ಶೃತಿ ಹರಿಹರನ್ ಸ್ಯಾಂಡಲ್‍ವುಡ್‍ನ ಸ್ಮಿತಾ ಪಾಟೀಲ್!

ನಟಿ ಶೃತಿ ಹರಿಹರನ್ ಸ್ಯಾಂಡಲ್‍ವುಡ್‍ನ ಸ್ಮಿತಾ ಪಾಟೀಲ್ ಇದ್ದಂತೆ ಎಂದು ನಿರ್ದೇಶಕ ಬಿಎಂ ಗಿರಿರಾಜ್ ಹೇಳಿದ್ದಾರೆ...
ಶೃತಿ ಹರಿಹರನ್
ಶೃತಿ ಹರಿಹರನ್
Updated on
ನಟಿ ಶೃತಿ ಹರಿಹರನ್ ಸ್ಯಾಂಡಲ್‍ವುಡ್‍ನ ಸ್ಮಿತಾ ಪಾಟೀಲ್ ಇದ್ದಂತೆ ಎಂದು ನಿರ್ದೇಶಕ ಬಿಎಂ ಗಿರಿರಾಜ್ ಹೇಳಿದ್ದಾರೆ. 
ಪಾತ್ರಕ್ಕೆ ತಕ್ಕಂತೆ ತಮ್ಮನ್ನು ತಾವು ಬದಲಾಯಿಸಿಕೊಳ್ಳುವ ನಟನಾ ನೈಪುಣ್ಯತೆ ಶೃತಿ ಹರಿಹರನ್ ಅವರಲ್ಲಿ ಹೆಚ್ಚಿದೆ. ಏಕಕಾಲಕ್ಕೆ ಮನರಂಜನಾತ್ಮಕ ಚಿತ್ರಗಳಂತೆ ಕಲಾತ್ಮಕ ಚಿತ್ರಗಳಿಗೂ ಬೇಗ ಒಗ್ಗಿಕೊಳ್ಳುತ್ತಾರೆ. ಬಾಲಿವುಡ್ ನಲ್ಲಿ ನಟಿ ಸ್ಮಿತಾ ಪಾಟೀಲ್ ಇದ್ದಂತೆ ಕನ್ನಡಕ್ಕೆ ಶೃತಿ ಹರಿಹರನ್ ಎಂದು ಬಿಎಂ ಗಿರಿರಾಜ್ ಶೃತಿ ಅವರನ್ನು ಪ್ರಶಂಸಿಸಿದ್ದಾರೆ. 
ಬಿಎಂ ಗಿರಿರಾಜ್ ಅವರ ನಿರ್ದೇಶನದ ಇನ್ನು ಹೆಸರಿಡದ ಚಿತ್ರದಲ್ಲಿ ಶೃತಿ ಹರಿಹರನ್ ನಟಿಸುತ್ತಿದ್ದಾರೆ. ಗಿರಿರಾಜ್ ಅವರು ಚಿತ್ರದ ಸ್ಕ್ರಿಪ್ಟ್ ಕೆಲಸದಲ್ಲಿ ತೊಡಗಿದ್ದು ಶೃತಿ ಹರಿಹರನ್ ಅವರು ಪ್ರಸ್ತುತ ನಟಿಸುತ್ತಿರುವ ಚಿತ್ರಗಳ ಶೂಟಿಂಗ್ ಮುಗಿದ ನಂತರ ಅವರೊಂದಿಗೆ ಚಿತ್ರ ನಿರ್ದೇಶನಕ್ಕೆ ಮುಂದಾಗಲಿದ್ದಾರಂತೆ. 
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ತಾರಕ್ ಚಿತ್ರದಲ್ಲಿ ಶೃತಿ ಹರಿಹರನ್ ನಟಿಸಿದ್ದು ಚಿತ್ರ ಇದೇ ತಿಂಗಳು ತೆರೆ ಕಾಣಲಿದೆ. ಇನ್ನು ಮಲಯಾಳಂ ನಟ ದುಲ್ಕರ್ ಸಲ್ಮಾನ್ ನಟನೆಯ ದ್ವಿಭಾಷಾ ಚಿತ್ರದಲ್ಲಿ ನಟಿಸಲಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com