65ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ದಿವಂಗತ ನಟ ವಿನೋದ್ ಖನ್ನಾಗೆ ಮರಣೋತ್ತರ ದಾದಾ ಸಾಹೇಬ್ ಫಾಲ್ಕೇ ಪ್ರಶಸ್ತಿ

65ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟವಾಗಿದ್ದು, ದಿವಂಗತ ನಟ ವಿನೋದ್ ಖನ್ನಾ ಅವರಿಗೆ ಮರಣೋತ್ತರ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಘೋಷಣೆ ಮಾಡಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: 65ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟವಾಗಿದ್ದು,  ದಿವಂಗತ ನಟ ವಿನೋದ್ ಖನ್ನಾ ಅವರಿಗೆ ಮರಣೋತ್ತರ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಘೋಷಣೆ ಮಾಡಲಾಗಿದೆ.
ಅಂತೆಯೇ ಮಾನ್ ಚಿತ್ರದ ಅತ್ಯುತ್ತಮ ಅಭಿನಯಕ್ಕಾಗಿ ಇತ್ತೀಚೆಗೆ ನಿಧನರಾದ ಖ್ಯಾತ ನಟಿ ಶ್ರೀದೇವಿ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಇನ್ನು ಸಮಗ್ರ ಮನರಂಜನೆ ಚಿತ್ರ ವಿಭಾಗದಲ್ಲಿ ರಾಜಮೌಳಿ ನಿರ್ದೇಶನದ ಬಾಹುಬಲಿ ಚಿತ್ರ ಪ್ರಶಸ್ತಿ ಗಳಿಸಿದೆ. 
ಇನ್ನು ಅತ್ಯುತ್ತಮ ರಾಷ್ಟ್ರೀಯ ಏಕೀಕರಣ ನರ್ಗೀಸ್ ದತ್  ಪ್ರಶಸ್ತಿ ಮರಾಠಿಯ ಧಪ್ಪಾ ಪಾಲಾಗಿದ್ದು, ಇರಾದಾ ಚಿತ್ರದ ಅತ್ಯುತ್ತಮ ನಟನೆಗಾಗಿ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಗೆ ದಿವ್ಯಾದತ್ತ ಅವರು ಆಯ್ಕೆಯಾಗಿದ್ದಾರೆ. ಅತ್ಯುತ್ತಮ ಹಿನ್ನಲೆ ಗಾಯನ ಪ್ರಶಸ್ತಿಗೆ ಕಾಟ್ರು ವೆಲಿಯಿಡೈ ಚಿತ್ರದ ಹಿನ್ನಲೆ ಗಾಯಕರಾದ ಶಾಶಾ ತ್ರಿಪಾಠಿ ಭಾಜನರಾಗಿದ್ದಾರೆ. ಪುರುಷರ ಅತ್ಯುತ್ತಮ ಹಿನ್ವಲೆಯ ಗಾಯಕ ಪ್ರಶಸ್ತಿ ಖ್ಯಾತ ಗಾಯಕ ಏಸುದಾಸ್ ಅವರ ಪಾಲಾಗಿದ್ದು, ಅತ್ಯುತ್ತಮ ಮಕ್ಕಳ ಚಿತ್ರ ಪ್ರಶಸ್ತಿಗೆ ಮ್ಹೋರ್ಕೋಯಾ ಭಾಜನವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com