ಮತ್ತೊಬ್ಬ ಹೊಸ ನಿರ್ದೇಶಕನ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ನಟನೆ

ನಟ ರಕ್ಷಿತ್ ಶೆಟ್ಟಿ ಮತ್ತೊಮ್ಮೆ ಹೊಸ ನಿರ್ದೇಶಕರೊಂದಿಗೆ ಕೆಲಸ ಮಾಡಲು ಹೊರಟಿದ್ದಾರೆ. ಚೊಚ್ಚಲ...
ರಕ್ಷಿತ್ ಶೆಟ್ಟಿ, ರಾಹುಲ್ ಪಿ ಕೆ
ರಕ್ಷಿತ್ ಶೆಟ್ಟಿ, ರಾಹುಲ್ ಪಿ ಕೆ
Updated on: 

ನಟ ರಕ್ಷಿತ್ ಶೆಟ್ಟಿ ಮತ್ತೊಮ್ಮೆ ಹೊಸ ನಿರ್ದೇಶಕರೊಂದಿಗೆ ಕೆಲಸ ಮಾಡಲು ಹೊರಟಿದ್ದಾರೆ. ಚೊಚ್ಚಲ ನಿರ್ದೇಶಕರೊಡನೆ ರಕ್ಷಿತ್ ಶೆಟ್ಟಿ ಮುಂದಿನ ಚಿತ್ರದಲ್ಲಿ ನಟಿಸಲಿದ್ದಾರೆ. ರಾಹುಲ್ ಪಿ ಕೆ ಚಿತ್ರದ ನಿರ್ದೇಶಕರು.ಅವನೇ ಶ್ರೀಮನ್ನಾರಾಯಣ ಮತ್ತು 777 ಚಾರ್ಲಿಯಾದ ನಂತರ ರಾಹುಲ್ ಅವರ ಚಿತ್ರದಲ್ಲಿ ನಟಿಸಲಿದ್ದಾರೆ.

ರಕ್ಷಿತ್ ಶೆಟ್ಟಿ ಅವರ ಉಳಿದವರು ಕಂಡಂತೆ ಚಿತ್ರದಲ್ಲಿ ರಾಹುಲ್ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ನಂತರ ರಿಕ್ಕಿ ಮತ್ತು ಕಿರಿಕ್ ಪಾರ್ಟಿಯಲ್ಲಿ ಕೂಡ ಜೊತೆಯಾಗಿದ್ದರು.
ನಿರ್ದೇಶಕರು ಪ್ರಸ್ತುತ ಚಿತ್ರದ ಕಥೆ ಬರೆಯುವ ಕೆಲಸದಲ್ಲಿ ನಿರತರಾಗಿದ್ದು ಉಳಿದವರು ಕಂಡಂತೆ ಚಿತ್ರದ ರಿಚಿ ಪಾತ್ರವನ್ನು ಆಧರಿಸಿಕೊಂಡು ಚಿತ್ರ ತಯಾರಾಗಲಿದೆ. ಚಿತ್ರದ ಶೀರ್ಷಿಕೆ ಇನ್ನೂ ನಿಗದಿಯಾಗಿಲ್ಲ ಎನ್ನುತ್ತಾರೆ ರಕ್ಷಿತ್ ಶೆಟ್ಟಿ.

ಇದುವರೆಗೆ ವಾಸ್ತು ಪ್ರಕಾರ ಹೊರತುಪಡಿಸಿ ಬೇರೆಲ್ಲಾ ಚಿತ್ರಗಳಲ್ಲಿ ಹೊಸ ನಿರ್ದೇಶಕರ ಚಿತ್ರಗಳಲ್ಲಿ  ರಕ್ಷಿತ್ ಶೆಟ್ಟಿ ನಟಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com