ರುಸ್ತುಂಗಾಗಿ ವಿವಿಧ ಇಂಡಸ್ಟ್ರಿಗಳ ವಿಲ್ಲನ್ ಗಳನ್ನು ಕರೆತಂದ ನಿರ್ದೇಶಕ ರವಿವರ್ಮಾ!

ಸಾಹಸ ನಿರ್ದೇಶಕ ರವಿವರ್ಮಾ ತಾವು ನಿರ್ದೇಶಿಸುತ್ತಿರುವ ರುಸ್ತುಂ ಚಿತ್ರ ಒಂದು ಮೈಲಿಗಲ್ಲಾಗಬೇಕೆಂದು ನಿರ್ದರಿಸಿದ್ದಾರೆ, ಹಾಗಾಗಿ ಅದಕ್ಕೆ ತಕ್ಕ ತಯಾರಿಗಳನ್ನು ...
ರುಸ್ತುಂಗಾಗಿ ವಿವಿಧ ಇಂಡಸ್ಟ್ರಿಗಳ ವಿಲ್ಲನ್ ಗಳನ್ನು ಕರೆತಂದ ನಿರ್ದೇಶಕ ರವಿವರ್ಮಾ
ರುಸ್ತುಂಗಾಗಿ ವಿವಿಧ ಇಂಡಸ್ಟ್ರಿಗಳ ವಿಲ್ಲನ್ ಗಳನ್ನು ಕರೆತಂದ ನಿರ್ದೇಶಕ ರವಿವರ್ಮಾ
Updated on
ಬೆಂಗಳೂರು: ಸಾಹಸ ನಿರ್ದೇಶಕ ರವಿವರ್ಮಾ ತಾವು ನಿರ್ದೇಶಿಸುತ್ತಿರುವ ರುಸ್ತುಂ ಚಿತ್ರ ಒಂದು ಮೈಲಿಗಲ್ಲಾಗಬೇಕೆಂದು ನಿರ್ದರಿಸಿದ್ದಾರೆ, ಹಾಗಾಗಿ ಅದಕ್ಕೆ ತಕ್ಕ ತಯಾರಿಗಳನ್ನು ಮಾಡಿಕೊಳ್ಳುತ್ದಿದ್ದಾರೆ. 
ಶಿವರಾಜ್ ಕುಮಾರ್ ಅವರಿಗೆ ಸರಿಸಮನಾದ ವಿಲ್ಲನ್ ಕರೆ ತರಲು ವಿವಿಧ ಇಂಡಸ್ಚ್ರಿಗಳ ಕದ ತಟ್ಟಿದ್ದಾರೆ ನಿರ್ದೇಶಕ ರವಿವರ್ಮಾ. ಸೆಂಚ್ಯುರಿ ಸ್ಟಾರ್ ಗೆ ಶ್ರದ್ಧಾ ಶ್ರೀನಾಥ್ ನಾಯಕಿಯಾಗಿದ್ದು, ಮಯೂರಿ ತಂಗಿಯ ಪಾತ್ರದಲ್ಲಿ ನಟಿಸಿದ್ದಾರೆ.
ಟಗರು ಚಿತ್ರದಲ್ಲಿ ಖಡಕ್‌ ಪೊಲೀಸ್‌ ಆಫಿಸರ್‌ ಆಗಿ ಅಭಿಮಾನಿಗಳನ್ನು ರಂಜಿಸಿದ ಶಿವರಾಜ್‌ ಕುಮಾರ್‌ ರುಸ್ತುಂ ಸಿನಿಮಾದಲ್ಲಿ ಮತ್ತೆ ಕಾಪ್‌ ಆಗಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅವರ ಎದುರು ದಕ್ಷಿಣ ಭಾರತದ ಖ್ಯಾತ ಖಳ ನಟರು ನಟಿಸುತ್ತಿದ್ದಾರೆ.
ಅಣ್ಣಾವ್ರ ಹುಟ್ಟುಹಬ್ಬದಂದು ಸೆಟ್ಟೇರಲಿರುವ ಈ ಚಿತ್ರದಲ್ಲಿ ತಮಿಳಿನ ಖ್ಯಾತ ನಿರ್ದೇಶಕ,ಕಥೆಗಾರ ನಟ ಜೆ. ಮಹೇಂದ್ರನ್‌ ಮುಖ್ಯ ವಿಲನ್‌ ಆಗಿ ನಟಿಸುತ್ತಿದ್ದಾರೆ. ಇವರ ಜತೆ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಹೆಸರು ಮಾಡಿರುವ ನಟ ಹರೀಶ್‌ ಉತ್ತಮನ್‌ ಮತ್ತು ಹೊಸ ನಟ ಅರ್ಜುನ್‌ ಗೌಡ ಯಂಗ್‌ ವಿಲನ್‌ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. 
ಹರೀಶ್‌ ಉತ್ತಮನ್‌ ತೆಲುಗು, ತಮಿಳು ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇನ್ನು ಮಹೇಂದ್ರನ್‌ ಇತ್ತೀಚೆಗೆ ಬಿಡುಗಡೆಯಾದ ಥೆರಿಯಲ್ಲಿ ಖಡಕ್‌ ವಿಲನ್‌ ಆಗಿ ನಟಿಸಿದ್ದರು. ಅರ್ಜುನ್‌ ಗೌಡಗೆ ರುಸ್ತುಂ ಮೊದಲ ಚಿತ್ರ. ಟಗರು ಚಿತ್ರದಲ್ಲಿ ಎನ್‌ಕೌಂಟರ್‌ ಸ್ಪೆಷಲಿಸ್ಟ್‌ ನಟಿಸಿದ್ದ ಶಿವರಾಜ್‌ ಕುಮಾರ್‌ ರುಸ್ತುಂ ಚಿತ್ರದಲ್ಲಿ ಮತ್ತೊಮ್ಮೆ ಪೊಲೀಸ್‌ ಯೂನಿಫಾರ್ಮ್‌ ಧರಿಸಿದ್ದಾರೆ ಜತೆಗೆ ಬಹಳ ದಿನಗಳ ನಂತರ ಮೀಸೆಯನ್ನು ಬಿಟ್ಟಿದ್ದಾರೆ.
ರವಿವರ್ಮ ತೆಲುಗು, ಹಿಂದಿ ಕನ್ನಡ ಎಲ್ಲ ಚಿತ್ರರಂಗದಲ್ಲಿಯೂ ಸಾಹಸ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com