'ರುಪಾಯಿ' ಸಿನಿಮಾಗೆ ಸಹಿ ಮಾಡಿದ ಬಿಗ್ ಬಾಸ್ ಕೃಷಿ ತಾಪಂಡ

ಉತ್ತಮ ಚಿತ್ರ ಕಥೆಗಾಗಿ ಕಾಯುತ್ತಿದ್ದ ಬಿಗ್ ಬಾಸ್ ಕನ್ನಡ ಸೀಸನ್ -5 ಸ್ಪರ್ಧಿ ಕೃಷಿ ತಾಪಂಡ ಹೊಸ ಸಿನಿಮಾವೊಂದಕ್ಕೆ ಸಹಿ ಮಾಡಿದ್ದಾರೆ....
ಕೃಷಿ ತಾಪಂಡ
ಕೃಷಿ ತಾಪಂಡ
ಬೆಂಗಳೂರು: ಉತ್ತಮ ಚಿತ್ರ ಕಥೆಗಾಗಿ ಕಾಯುತ್ತಿದ್ದ ಬಿಗ್ ಬಾಸ್ ಕನ್ನಡ ಸೀಸನ್ -5 ಸ್ಪರ್ಧಿ ಕೃಷಿ ತಾಪಂಡ ಹೊಸ ಸಿನಿಮಾವೊಂದಕ್ಕೆ ಸಹಿ ಮಾಡಿದ್ದಾರೆ.
ಇದುವರೆಗೂ 27 ಕಥೆಗಳನ್ನು ಕೇಳಿದ ಅಖಿರಾ ನಟಿ ಕೃಷಿ ಒಂದೇ ಒಂದು ಕಥೆ ಮೆಚ್ಚಿಕೊಂಡು ಸಹಿ ಮಾಡಿದ್ದಾರೆ. ಹೊಸ ನಿರ್ದೇಶಕ ವಿನೋದ್ ಅವರ ರುಪಾಯಿ ಸಿನಿಮಾಗೆ ಸಹಿ ಮಾಡಿದ್ದಾರೆ.
ಏಪ್ರಿಲ್ ತಿಂಗಳಲ್ಲಿ ಸಿನಿಮಾ ಸೆಟ್ಚೇರಲಿದ್ದು, ಇದರಲ್ಲಿ ಕೃಷಿ ಮಧ್ಯಮವರ್ಗದ  ಯುವತಿ ಪಾತ್ರದಲ್ಲಿ ನಟಿಸಿದ್ದಾರೆ, ವಿವಿಧ ರೀತಿಯ ಸ್ಟಂಟ್ ಗಳನ್ನು ಬಳಕೆ ಮಾಡಲಾಗಿದೆ, ಸದ್ಯ 5 ಸಿನಿಮಾಗಳಲ್ಲಿ ಕೃಷಿ ನಟಿಸಿದ್ದಾರೆ, ಕನ್ನಡಕ್ಕಾಗಿ ಒಂದನ್ನು ಒತ್ತಿ ಸಿನಿಮಾ ಬಿಡುಗಡೆಗಾಗಿ ಕಾಯುತ್ತಿದ್ದಾರೆ, ಮತ್ತೊಂದು ಕಿಟ್ಟಿ ಎಂಬ ಮತ್ತೊಂದು ಸಿನಿಮಾದಲ್ಲೂ ನಟಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com