ಲೈಫ್ ಜೊತೆ... ನನ್ನ ನಿಜ ಬಣ್ಣ ಬಯಲು: ಹರಿಪ್ರಿಯಾ

ಸ್ಯಾಂಡಲ್ವುಡ್ ನಟಿ ಹರಿಪ್ರಿಯಾ ತಮ್ಮ ಅಭಿನಯದ ಲೈಫ್ ಜೊತೆ ಒಂದು ಸೆಲ್ಫಿ ಚಿತ್ರದ ಬಿಡುಗಡೆ ನಿರೀಕ್ಷಿಯಲ್ಲಿದ್ದು ಚಿತ್ರದ ಕುರಿತಂತೆ ಕೆಲ ವಿಷಯಗಳನ್ನು ಹಂಚಿಕೊಂಡಿದ್ದಾರೆ...
ಹರಿಪ್ರಿಯಾ
ಹರಿಪ್ರಿಯಾ
Updated on
ಸ್ಯಾಂಡಲ್ವುಡ್ ನಟಿ ಹರಿಪ್ರಿಯಾ ತಮ್ಮ ಅಭಿನಯದ ಲೈಫ್ ಜೊತೆ ಒಂದು ಸೆಲ್ಫಿ ಚಿತ್ರದ ಬಿಡುಗಡೆ ನಿರೀಕ್ಷಿಯಲ್ಲಿದ್ದು ಚಿತ್ರದ ಕುರಿತಂತೆ ಕೆಲ ವಿಷಯಗಳನ್ನು ಹಂಚಿಕೊಂಡಿದ್ದಾರೆ. 
ಸಾರಥಿ ಚಿತ್ರ ನಿರ್ದೇಶಿಸಿದ್ದ ದಿನಕರ್ ತೂಗುದೀಪ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಚಿತ್ರದ ಪ್ರತಿ ಪಾತ್ರವೂ ನಮ್ಮ ನಿಜಜೀವನವನ್ನು ಪ್ರತಿಬಿಂಬಿಸುವುದಿಲ್ಲ. ಆದರೆ ಕೆಲವೊಂದು ಪಾತ್ರವೂ ನಿಜಜೀವನಕ್ಕೆ ಹತ್ತಿರವಾಗಿರುತ್ತದೆ ಎಂದು ಹರಿಪ್ರಿಯಾ ಹೇಳಿದ್ದಾರೆ. 
ಚಿತ್ರದ ಚಿತ್ರೀಕರಣದ ವೇಳೆ ಪ್ರತಿಯೊಂದು ಕ್ಷಣವೂ ನಾವು ನಗೆಗಡಲಲ್ಲಿ ತೆಲುತ್ತಿದ್ದೇವು. ನಾನು ಅಂತರ್ಮುಖಿಯಾಗಿದ್ದೇನೆ ಎಂದು ಜನರು ಭಾವಿಸುತ್ತಾರೆ. ಆದರೆ ನಾನು ಎಷ್ಟು ಸಂತೋಷದಿಂದ ಪ್ರೀತಿಸುತ್ತೇನೆಂಬುದು ನನ್ನ ಹತ್ತಿರದವರಿಗೆ ಮಾತ್ರ ತಿಳಿದಿದೆ. ಆದ್ದರಿಂದ ನಾನು ಈ ಚಿತ್ರದಲ್ಲಿ ಆರಾಮವಾಗಿ ಅಭಿನಯಿಸಿದ್ದೇನೆ ಎಂದರು. 
ಚಿತ್ರದಲ್ಲಿ ನನ್ನ ಪಾತ್ರ ರಶ್ಮಿ ಅಲಿಯಾಸ್ ರಾಶ್, ಮುಗ್ಧ, ಸೂಕ್ಷ್ಮ ಮತ್ತು ಪ್ರಬುದ್ಧ ಹುಡುಗಿಯ ಪಾತ್ರ. ಹೆಚ್ಚು ಬಡಬಡಾಯಿಸುವ ಪಾತ್ರ. ನಾನು ಚಿತ್ರೀಕರಣದ ವೇಳೆ ಜಾಸ್ತಿ ಮಾತನಾಡಿದ್ದೆ ಎಂಬುದು ಚಿತ್ರದ ಡಬ್ಬಿಂಗ್ ಮಾಡುವ ಸಮಯದಲ್ಲಿ ತಿಳಿಯಿತು. ಈ ಪಾತ್ರವನ್ನು ಈ ಹಿಂದೆ ಯಾವು ನಿರ್ದೇಶಕರು ನನಗೆ ಕೊಟ್ಟಿರಲಿಲ್ಲ ಎಂದು ಹರಿಪ್ರಿಯಾ ಹೇಳಿದ್ದಾರೆ. 
ವೈಯಕ್ತಿಕವಾಗಿ ಹರಿಪ್ರಿಯಾ ದೇಶ ಸುತ್ತುವುದನ್ನು ಹೆಚ್ಚು ಪ್ರೀತಿಸುತ್ತಾಳೆ. ಲೈಫ್ ಜೊತೆ ಒಂದು ಸೆಲ್ಫಿ ಚಿತ್ರ ನನಗೆ ಈ ಅವಕಾಶವನ್ನು ನೀಡಿತು. ಚಿತ್ರೀಕರಣದ ವೇಳೆ ನಾವು ಗೋವಾ, ಉಡುಪಿ ಮತ್ತು ಮುಳ್ಳಯನಗಿರಿ ಸೇರಿದಂತೆ ಹಲವು ಹೊಸ ಸ್ಥಳಗಳನ್ನು ಅನ್ವೇಷಿಸಲು ನಮಗೆ ಅವಕಾಶ ನೀಡಿತು. ಇನ್ನು ರಿಷಿಕೇಷದಲ್ಲಿ ಮೊದಲ ಬಾರಿಗೆ ರಿವರ್ ರ್ಯಾಫ್ಟಿಂಗ್ ಮಾಡಿದ್ದು ನನಗೆ ನೀರು ಕಂಡರೆ ತುಂಬಾಾ ಭಯಾ ಇತ್ತು. ಆ ಭಯ ಈ ಚಿತ್ರದ ಮೂಲಕ ಕಳೆದು ಹೋಗಿದೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com