ನಾನು ರಜನಿಕಾಂತ್ ಅವರ ಆಜೀವ ಅಭಿಮಾನಿ: ಕಾರ್ತಿಕ್ ಸುಬ್ಬರಾಜು

ನಿರ್ದೇಶಕ ಕಾರ್ತಿಕ್ ಸುಬ್ಬರಾಜು ಅವರ ಇತ್ತೀಚಿನ ಚಿತ್ರ ಮರ್ಕ್ಯುರಿಗೆ ಒಳ್ಳೆಯ ಪ್ರತಿಕ್ರಿಯೆಗಳು ...
ಕಾರ್ತಿಕ್ ಸುಬ್ಬರಾಜು
ಕಾರ್ತಿಕ್ ಸುಬ್ಬರಾಜು

ನಿರ್ದೇಶಕ ಕಾರ್ತಿಕ್ ಸುಬ್ಬರಾಜು ಅವರ ಇತ್ತೀಚಿನ ಚಿತ್ರ ಮರ್ಕ್ಯುರಿಗೆ ಒಳ್ಳೆಯ ಪ್ರತಿಕ್ರಿಯೆಗಳು ಬರುತ್ತಿದ್ದರೂ ತಮಿಳಿನಾಡಿನಲ್ಲಿ ಮುಷ್ಕರ ನಡೆಯುತ್ತಿದ್ದರಿಂದ ಇಷ್ಟು ದಿನ ಬಿಡುಗಡೆ ಮಾಡಲು ಸಾಧ್ಯವಾಗದ್ದು ಕೊನೆಗೂ ಇದೀಗ ಶುಕ್ರವಾರ ಬಿಡುಗಡೆಯಾಗುತ್ತಿದೆ.ಚಿತ್ರದ ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದಿದ್ದ ಸಂದರ್ಭದಲ್ಲಿ ಮಾತಿಗಿಳಿದಾಗ:

ಚಿತ್ರತಯಾರಿಯ ಮೂಲ ನಿಯಮ ಚಿತ್ರದ ಕಥೆಯನ್ನು ನಟನೆ ಮೂಲಕ ಜನರಿಗೆ ತೋರಿಸಬೇಕೆ ಹೊರತು ಮಾತಿನ ಮೂಲಕವಲ್ಲ. ಒಳ್ಳೆಯ ಚಿತ್ರಗಳಲ್ಲಿ ಕಥೆ ಉತ್ತಮವಾಗಿರುತ್ತದೆ ಮತ್ತು ಸಂಭಾಷಣೆಗೆ ಹೆಚ್ಚಿನ ಪ್ರಾಮುಖ್ಯತೆ ಇರುವುದಿಲ್ಲ. ನಾನು ಈ ಅಂಶವನ್ನು ಚಿತ್ರದಲ್ಲಿ ತೋರಿಸಲು ಪ್ರಯತ್ನಿಸಿದ್ದೇನೆ. ನಾನೊಂದು ಎಂಟು ನಿಮಿಷಗಳ ಕಿರುಚಿತ್ರ ತಯಾರಿಸಿದ್ದೆ. ಥ್ರಿಲ್ಲರ್ ಚಿತ್ರವಾದ ಅದರಲ್ಲಿ ಕೇವಲ ಎರಡೇ ಸಂಭಾಷಣೆಯಿತ್ತು, ಒಂದು ಆರಂಭದಲ್ಲಿ ಮತ್ತೊಂದು ಕೊನೆಗೆ.

ಯಾವುದೇ ನಿರ್ದಿಷ್ಟ ಪ್ರದೇಶಕ್ಕೆ ಸೀಮಿತವಾದ ಚಿತ್ರ ಮರ್ಕ್ಯುರಿಯಲ್ಲ. ಚಿತ್ರದ ಕ್ಲ್ಯೈಮಾಕ್ಸ್ ನ್ನು ಹಲವರು ಇಷ್ಟಪಟ್ಟಿದ್ದಾರೆ. ಪ್ರಭುದೇವ ಅವರ ನಟನೆ ಕೂಡ ಇಷ್ಟವಾಗಿದೆ. ತಾಂತ್ರಿಕತೆ ವಿಚಾರ ಬಂದಾಗ ದೃಶ್ಯಗಳು ಮತ್ತು ಛಾಯಾಗ್ರಹಣಕ್ಕೆ ಜನರಿಂದ ಪ್ರಶಂಸೆ ವ್ಯಕ್ತವಾಗಿದೆ. ಬೇರೆಲ್ಲಾ ಕಡೆ ಚಿತ್ರ ಬಿಡುಗಡೆಯಾದರೆ ತಮಿಳುನಾಡಿನಲ್ಲಿ ಮಾತ್ರ ಆಗಿರಲಿಲ್ಲ. ಇಲ್ಲಿ ಬಿಡುಗಡೆಗಾಗಿ ಕಾತರದಿಂದ ಕಾಯುತ್ತಿದ್ದೇನೆ ಎಂದರು.

ನಾನು ರಜನಿಕಾಂತ್ ಅವರ ಬಹುದೊಡ್ಡ ಅಭಿಮಾನಿ. ಜೀವನವಿಡೀ ಅವರನ್ನು ಪ್ರೀತಿಸುತ್ತೇನೆ. ನನ್ನ ಮೊದಲ ಚಿತ್ರ ಪಿಜ್ಜಾವನ್ನು ಅವರು ನೋಡಿ ನನ್ನನ್ನು ಕರೆದು ಹರಸಿದ್ದರು. ಅದು ನನಗೆ ತುಂಬಾ ಖುಷಿ ಕೊಟ್ಟ ವಿಚಾರ. ಆದರೆ ಅವರ ಜೊತೆ ಸೇರಿಕೊಂಡು ಸಿನಿಮಾ ಮಾಡುತ್ತೇನೆಂದು ಯೋಚಿಸಿರಲೇ ಇಲ್ಲ. ಜಿಗರ್ ಥಂಡ್ ಸಿನಿಮಾ ಬಳಿಕ ರಜನಿಕಾಂತ್ ಅವರು ಹೊಸ ನಿರ್ದೇಶಕರು ಮತ್ತು ಹೊಸ ಹೊಸ ಕಥೆಗಳನ್ನು ಒಪ್ಪಿಕೊಳ್ಳುತ್ತಿದ್ದಂತಹ ಸಂದರ್ಭದಲ್ಲಿ ನಾನೊಂದು ಕಥೆಯನ್ನು ಆರಿಸಿಕೊಂಡೆ, ಅದು ಅವರಿಗೆ ನಿಜಕ್ಕೂ ಇಷ್ಟವಾಯಿತು. ನನ್ನ ಕನಸು ನನಸಾದ ಸಂದರ್ಭವದು. ರಜನಿಕಾಂತ್ ಅವರ ಜೊತೆ ಕೆಲಸ ಮಾಡಲು ಇಷ್ಟಪಡುತ್ತೇನೆ. ಈ ಸಿನಿಮಾ ಒಂದು ಹಂತಕ್ಕೆ ತಲುಪಿದ್ದು ಸ್ಕ್ರಿಪ್ಟ್ ಕೆಲಸ ನಡೆಯುತ್ತಿದೆ ಎಂದು ಕಾರ್ತಿಕ್ ಸುಬ್ಬರಾಜು ವಿವರಿಸಿದರು,

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com