ಡಾ. ರಾಜ್ ಗೆ ಸ್ಟಂಟ್ ಮಾಸ್ಟರ್ ರವಿ ವರ್ಮ ಗೌರವ: 'ರುಸ್ತುಂ' ಮೋಶನ್ ಪೋಸ್ಟರ್ ಬಿಡುಗಡೆ

ಇಂದು ವರನಟ ಡಾ ರಾಜ್ ಕುಮಾರ್ ಅವರ 89 ನೆಯ ಜನ್ಮ ದಿನದಂದು ಸ್ಟಂಟ್ ಮಾಸ್ಟರ್ ಆಗಿದ್ದವರು ನಿರ್ದೇಶಕರಾಗಿ ಭಡ್ತಿ ಪಡೆದ ರವಿ ವರ್ಮಾ....
ರಾಜ್ ಜನ್ಮದಿನ: ಸ್ಟಂಟ್ ಮಾಸ್ಟರ್ ರವಿ ವರ್ಮಾರಿಂದ ರಾಜ್ ಸ್ಮರಣೆ
ರಾಜ್ ಜನ್ಮದಿನ: ಸ್ಟಂಟ್ ಮಾಸ್ಟರ್ ರವಿ ವರ್ಮಾರಿಂದ ರಾಜ್ ಸ್ಮರಣೆ
ಬೆಂಗಳೂರು: ಇಂದು ವರನಟ ಡಾ ರಾಜ್ ಕುಮಾರ್ ಅವರ 89 ನೆಯ ಜನ್ಮ ದಿನದಂದು ಸ್ಟಂಟ್ ಮಾಸ್ಟರ್ ಆಗಿದ್ದವರು ನಿರ್ದೇಶಕರಾಗಿ ಭಡ್ತಿ ಪಡೆದ ರವಿ ವರ್ಮಾ ತಮ್ಮ ಚೊಚ್ಚಲ ಚಿತ್ರ  ರುಸ್ತುಮ್ ಮೋಷನ್ ಪೋಸ್ಟರ್ ಬಿಡುಗಡೆಗೊಳಿಸಿದ್ದಾರೆ. 
ಚಿತ್ರದ ನಾಯಕರಾಗಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯವಿದೆ. "ರಾಜ್ ಕುಮಾರ್ ಎನ್ನುವ ಹೆಸರು ಸಿನೆಮಾಕ್ಕೆ ಸಮಾನಾರ್ಥಕವಾಗಿದೆ. ನಾನು ಸ್ಟಂಟ್ ನಡೆಸುವ ಮುನ್ನ ವರನಟನ ಆಶೀರ್ವಾದ ಬೇಡುತ್ತೇನೆ. ಪೋಸ್ಟರ್ ಬಿಡುಗಡೆಗೆ ಇದಕ್ಕಿಂತ ಉತ್ತಮ ದಿನವಿಲ್ಲ. ನಾನು ಭೇಟಿಯಾದ ಅತ್ಯುತ್ತಮ ವ್ಯಕ್ತಿಗಳಲ್ಲಿ ಅವರೂ ಒಬ್ಬರು. ನನ್ನ ಪೋಷಕರು  ನೀನು ಸಹ ರಾಜ್ ಅವರಂತೆ ಚೆನ್ನಾಗಿ ಬೆಳೆಯಬೇಕೆಂದು ಯಾವಾಗಲೂ ಹೇಳಿದ್ದರು" ರವಿ ವರ್ಮಾ ಹೇಳಿದ್ದಾರ್ತೆ.
ಹೊಸ ವರ್ಷ ಆಚಣೆಯಂತೆ ರಾಜ್ ಹುಟ್ಟಿದ ದಿನ ಹೊಸ ಪ್ರಯತ್ನ, ಕೆಲ್ಸ ಪ್ರಾರಂಭಿಸುವುದಕ್ಕೆ ಸೂಕ್ತ ದಿನ ಎನ್ನುವುದು ಅವರ ಅಭಿಪ್ರಾಯ.
ರುಸ್ತುಮ್ ಚಿತ್ರದಲ್ಲಿ ಶಿವರಾಜ್ ವಿಶೇಷ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದು ಎಕ್ಸ್ ಪ್ರೆಸ್ ಗೆ ಅವರ ಕೆಲ ಅಪರೂಪದ ಚಿತ್ರಗಳು ಸಿಕ್ಕಿದೆ. ಇನ್ನು ಯು ಟರ್ನ್ ಖಾಯ್ತಿಯ ಶ್ರದ್ದಾ ಶ್ರೀನಾಥ್ ಸಹ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಮಯೂರಿಯೊಡನೆ ಶ್ರದ್ದಾ ಇದೇ ಮೊದಲ ಬಾರಿಗೆ ತೆರೆ ಹಂಚಿಕೊಳ್ಳಲಿದ್ದಾರೆ. 
ಅರ್ಜುನ್ ಗೌಡ, ಹರೀಶ್ ಉಧಾಮನ್, ಜೆ. ಮಹೇಂದ್ರನ್ ಅಂತಹಾ ಕಲಾವೈದರು ಈ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು ಅನೂಪ್ ಸೀಳನ್ ಸಂಗೀತ ನೀಡಿದ್ದಾರೆ. ಚಿತ್ರಕ್ಕೆ ಮಹೇಂದ್ರ ವರ್ಮಾ ಛಾಯಾಗ್ರಹಣವಿದೆ.
ಕನ್ನಡದಲ್ಲಿ ಸ್ಟಂಟ್ ಮಾಸ್ಟರ್ ಆಗಿದ್ದ ರವಿ ವರ್ಮಾ ಈಗ ದಕ್ಷಿಣ ಭಾರತ, ಬಾಲಿವುಡ್ ನಲ್ಲಿ ಹೆಸರಾಗಿದ್ದಾರೆ. ಪವನ್ ಕಲ್ಯಾಣ್, ರಾಣಾ ದಗ್ಗುಪಾಟಿ, ವಿಕ್ರಮ್, ಸಲ್ಮಾನ್ ಕಾನ್, ಶಾರುಖ್ ಖಾನ್, ಅಜಯ್ ದೇವಗನ್, ಶಾಹಿದ್ ಕಪೂರ್ ಮತ್ತು ಟೈಗರ್ ಮುಂತಾದ ನಟರ ಚಿತ್ರಗಳು ಸೇರಿ 00 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅವರು  ದುಡಿದಿದ್ದಾರೆ. 
ರುಸ್ತುಮ್ ಚಿತ್ರವನ್ನು ಜಯಣ್ಣ ಕಂಬೈನ್ಸ್ ನಿರ್ಮಾಣ ಮಾಡುತ್ತಿದ್ದು ಮೇ ಮಧ್ಯಭಾಗದಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ.
ರಾಜ್ ಕುಮಾರ್ ಅವರ ಕುರಿತ ರವಿ ವರ್ಮಾ ಗೋಲ್ಡನ್ ಮೆಮೋರಿಸ್
ರವಿ ವರ್ಮಾ ಅವರಿಗೆ ರಾಜ್ ಕುಮಾರ್ ಅವರ ಕಡೆಯ ಚಿತ್ರ ಶಬ್ದವೇಧಿ ಯಲ್ಲಿ ಕೆಲ್ಸ ಮಾಡುವ ಅವಕಾಶ ದೊರಕಿತ್ತು. "ಅದು ನನ್ನ ವೃತ್ತಿಜೀವನದ ಆರಂಭಿಕ ಹಂತವಾಗಿತ್ತು. ಮೇರುನಟನೊಡನೆ ಕೆಲಸ ಮಾಡುವ ಅವಕಾಶ ದೊರಕಿದ್ದು ನನ್ನ ಪುಣ್ಯವೆಂದು ಭಾವಿಸುತ್ತೇನೆ" ಎನ್ನುವ ರವಿ ವರ್ಮಾ ತಾವು ರಾಜ್ ಕುಮಾರ್ ಅವರೊಂದಿಗಿರುವ ಚಿತ್ರವನ್ನು ಹಂಚಿಕೊಳ್ಳುತ್ತಾರೆ.
"ಕನ್ನಡ ಕಲಾವಿದರನ್ನು ರಾಜ್ ಹೇಗೆ ಪ್ರೋತ್ಸಾಹಿಸುತ್ತಿದ್ದರೆಂದು ನಾನು ಕಂಡಿದ್ದೇನೆ.ಸೆಟ್ ಗಳಲ್ಲಿ ರಾಜ್ ಕರ್ನಾಟಕ ಕಲಾವಿದರನ್ನು ಮತ್ತು ತಂತ್ರಜ್ಞರನ್ನು ಉತ್ತೇಜಿಸುತಿದ್ದರು. " ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com