್ಷ್ಮಿ
Updated on
ತಿರುವನಂತಪುರ: ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಸುರಭಿ ಲಕ್ಷ್ಮಿ ಓಣಂ ಪ್ರಯಕ್ತ ನಡೆದ ಟಿವಿ ಕಾರ್ಯಕ್ರಮದಲ್ಲಿ ಗೋಮಾಂಸ ಸೇವಿಸಿದ ಹಿನ್ನೆಲೆಯಲ್ಲಿ ಅವರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತ ವಾಗಿದೆ.
ಮಲಯಾಳಂ ನ್ಯೂಸ್ ಚಾನೆಲ್ ನಲ್ಲಿ ಪ್ರಸಾರವಾದ ಕಾರ್ಯಕ್ರಮದಲ್ಲಿ ಸುರಭಿ ಕೇರಳ ಪರೋಟ ಜೊತೆ ಗೋಮಾಂಸ ಸೇವಿಸಿದ್ದಾರೆ. ಇದರಿಂದಾಗಿ ಸಂಘ ಪರಿವಾರ ಮತ್ತು ಬಲ ಪಂಥೀಯ ನಾಯಕರು ಸಾಮಾಜಿಕ ಮಾಧ್ಯಮಗಳಲ್ಲಿ ಸುರಭಿ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ್ದಾರೆ.
ಮಹಿಳಾ ವಿರೋಧಿ ಬ್ರಿಗೇಡ್ ಸುರಭಿ ಧರ್ಮ ಯಾವುದು ಎಂದು ಪ್ರಶ್ನಿಸಿದೆ, ಜೊತೆಗೆ ಆಕೆಯ ಸಿನಿಮಾಗಳನ್ನು ಬಹಿಷ್ಕರಿಸುವಂತೆ ಕರೆ ನೀಡಿ ಪೋಸ್ಟ್ ಹಾಕಲಾಗಿದೆ. ನಟಿ ಸುರಭಿ ಅವರಿಂದ ಹಿಂದೂ ಸಮುದಾಯಕ್ಕೆ ಅವಮಾನವಾಗಿದೆ ಎಂದು ಆರೋಪಿಸಿದ್ದಾರೆ.
ಓಣಂ ವೇಳೆ ನಟಿ ಸುರಭಿ ಮತ್ತೊಬ್ಬ ಕಲಾವಿದರ ಜೊತೆ ಸೇರಿ ಹಿಂದೂ ಧರ್ಮಕ್ಕೆ ಅಪಮಾನ ಮಾಡಿದ್ದಾರೆ. ಮಲಯಾಳಂ ಚಾನೆಲ್ ಹಿಂಧೂ ವಿರೋಧಿಯಂತೆ ವರ್ತಿಸುತ್ತಿದೆ ಎಂದು ಸಂಘ ಪರಿವಾರ ಬೆಂಬಲಿಗರು ಆರೋಪಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com