'ಅಮ್ಮಾ ಐ ಲವ್ ಯೂ' ಸಿನಿಮಾದಲ್ಲಿ ಇಶಾನ್ ಗೆ ಶಾನ್ವಿ ಶ್ರೀವಾಸ್ತವ್ ನಾಯಕಿ

ದ್ವಾರಕೀಶ್ ಪಿಕ್ಚರ್ಸ್ ನಿರ್ಮಾಣದ ಅಮ್ಮ ಐಲವ್ ಯೂ ಸಿನಿಮಾದಲ್ಲಿ, ರೋಗ್ ಸಿನಿಮಾ ಖ್ಯಾತಿಯ ಇಶಾನ್ ನಾಯಕನಾಗಿದ್ದಾರೆ...
ಶಾನ್ವಿ ಶ್ರೀವಾತ್ಸವ್
ಶಾನ್ವಿ ಶ್ರೀವಾತ್ಸವ್
ಬೆಂಗಳೂರು: ದ್ವಾರಕೀಶ್ ಪಿಕ್ಚರ್ಸ್ ನಿರ್ಮಾಣದ ಅಮ್ಮ ಐಲವ್ ಯೂ ಸಿನಿಮಾದಲ್ಲಿ, ರೋಗ್ ಸಿನಿಮಾ ಖ್ಯಾತಿಯ ಇಶಾನ್ ನಾಯಕನಾಗಿದ್ದಾರೆ.
ದ್ವಾರಕೀಶ್ 51ನೇ ಸಿನಿಮಾವಾಗಿ ತಮಿಳಿನ `ಪಿಚ್ಬೈಕಾರನ್' ಚಿತ್ರವನ್ನು ರಿಮೇಕ್ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ರೋಗ್' ಮೂಲಕ ಎಂಟ್ರಿಕೊಟ್ಟ ಇಶಾನ್ ನಾಯಕರಾಗಿ ನಟಿಸುತ್ತಿದ್ದಾರೆ. `ಆ ದಿನಗಳು' ಚೈತನ್ಯ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈ ಚಿತ್ರಕ್ಕೆ ಸದ್ಯಕ್ಕೆ `ಅಮ್ಮ ಐ ಲವ್ ಯೂ' ಎಂಬ ಹೆಸರು ಇಡಲಾಗಿದೆ.
ತಮಿಳಿನಲ್ಲಿ ವಿಜಯ್ ಆಂಟನಿ ನಟಿಸಿದ್ದ ಪಾತ್ರದಲ್ಲಿ ಇಶಾನ್ ನಟಿಸುತ್ತಿದ್ದಾರೆ, ಇದೊಂದು ತಾಯಿ-ಮಗನ ಬಾಂಧವ್ಯ ಸಾರುವ ಕಥೆಯಾಗಿದ್ದು, ಚಿತ್ರಕ್ಕೆ ಶಾನ್ವಿ ಶ್ರೀ ವಾತ್ಸವ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಮ್ಮ ಐ ಲವ್ ಯೂ' ಚಿತ್ರವು ಅಕ್ಟೋಬರ್ 3 ರಿಂದ ಆರಂಭವಾಗಲಿದೆ. ಜನವರಿ 19ಕ್ಕೆ ಚಿತ್ರ ಬಿಡುಗಡೆ ಮಾಡಲು ಯೋಜಿಸಲಾಗಿದೆ.
ಅಮ್ಮಾ... ಸಿನಿಮಾದಲ್ಲಿ ಪಿಜ್ಜಾ ಪಾರ್ಲರ್ ನಡೆಸುವ ಇಶಾನ್ ಜೊತೆ ಶಾನ್ವಿ ರೋಮ್ಯಾನ್ಸ್ ನಡೆಸಲಿದ್ದಾರೆ. ಇಸಾನ್ ಗೆ ಸೂಕ್ತ ನಾಯಕಿಗಾಗಿ ಪ್ರೊಡಕ್ಷನ್ ಹೌಸ್, ಹುಡುಕಾಟ ನಡೆಸಿ, ಅಂತಿವಮಾಗಿ ಶಾನ್ವಿ ಆಯ್ಕೆಯಾಗಿದ್ದಾರೆ. 
ಯಶ್, ಚಿರಂಜೀವಿ ಸರ್ಜಾ, ಮನೋರಂಜನ್, ದರ್ಶನ್ ಜೊತೆ ನಟಿಸಿರುವ ಶಾನ್ವಿ ಶ್ರೀ ಮುರುಳಿ ಅಭಿನಯು ಮುಫ್ತಿ ಸಿನಿಮಾದಲ್ಲಿಯೂ ನಟಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com