ಅಂಬರೀಶ್ ಅವರು ಸಾಯುವ ಮುನ್ನವೇ ಯಶ್ ಗೆ ಹುಟ್ಟಲಿರುವ ಮಗುವಿಗಾಗಿ 1.5 ಲಕ್ಷ ರುಪಾಯಿ ಬೆಲೆಯ ತೊಟ್ಟಿಲನ್ನು ಬುಕ್ ಮಾಡಿದ್ದರು. ಈ ವಿಚಾರ ಅಂಬರೀಶ್ ಹೊರತುಪಡಿಸಿ ಯಾರಿಗೂ ಗೊತ್ತಿರಲಿಲ್ಲ. ಸುಮಲತಾ ಅವರಿಗೆ ಕೂಡ ಈ ವಿಷಯ ತಿಳಿದಿರಲಿಲ್ಲ. ಅಂಬರೀಶ್ ಬಳಸುತ್ತಿದ್ದ ಮೊಬೈಲ್ ಗೆ ಮೊನ್ನೆ ತೊಟ್ಟಿಲು ರೆಡಿ ಎಂಬ ಸಂದೇಶ ಬಂದಿದೆ. ನಂತರ ಈ ಬಗ್ಗೆ ಸುಮಲತಾ ವಿಚಾರಿಸಿದಾಗ ಅಂಬರೀಶ್ ಅವರು ಯಶ್ ದಂಪತಿಗೆ ಹುಟ್ಟುವ ಮಗುವಿಗಾಗಿ ತೊಟ್ಟಿಲು ಆರ್ಡರ್ ಮಾಡಿದ್ದರು ಎಂದು ತಿಳಿದುಬಂದಿದೆ.