65ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದ್ದು ಕನ್ನಡದ ಹೆಬ್ಬೆಟ್ ರಾಮಕ್ಕ ಚಿತ್ರ ಅತ್ಯುತ್ತಮ ಕನ್ನಡ ಚಿತ್ರ ಎಂಬ ಕೀರ್ತಿಗೆ ಭಾಜನವಾಗಿದೆ.
ಇನ್ನು ಪ್ರಶಸ್ತಿ ಸಿಕ್ಕಿರುವುದಕ್ಕೆ ಹರ್ಷ ವ್ಯಕ್ತಪಡಿಸಿರುವ ನಂಜುಂಡೆ ಗೌಡ ಅವರು ನನ್ನ ಚಿತ್ರ ರಾಷ್ಟ್ರೀಯ ಮನ್ನಣೆ ಸಿಗುತ್ತದೆ ಎಂದು ನಾನು ಭಾವಿಸಿದ್ದೆ. ಪ್ರತಿಯೊಬ್ಬ ನಿರ್ದೇಶಕನಿಗೂ ತಮ್ಮ ಚಿತ್ರಕ್ಕೆ ಪ್ರಶಸ್ತಿ ಸಿಗುತ್ತದೆ ಎಂದು ಭಾವಿಸುತ್ತಾರೆ. ನನ್ನ ಚಿತ್ರದ ಕಥೆ ಮತ್ತು ಸಮಕಾಲೀನ ಪ್ರಸ್ತುತತೆಯ ಕಾರಣ ರಾಷ್ಟ್ರೀಯ ಮಟ್ಟದಲ್ಲಿ ಚಿತ್ರಕ್ಕೆ ಮನ್ನಣೆ ಸಿಗುತ್ತದೆ ಎಂದು ಭಾವಿಸಿದ್ದೆ ಎಂದು ಹೇಳಿದ್ದಾರೆ.
ಹೆಬ್ಬೆಟ್ ರಾಮಕ್ಕ ಚಿತ್ರ ಮಹಿಳಾ ರಾಜಕೀಯ ಮೀಸಲಾತಿ ಕಥಾವಸ್ತುವನ್ನು ಹೊಂದಿದ್ದು ಅದಕ್ಕೆ ಸಮ ಬಾಳು, ಸಮ ಪಾಲು ಎಂದು ಅಡಿ ಬರಹ ನೀಡಿದ್ದೆ. ವಸ್ತು ವಿಷಯವನ್ನಾಗಿ ನೋಡಿದರೆ ಇದು ಭಾಷೆ ಮತ್ತು ರಾಜ್ಯವನ್ನು ಮೀರಿ ನಿಲ್ಲುವಂತದ್ದು ಎಂದು ನಂಜುಂಡೆ ಗೌಡ ಅವರು ಹೇಳಿದ್ದಾರೆ.
ಪ್ರಶಸ್ತಿ ಅಲ್ಲದೆ, ಈ ಚಿತ್ರವನ್ನು ಎಲ್ಲರಿಗೂ ಮುಟ್ಟಿಸಬೇಕು ಎಂದು ಭಾವಿಸಿದ್ದೇನೆ. ಚಲನಚಿತ್ರವನ್ನು ತಯಾರಿಸುವ ಉದ್ದೇಶವು ಜನರಲ್ಲಿ ಸಾಮಾಜಿಕ ಅರಿವು ಮೂಡಿಸುವುದು. ಇದೇ ಏಪ್ರಿಲ್ 27ರಂದು ರಾಜ್ಯಾದ್ಯಂತ ಚಿತ್ರ ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ ಎಂದರು.
ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ತಾರಾ ಮತ್ತು ದೇವರಾಜ್ ಕಾಣಿಸಿಕೊಂಡಿದ್ದು ಪೂರ್ಣಚಂದ್ರ ತೇಜಸ್ವಿ ಅವರು ಚಿತ್ರಕ್ಕೆ ಸಂಗೀತ ನೀಡಿದ್ದಾರೆ.
13 ವರ್ಷಗಳ ನಂತರ ಮುಖ್ಯ ಪಾತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿದ್ದು ಅತ್ಯಾಕರ್ಷಕ: ತಾರಾ
ನಟಿ ತಾರಾ ಅವರಿಗೆ ಪ್ರಶಸ್ತಿಗಳು ಮತ್ತು ಮನ್ನಣೆಗಳು ಹೊಸತೆನಲ್ಲ. ಪ್ರಶಸ್ತಿಗಳನ್ನು ಘೋಷಿಸಿದಾಗ ನಾನು ಇನ್ನೂ ಅದೇ ರೀತಿಯ ಉತ್ಸಾಹ ಮತ್ತು ಜಟಿಲತೆಯನ್ನು ಪಡೆಯುತ್ತಿದ್ದೇನೆ. ಈ ಚಿತ್ರ ನನಗೆ ತುಂಬಾ ವಿಶೇಷವಾಗಿದ್ದು 13 ವರ್ಷಗಳ ನಂತರ ನಾನು ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದೇನೆ ಎಂದು ಹೇಳಿದ್ದಾರೆ.