ಕೆಜಿಎಫ್ ಚಿತ್ರ ಬಿಡುಗಡೆಗೆ ಇನ್ನು 20 ದಿನಗಳಷ್ಟೇ ಬಾಕಿ ಇದ್ದು, ಕೆಜಿಎಫ್ ಚಿತ್ರಕ್ಕಾಗಿ ಎದುರು ನೋಡುತ್ತಿರುವವರ ಕುತೂಹಲ ಹೆಚ್ಚಾಗುತ್ತಿದೆ. ಚಿತ್ರಕ್ಕಾಗಿ ಎದುರುನೋಡುತ್ತಿರುವವರಿಗೆ ಮತ್ತೊಂದು ಅಪ್ ಡೇಟ್ ಇದ್ದು, ಡಿ.3 ರಂದು ಚಿತ್ರದ ಧ್ವನಿ ಸುರುಳಿಯ ಮೊದಲ ಹಾಡು ಬಿಡುಗಡೆಯಾಗಲಿದೆ.
5 ಭಾಷೆಗಳಲ್ಲಿಯೂ ಮೊದಲ ಹಾಡು ಬಿಡುಗಡೆಯಾಗಲಿದ್ದು, ಚಿತ್ರದ ಆಡಿಯೋ ಹಕ್ಕುಗಳನ್ನು ಲಹರಿ ಸಂಸ್ಥೆ 3.6 ಕೋಟಿ ರೂಪಾಯಿಗಳಿಗೆ ಪಡೆದಿದೆ. ರವಿ ಬಸ್ರೂರ್ 3-4 ಹಾಡುಗಳನ್ನು ಸಂಯೋಜಿಸಿದ್ದು, ಯಾವ ಹಾಡು ಮೊದಲು ಬಿಡುಗಡೆಯಾಗಲಿದೆ ಎಂಬ ಕುತೂಹಲ ಹಾಗೆಯೇ ಮುಂದುವರೆದಿದೆ.
ಯಶ್ ಹಾಗೂ ತಮನ್ನಾ ಭಾಟಿಯಾ ನೃತ್ಯ ಇರುವುದು ಮ್ಯೂಸಿಕ್ ಆಲ್ಬಮ್ ನ ಮತ್ತೊಂದು ವಿಶೇಷತೆಯಾಗಿದ್ದು 1970 ರ ಪರೋಪಕಾರಿ ಚಿತ್ರದ ಜೋಕೆ ನಾನು ಬಳ್ಳಿಯ ಮಿಂಚು ಹಾಡಿಗೆ ಹೆಜ್ಜೆ ಹಾಕಿದ್ದಾರೆ.