ಬಿಬಿಎಂಪಿ ಹೊಸ ಜಾಹೀರಾತು ನೀತಿ: ಸಿನಿಮಾ ಪೋಸ್ಟರ್, ಬ್ಯಾನರ್ ಗಳಿಗೆ ಅವಕಾಶವಿಲ್ಲ!

ಎಲ್ಲಾ ಬಗೆಯ ಫ್ಲೆಕ್ಸ್ ಹಾಗೂ ಬಂಟಿಂಗ್ ಗಳ ನಿಷೇಧ ನಾಡಿದ್ ಅಬಳಿಕ ಬಿಬಿಎಂಪಿ (ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ) ಮಂಗಳವಾರ ಹೊಸ ಜಾಹೀರಾತು ನೀತಿಯನ್ನು ಅನುಮೋದಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಬೆಂಗಳೂರು: ಎಲ್ಲಾ ಬಗೆಯ ಫ್ಲೆಕ್ಸ್ ಹಾಗೂ ಬಂಟಿಂಗ್ ಗಳ ನಿಷೇಧ ನಾಡಿದ್ ಅಬಳಿಕ ಬಿಬಿಎಂಪಿ (ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ) ಮಂಗಳವಾರ ಹೊಸ ಜಾಹೀರಾತು ನೀತಿಯನ್ನು ಅನುಮೋದಿಸಿದೆ.
ಈ ಹೊಸ ನೀತಿಯನುಸಾರ ನಗರದಾದ್ಯಂತ ಸಿನಿಮಾ ಪೋಸ್ಟರ್ ಹಾಗೂ ಜಾಹೀರಾತಿಗೆ ಅವಕಾಶವಿರುವುದಿಲ್ಲ ಎಂದು ತಿಳಿಸಿದೆ.
ಹೊಸ ಜಾಹೀರಾತು ನೀತಿಯು ಬಸ್ ನಿಲ್ದಾನ, ಸ್ಕೈವಾಕ್, ಮತ್ತು ಸಾರ್ವಜನಿಕ ಖಾಸಗಿ ಪಾಲುದಾರಿಕೆಯಲ್ಲಿ ನಿರ್ಮಿಸಲ್ಪಟ್ಟ ಸಾರ್ವಜನಿಕ ಶೌಚಾಲಯಗಳನ್ನು ಹೊರತುಪಡಿಸಿ ಬೇರೆಲ್ಲಿಯೂ ವಾಣಿಜ್ಯೋದ್ದೇಶಿತ ಜಾಹೀರಾತನ್ನು ಪ್ರದರ್ಶಿಸುವಂತಿಲ್ಲ ಎಂದು ಹೇಳಿದ್ದು ಅಂಗಡಿಯ ನಾಮಫಲಕಗಳಲ್ಲಿ ಸಹ ವೈಯುಕ್ತಿಕ ಉತ್ಪನ್ನಗಳ ಜಾಹೀರಾತನ್ನು ಪ್ರದರ್ಶಿಸುವಂತಿಲ್ಲ. ಆದರೆ ಸಾರ್ವಜನಿಕ ಕಲ್ಯಾಣ ಯೋಜನೆಗಳು, ಸರ್ಕಾರದ ಯೊಜನೆಗಳ ಜಾಹೀರಾತಿಗೆ ಮಾತ್ರವೇ ವಿನಾಯಿತಿ ಇದೆ.
ಸಿನಿ ಜಾಹೀರಾತು, ಬೋರ್ಜ಼್ಡಿಂಗ್, ಪೋಸ್ಟರ್ ಗಳಿಗೆ ಸಹ ಅವಕಾಶವಿರುವುದಿಲ್ಲ ಎಂದು ಎಕ್ಸ್ ಪ್ರೆಸ್ ಜತೆ ಮಾತನಾಡಿದ ಬಿಬಿಎಂಪಿ ಕಮಿಷನರ್ ಎನ್. ಮಂಜುನಾಥ ಪ್ರಸಾದ್ ಹೇಳಿದ್ದಾರೆ.
ಇದಕ್ಕೆ ಮುನ್ನ ಮೇಯರ್ ಎನ್ ಸಂಪತ್ ರಾಜ್ ಕರ್ನಾಟಕ ಫಿಲ್ಮ್ ಚೇಂಬರ್ ಆಫ್ ಕಾಮರ್ಸ್ ಡಿಜಿಟಲ್ ಮೋಷನ್ ಪಬ್ಲಿಸಿಟಿ ಸೇರಿದಂತೆ ಸಿನಿಮಾ ಜಾಹೀರಾತುಗಳನ್ನು ಮೀಸಲಾದ ಜಾಗದಲ್ಲಿ ಪ್ರದರ್ಶನಕ್ಕೆ ಅವಕಾಶ ಕಲ್ಪಿಸುವ ಕುರಿತು ಭರವಸೆ ನಿಡಿದ್ದರು. 
ಮೋಷನ್ ಪೋಸ್ಟ್ ಗಳಿಗೆ ಅವಕಾಶವಿದೆ, ಆದರೆ ಅದು ದುಬಾರಿಯಾಗಿರಲಿದೆ. ಒಂದು ವೇಳೆ ಅದೇನಾದರು ಕಾರ್ಯಗತವಾದರೆ ನಾವದಕ್ಕೆ ಅವಕಾಶ ನಿಡಲಿದ್ದೇವೆ.ಇದು ಆಕರ್ಷಣೀಯವಾಗಿರಲಿದ್ದು ವ್ಯವಹಾರವನ್ನು ಉತ್ತೇಜಿಸಲಿದೆ ಎಂದು ಮಂಜುನಾಥ್ ಹೇಳಿದ್ದಾರೆ. ಆದರೆ ಸಧ್ಯದ ಹೊಸ ಜಾಹೀರಾತು ನೀತಿಯಲ್ಲಿ ಇಂತಹಾ ಜಾಹೀರಾತಿನ ಕುರಿತಂತೆ ಯಾವ ಉಲ್ಲೇಖವಿಲ್ಲ.
ಚಿತ್ರೋದ್ಯಮದ ಮಿಶ್ರ ಪ್ರತಿಕ್ರಿಯೆ
ಇನ್ನು ಸಿನಿಮಾ ಜಾಹೀರಾತಿಗೆ ಅವಕಾಶವಿಲ್ಲದ ಬಿಬಿಎಂಪಿ ಜಾಹೀರಾತು ನೀತಿಯ ಕುರಿತು ಚಿತ್ರೋದ್ಯಮದಲ್ಲಿ ಮಿಶ್ರ ಪ್ರತಿಕ್ರಿಯೆ ಕೇಳಿ ಬಂದಿದೆ. ಎರಡು ವಾರಗಳ ಹಿಂದೆ ಬಿಡುಗಡೆಯಾದ ಕನ್ನಡ ಚಿತ್ರ ಅಯೋಗ್ಯ ನಿರ್ದೇಶಕ ಎಸ್. ಮಹೇಶ್ ಕುಮಾರ್ ""ನಮ್ಮ ಎಲ್ಲ ವೀಕ್ಷಕರು ಇಂಟರ್ ನೆಟ್ ರೇಟಿಂಗ್ ಪರಿಶೀಲಿಸಿ ಚಿತ್ರ ವೀಕ್ಷಣೆಗೆ ಬರುವುದಿಲ್ಲ.ಸಿನಿಮಾ ಪೋಸ್ಟರ್ ಗಳನ್ನು ನೋಡಿದ ಬಳಿಕ ಬರುತ್ತಾರೆ. ಇದರಲ್ಲಿ ಮುಖ್ಯವಾಗಿ ಕ್ಯಾಬ್ ಚಾಲಕರು, ವಾಹನ ಚಾಲಕರು, ಇದನ್ನು ನೊಡಿ ಬರುತ್ತಾರೆ. ಪೋಸ್ಟರ್ ಗಳಲ್ಲಿ ಚಿತ್ರಮಂದಿರದ ವಿವರ, ಚಿತ್ರ ಪ್ರದರ್ಶನದ ಸಮಯಗಳು ಸಹ ಇರಲಿದೆ.ನಗರವನ್ನು ಸ್ವಚ್ಛವಾಗಿಡಲು ನಾವು ಅಡ್ಡಿಯಾಗುವುದಿಲ್ಲ ಆದರೆ ಸಿನಿಮಾ ಪೋಸ್ಟರ್ ಗಳ ಪ್ರದರ್ಶನಕ್ಕೆ ನಿಗದಿತ ಜಾಗವನ್ನು ನಿಡಬೇಕು"ಎಂದಿದ್ದಾರೆ.
ನಿರ್ದೇಶಕರಾದ ತರುಣ್ ಸುಧೀರ್ ಬಿಬಿಎಂಪಿ ನೀತಿಗೆ ಸ್ವಾಗತ ಕೋರಿದ್ದಾರೆ.. "ಡಿಜಿಟಲ್ ಮಾಧ್ಯಮದ ಯುಗದಲ್ಲಿ, ಫೇಸ್ ಬುಕ್, ಟ್ವಿಟರ್, ಇನ್ಸ್ಟಾಗ್ರಾಂ, ವಾಟ್ಸ್ ಅಪ್  ಸೇರಿದಂತೆ ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಬಳಸಿಕೊಂಡು ಸಿನಿಮಾ ಪ್ರಚಾರವನ್ನು ಮಾಡಬಹುದಾಗಿದೆ. ಅಗ್ಗದ ಇಂರ್ ನೆಟ್ ಸೇವೆ ಲಭ್ಯವಾಗುವ ಹಿನ್ನೆಲೆಯಲ್ಲಿಸಿನಿಮಾ ಪ್ರಚಾರವನ್ನು ಸುಲಭವಾಗಿ ಮಾಡಲಿಕ್ಕೆ ಸಾಧ್ಯವಿದೆ. ಪೋಸ್ಟರ್ ಗಳಿಗಾಗಿ ಹೆಚ್ಚು ಹಣ ವ್ಯವವಾಗುತ್ತದೆ.ಸಾಮಾಜಿಕ ಮಾಧ್ಯಮಕ್ಕೆ ಹೋಲಿಸಿದರೆ ಪೋಸ್ಟರ್ ಗಳಷ್ಟು ವ್ಯಾಪಕವಾಗಿಲ್ಲ.ಕಾಲಕ್ಕೆ ತಕ್ಕಂತೆ ನಾವೂ ಬದಲಾಗಬೇಕು ಎಂದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com