ಟಗರು ಚಿತ್ರದ ಮತ್ತೊಂದು ಮೈಲಿಗಲ್ಲು: 25ನೇ ವಾರದತ್ತ ಸಿನಿಮಾ ಪ್ರದರ್ಶನ

ಸೂರಿ ನಿರ್ದೇಶನದ ಟಗರು ಸಿನಿಮಾ 25ನೇ ವಾರ ಪೂರೈಸುತ್ತಿರುವ ಸಂಭ್ರಮದಲ್ಲಿದೆ, ಮೈಸೂರಿನ ಶಾಂತಲಾ ಥಿಯೇಟರ್ ನಲ್ಲಿ ಪ್ರದರ್ಶನ ಕಾಣುತ್ತಿದ್ದು, ದಾಖಲೆ ನಿರ್ಮಿಸಲು ...
ಟಗರು ಸಿನಿಮಾ ಸ್ಟಿಲ್
ಟಗರು ಸಿನಿಮಾ ಸ್ಟಿಲ್
Updated on
ಬೆಂಗಳೂರು: ಇತ್ತೀಚೆಗೆ ಬಿಡುಗಡೆಯಾಗುತ್ತಿರುವ ಸಿನಿಮಾಗಳು ಒಂದು ಇಲ್ಲವೇ ಎರಡು ವಾರ ಪ್ರದರ್ಶನ ಕಾಣುವುದೇ ಕಷ್ಟ. ಇಂಥ ಸಮಯದಲ್ಲಿ ಶಿವರಾಜ್ ಕುಮಾರ್ ನಟಿಸಿರುವ ಟಗರು ಸಿನಿಮಾ 25ನೇ ವಾರ ಪೂರೈಸುತ್ತಿದೆ.
ಸೂರಿ ನಿರ್ದೇಶನದ ಟಗರು ಸಿನಿಮಾ 25ನೇ ವಾರ ಪೂರೈಸುತ್ತಿರುವ ಸಂಭ್ರಮದಲ್ಲಿದೆ, ಮೈಸೂರಿನ ಶಾಂತಲಾ ಥಿಯೇಟರ್ ನಲ್ಲಿ ಪ್ರದರ್ಶನ ಕಾಣುತ್ತಿದ್ದು, ದಾಖಲೆ ನಿರ್ಮಿಸಲು ಹೊರಟಿದೆ.
ನನ್ನ ವೃತ್ತಿ ಜೀವನದಲ್ಲಿ ನನ್ನ ಹಲವು ಸಿನಿಮಾಗಳು 25ನೇ ವಾರ ಪೂರೈಸಿವೆ, ಆದರೆ ಇತ್ತೀಚಿನ ಸಮಯದಲ್ಲಿ ಈ ಸಿನಿಮಾ ಇಷ್ಟು ದೀರ್ಘಸಮಯ ಓಡುತ್ತಿದೆ, ನನಗೆ ತುಂಬಾ ಸಂತಸವಾಗಿದೆ, ನಿರ್ದೇಶಕ ಸೂರಿ ಮತ್ತು ನಿರ್ಮಾಪಕ ಶ್ರೀಕಾಂತ್ ಅವರಿಗೆ ಎಲ್ಲಾ ಕ್ರೆಡಿಟ್ ಸಲ್ಲಬೇಕು, ಅವರಿಂದಲೇ ಟಗರು ಸಾಧ್ಯವಾದದ್ದು ಎಂದು ಶಿವರಾಜ್ ಕುಮಾರ್ ಹೇಳಿದ್ದಾರೆ.
ಚಿತ್ರಕಥೆ ಪ್ರೇಕ್ಷಕರಿಗೆ ಹತ್ತಿರವಾದದ್ದಾಗಿತ್ತು ಹೀಗಾಗಿ ಸಿನಿಮಾ ಯಶಸ್ಸು ಕಾಣಲು ಸಾಧ್ಯವಾಯಿತು,. ಇಲ್ಲಿ ನಾಯಕ, ನಾಯಕಿ ಅಥವಾ ಸೂಪರ್ ಸ್ಟಾರ್ ಎಂಬುದು ಗಣನೀಯ ಅಂಶವಲ್ಲ, ಒಟ್ಟಾರೆ ಕಥೆ ಹಾಗೂ ಸಿನಿಮಾದ ಪ್ರತಿಯೊಂದು ಪಾತ್ರಕ್ಕೂ ಮಹತ್ವ ನೀಡಲಾಗಿದೆ.
ನನ್ನ ಪಾತ್ರ ಹೊರತುಪಡಿಸಿ, ಡಾಲಿ ಪಾತ್ರಕ್ಕೂ ಅಷ್ಟೇ ಮಹತ್ವ ನೀಡಲಾಗಿದೆ, ಶಿವ, ಜಿರಲೆಗೂ ಕೂಡ ಸಿನಿಮಾದಲ್ಲಿ ಮಹತ್ವ ನೀಡಲಾಗಿದೆ, ಅದೇ ಸಿನಿಮಾದ ಸೌಂದರ್ಯ ಎಂದು ಹೇಳಿದ್ದಾರೆ.
ಇಂಥಹ ಮೈಲಿಗಲ್ಲು ಸಾಧ್ಯವಾಗಲು ಕಾರಣ ನಿರ್ಮಾಪಕರ ಆಸಕ್ತಿ ಕಾರಣ ಎಂದು ನಿರ್ದೇಶಕ ಸೂರಿ ಹೇಳಿದ್ದಾರೆ,.ಸಿನಿಮಾ ಬಿಡುಗಡೆಯಾದ ಮೊದಲನೇ ಹಾಗೂ 2ನೇ ವಾರದಲ್ಲಿ ಸಿನಿಮಾ ಬಗ್ಗೆ ಪ್ರೇಕ್ಷಕರನ್ನು ಕೇಳಲಾಗಿತ್ತು, 3ನೇ ವಾರದಲ್ಲಿ ಪ್ರೇಕ್ಷಕರು ಅದನ್ನೇ ರಿಪೀಟ್ ಮಾಡುತ್ತಿರುವುದಾಗಿ ಕಾಣಿಸಿತ್ತು, 25ನೇ ವಾರದಲ್ಲಿ ಪೋಸ್ಚರ್ ರಾಜ್ಯಾದ್ಯಂತ ಕಾಣಿಸುತ್ತಿರುವುದು ನನಗೆ ಮತ್ತಷ್ಟು ಸಂತಸ ತಂದಿದೆ.  ಇಂಥಹ ಮೈಲಿಗಲ್ಲು ಸಾಧ್ಯವಾದದ್ದು ನಿರ್ಮಾಪಕರ ಆಸಕ್ತಿಯಿಂದಾಗಿ ಮಾತ್ರ ಎಂದು ಸೂರಿ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com