ತಾಯಿಯಾಗುತ್ತಿರುವ ರಾಧಿಕಾ ಪಂಡಿತ್ ಶೇರ್ ಮಾಡಿದ ಸ್ಪೆಷಲ್ ಫೋಟೋ ವೈರಲ್

ಸ್ಯಾಂಡಲ್​ವುಡ್​ನ ರಾಕಿಂಗ್​ ಜೋಡಿ ಯಶ್​ ರಾಧಿಕಾ, ಕಳೆದ ತಿಂಗಳು ತಮ್ಮ ಮನೆಗೆ ಪುಟ್ಟ ಅತಿಥಿಯನ್ನು ಬರ ಮಾಡಿಕೊಳ್ಳುತ್ತಿರುವ ವಿಷಯವನ್ನು...
ರಾಧಿಕಾ ಪಂಡಿತ್
ರಾಧಿಕಾ ಪಂಡಿತ್
Updated on: 
ಬೆಂಗಳೂರು: ಸ್ಯಾಂಡಲ್​ವುಡ್​ನ ರಾಕಿಂಗ್​ ಜೋಡಿ ಯಶ್​ ರಾಧಿಕಾ, ಕಳೆದ ತಿಂಗಳು ತಮ್ಮ ಮನೆಗೆ ಪುಟ್ಟ ಅತಿಥಿಯನ್ನು ಬರ ಮಾಡಿಕೊಳ್ಳುತ್ತಿರುವ ವಿಷಯವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದರು.
ಇದೀಗ ಇದರ ಬೆನ್ನಲ್ಲೇ ರಾಧಿಕಾ ಯಶ್​ರೊಂದಿಗೆ ಫೋಸ್​ ನೀಡಿರುವ ಫೋಟೋವೊಂದನ್ನು ಸಾಮಾಜಿಕ ಜಾಲಾತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ಸಂತಸ ಹಂಚಿಕೊಂಡಿದ್ದಾರೆ.
2016ರ ಆಗಸ್ಟ್​ 12 ಕ್ಕೆ ಸರಿಯಾಗಿ ಎರಡು ವರ್ಷಗಳ ಹಿಂದೆ ಈ ಜೋಡಿ ಗೋವಾದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು, ಇದೀಗ ಎಂಗೇಜ್​ಮೆಂಟ್​ ಆಗಿ ಎರಡು ವರ್ಷಗಳಾಗುತ್ತಿರುವ ಖುಷಿಯಲ್ಲಿ ರಾಧಿಕಾ ಈ ಫೋಟೋ ಶೇರ್​ ಮಾಡಿಕೊಳ್ಳುತ್ತಿರುವುದಾಗಿ ತಮ್ಮ ಪೋಸ್ಟ್​ನಲ್ಲಿ ಬರೆದುಕೊಂಡಿದ್ದಾರೆ.ತಾಯಿಯಾಗುವ ಖುಷಿಯಲ್ಲಿರುವ ರಾಧಿಕಾ ತಮ್ಮ ಈ ಪೋಸ್ಟ್​ನಲ್ಲಿ 'ಬೇಬಿ ಬಂಪ್' ಬಗ್ಗೆಯೂ ಬರೆದುಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com