ಸರೆಗಮಪ ಲಿಟಲ್ ಚಾಂಪ್ಸ್ ವಿನ್ನರ್ ಹೇಮಂತ್ ಬ್ರಿಜ್ವಾಸಿಗೆ 'ರೈಸಿಂಗ್ ಸ್ಟಾರ್ 2' ರಿಯಾಲಿಟಿ ಶೋ ಟ್ರೋಫಿ

ಸರೆಗಮಪ ಲಿಟಲ್ ಚಾಂಪ್ಸ್ ವಿನ್ನರ್ ಹೇಮಂತ್ ಬ್ರಿಜ್ವಾಸಿ'ರೈಸಿಂಗ್ ಸ್ಟಾರ್ 2'ರಿಯಾಲಿಟಿ ಶೋನಲ್ಲಿ ಗೆಲುವು ಸಾಧಿಸಿದ್ದಾರೆ...
ಹೇಮಂತ್ ಬ್ರಿಜ್ವಾಸಿ
ಹೇಮಂತ್ ಬ್ರಿಜ್ವಾಸಿ
ಮುಂಬಯಿ:  ಸರೆಗಮಪ ಲಿಟಲ್ ಚಾಂಪ್ಸ್ ವಿನ್ನರ್ ಹೇಮಂತ್ ಬ್ರಿಜ್ವಾಸಿ'ರೈಸಿಂಗ್ ಸ್ಟಾರ್ 2'ರಿಯಾಲಿಟಿ ಶೋನಲ್ಲಿ  ಗೆಲುವು ಸಾಧಿಸಿದ್ದಾರೆ.
ಕಳೆದ ರಾತ್ರಿ ನಡೆದ ಲೈವ್ ವೋಟಿಂಗ್  ಶೋನಲ್ಲಿ ಶೇ.83ರಷ್ಟು ವೋಟ್ ಪಡೆದ ಅವರು, ಪಂಜಾಬ್ ನ ರೋಹನ್ ಪ್ರೀತ್ ಸಿಂಗ್ ಹಾಗೂ ಕೇರಳದ ವಿಷ್ಣುಮಾಯಾ ರಮೇಶ್ ರನ್ನು ಹಿಂದಿಕ್ಕಿದ್ದಾರೆ.
ರೈಸಿಂಗ್ ಸ್ಟಾರ್ 2 ಟ್ರೋಫಿ ಹಾಗೂ 20 ಲಕ್ಷ ರೂಪಾಯಿ ನಗದು ಬಹುಮಾನವನ್ನು ತಮ್ಮದಾಗಿಸಿಕೊಂಡಿದ್ದಾರೆ. ವಿಶೇಷ ಅಂದ್ರೆ ಈ ಹಿಂದೆ ಹೇಮಂತ್, ಸರಿಗಮಪ ಲಿಟಲ್ ಚಾಂಪ್ಸ್ ರಿಯಾಲಿಟಿ ಶೋ ಕೂಡ ಗೆದ್ದಿದ್ದರು.
ರೈಸಿಂಗ್ ಸ್ಟಾರ್ 2 ಕಾರ್ಯಕ್ರಮ ಮೂರು ತಿಂಗಳಿನಿಂದ ಪ್ರಸಾರವಾಗುತ್ತಿದ್ದು. ರೋಹನ್ ಪ್ರೀತ್, ವಿಷ್ಣುಮಾಯಾ ಮೊದಲನೇ ಹಾಗೂ 2ನೇ ರನ್ನರ್ ಅಪ್ ಆಗಿದ್ದಾರೆ. 
9 ವರ್ಷಗಳ ಹಿಂದೆ ಹೇಮಂತ್, ಸರಿಗಮಪ ಲಿಟಲ್ ಚಾಂಪ್ಸ್ ವಿನ್ನರ್ ಆಗಿದ್ದರು. 2009ರಲ್ಲಿ ಅವರಿಗೆ ಈ ಟ್ರೋಫಿ ಒಲಿದಿತ್ತು. 
ಸ್ಪರ್ಧೆ ತುಂಬಾ ಕಠಿಣವಾಗಿತ್ತು, ನಾನು ವೀಕ್ಷಕರಿಗೆ ಚಿರಋಣಿಯಾಗಿದ್ದೇನೆ, ಹಾಗೂ ನನಗೆ ವೋಟ್ ಮಾಡಿದ ಎಲ್ಲರಿಗೂ ಆಭಾರಿಯಾಗಿದ್ದೇನೆ. ಜಡ್ಜಸ್ ಮತ್ತು ಬೆಂಬಲಿಸಿದ ಎಲ್ಲರಿಗೂ  ಹೇಮಂತ್  ಧನ್ಯವಾದ ಹೇಳಿದ್ದಾರೆ.
ಸಂಗೀತ ಸಂಯೋಜಕ ಹಾಗೂ ಗಾಯಕ ಶಂಕರ್ ಮಹದೇವನ್ ನಟ ಮೊನಾಲಿ ಠಾಕೂರ್ ಮತ್ತು ನಟ ಹಾಗೂ ಗಾಯಕ ದಲ್ ದಿಸ್ ದೋಸಂಜ್ ಜಡ್ಜ್ ಗಳಾಗಿ ಪಾಲ್ಗೋಂಡಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com