ಸ್ಯಾಂಡಲ್ವುಡ್ ನ ನವರಸ ನಾಯಕ ಜಗ್ಗೇಶ್ ಅಭಿನಯದ 8ಎಂಎಂ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ.
ಚಿತ್ರದ ಫಸ್ಟ್ ಲುಕ್ ಪೋಸ್ಟರ್ ನಲ್ಲಿ ಜಗ್ಗೇಶ್ ಆ್ಯಂಗ್ರಿ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಕೈಯಲ್ಲಿ ಗನ್ ಹಿಡಿದು ಚಿತ್ರಕ್ಕೆ ಪೋಸ್ಟ್ ಕೊಟ್ಟಿದ್ದಾರೆ. ಚಿತ್ರಕ್ಕಾಗಿ ಸಖತ್ ವರ್ಕ್ ಔಟ್ ಮಾಡಿರುವ ಜಗ್ಗೇಶ್ ದೇಹವನ್ನು ಚನ್ನಾಗಿ ದಂಡಿಸಿ ಸ್ವಲ್ಪ ತೆಳ್ಳಗಾಗಿದ್ದಾರೆ.
8ಎಂಎಂ ಚಿತ್ರವನ್ನು ಹರಿಕೃಷ್ಣ ಎಂಬುವರು ನಿರ್ದೇಶಿಸುತ್ತಿದ್ದಾರೆ. ಚಿತ್ರಕ್ಕೆ ನಾರಾಯಣ ಸ್ವಾಮಿ, ಇನ್ಫಾನ್ಟ್ ಪ್ರದೀಪ್ ಮತ್ತು ಸಲೀಂ ಶಾ ಬಂಡವಾಳ ಹೂಡಿದ್ದಾರೆ.