'ಆರೆಂಜ್ 'ಚಿತ್ರದ ಶೂಟಿಂಗ್ ಕ್ಷಣಗಳು ರಜೆಯಲ್ಲಿ ಮಜಾ ಮಾಡಿದ ಅನುಭವ ನೀಡಿತು: ಪ್ರಿಯಾ ಆನಂದ್

ಬ್ಲಾಕ್ ಬುಸ್ಟರ್ 'ರಾಜ್ ಕುಮಾರ 'ಚಿತ್ರದ ನಂತರ ನಟಿ ಪ್ರಿಯಾ ಆನಂದ್ ಅಭಿನಯದ ಎರಡನೇ ಚಿತ್ರ 'ಆರೆಂಜ್ ' ಚಿತ್ರ ಈ ವಾರ ಬಿಡುಗಡೆಯಾಗುತ್ತಿದ್ದು, ತನ್ನ ಸಿನಿ ಹಾದಿ ಕುರಿತಂತೆ ಸಿಟಿ ಎಕ್ಸ್ ಪ್ರೆಸ್ ಜೊತೆಯಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.
ಪ್ರಿಯಾ ಆನಂದ್
ಪ್ರಿಯಾ ಆನಂದ್
Updated on

ಬ್ಲಾಕ್ ಬುಸ್ಟರ್  'ರಾಜ್ ಕುಮಾರ 'ಚಿತ್ರದ ನಂತರ ನಟಿ ಪ್ರಿಯಾ ಆನಂದ್ ಅಭಿನಯದ ಎರಡನೇ ಚಿತ್ರ  'ಆರೆಂಜ್ ' ಚಿತ್ರ  ಈ ವಾರ ಬಿಡುಗಡೆಯಾಗುತ್ತಿದ್ದು, ತನ್ನ ಸಿನಿ  ಹಾದಿ ಕುರಿತಂತೆ  ಸಿಟಿ  ಎಕ್ಸ್ ಪ್ರೆಸ್ ಜೊತೆಯಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ಸಂತೋಷ್ ಆನಂದ್ ನಿರ್ದೇಶನದ ರಾಜಕುಮಾರ್  ಚಿತ್ರದ ಗೀತೆಗಳು, ಪ್ರೇಕ್ಷಕರಿಗೆ ತಲುಪಿದ ರೀತಿ ಅಸಾಧಾರಣವಾಗಿತ್ತು.  ತಾತ, ಅಜ್ಜಿ ಕೂಡಾ ಈ ಚಿತ್ರ ಮೆಚ್ಚಿಕೊಂಡಿದ್ದರು. ರಾಜಕುಮಾರ ಚಿತ್ರದಿಂದಲೇ  ಯಾವ ರೀತಿಯ ಚಿತ್ರ ಆಯ್ಕೆ ಮಾಡಿಕೊಳ್ಳಬೇಕೆಂಬ ಬಗ್ಗೆ ಕಲಿತಿರುವುದಾಗಿ ತಿಳಿಸಿದ ಪ್ರಿಯಾ ಆನಂದ್. ಆರೆಂಜ್ ಚಿತ್ರಕ್ಕೆ ಸಹಿ ಹಾಕುವಾಗ ಖಂಡಿತಾ ಅದನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ ಎಂಬ ನಂಬಿಕೆಯಿತ್ತು. ಅದಕ್ಕೆ ಬೇಕಾದ ಎಲ್ಲಾ ಅಂಶಗಳು ಚಿತ್ರಗಳಿವೆ ಎಂದು ಹೇಳಿದರು.

ಗಣೇಶ್ ಅಭಿನಯದ ಜೂಮ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ತಮ್ಮ ಪರಿಚಯವಾಗಿದ್ದಾಗಿ ಹೇಳುವ ಪ್ರಿಯಾ ಆನಂದ್,  ರಜೆಯಲ್ಲಿದ್ದಂತೆ  ಆರೆಂಜ್  ಚಿತ್ರದ ಚಿತ್ರೀಕರಣ ಮುಗಿಸಿರುವುದಾಗಿ ಹೇಳಿದ್ದಾರೆ. ಎಲ್ಲಾ ಪ್ರೇಕ್ಷಕರಿಗೂ ಇಷ್ಟವಾಗುವಂತಹ ಅಂಶಗಳು ಚಿತ್ರದಲ್ಲಿದೆ.  ಚಿತ್ರ ಉತ್ತಮವಾಗಿ ಮೂಡಿಬಂದಿದೆ ಎಂದು ತಿಳಿಸಿದ್ದಾರೆ.

ಪ್ರಶಾಂತ್ ಬಿಂದಾಸ್ ನಿರ್ದೇಶಕ ಎನ್ನುವ ಪ್ರಿಯಾ, ಗಣೇಶ್ ತಾವು ಅಭಿನಯಿಸುವ ಚಿತ್ರಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತಾರೆ. ಪುನೀತ್ ಅವರಂತೆ ಗಣೇಶ್ ಕೂಡಾ ಸ್ನೇಹದಿಂದ ಇರುತ್ತಾರೆ. ಗಣೇಶ್   ಇದ್ದಾಗ ಎಲ್ಲಾರ ಮುಖದಲ್ಲೂ ನಗು ಇರುತ್ತದೆ. ಚಿತ್ರೀಕರಣ ವೇಳೆಯಲ್ಲಿ ತುಂಬಾ ಕ್ರಿಯಾಶೀಲರಾಗಿರುತ್ತಾರೆ ಎಂದರು.

ಸಮಾಜಕ್ಕೆ ಉತ್ತಮ ಸಂದೇಶ ನೀಡುವ  ಮಹಿಳಾ ಕೇಂದ್ರಿತ , ವಿಷಯಾಧಾರಿತ  ಚಿತ್ರಗಳಿಗೆ ತಾವೂ ಮೊದಲ ಆದ್ಯತೆ ನೀಡುವುದಾಗಿ ಹೇಳುವ ಪ್ರಿಯಾ ಆನಂದ್ ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com