ಪೈಲ್ವಾನ್ ಸಿನಿಮಾ ಸ್ಟಿಲ್
ಸಿನಿಮಾ ಸುದ್ದಿ
ಬೇಸಿಗೆ ರಜೆಗೆ ಪೈಲ್ವಾನ್ ರಿಲೀಸ್!
2019ರ ಮಾರ್ಚ್ ತಿಂಗಳ ಅಂತ್ಯಕ್ಕೆ ಸುದೀಪ್ ನಟನೆಯ ಪೈಲ್ವಾನ್ ಸಿನಿಮಾ ರಿಲೀಸ್ ಮಾಡಲು ಚಿತ್ರತಂಡ ಸಿದ್ಧತೆ ನಡೆಸುತ್ತಿದೆ. ...
ಬೆಂಗಳೂರು: 2019ರ ಮಾರ್ಚ್ ತಿಂಗಳ ಅಂತ್ಯಕ್ಕೆ ಸುದೀಪ್ ನಟನೆಯ ಪೈಲ್ವಾನ್ ಸಿನಿಮಾ ರಿಲೀಸ್ ಮಾಡಲು ಚಿತ್ರತಂಡ ಸಿದ್ಧತೆ ನಡೆಸುತ್ತಿದೆ.
ನಿರ್ದೇಶಕ ಎಸ್.ಕೃಷ್ಣ ಆರ್ ಆರ್ ಆರ್ ಮೋಷನ್ ಪಿಕ್ಚರ್ಸ್ ಅಡಿಯಲ್ಲಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ, ಮಾತಿನ ಭಾಗದ ಚಿತ್ರೀಕರಣ ಮುಗಿದಿದೆ,
ಹೈದರಾಬಾದ್ ನಿಂದ ನಟ ಸುದೀಪ್ ವಾಪಾಸಗಿದ್ದಾರೆ. ಇಂದಿನಿಂದ ಮೈಸೂರಿನಲ್ಲಿ ಶೂಟಿಂಗ್ ಆರಂಭಿಸಲಿದೆ, ಮೈಸೂರಿನಲ್ಲಿರುವ ಸುದೀಪ್ ತೆಲುಗಿನ ಚಿರಂಜೀವಿ ನಟನೆಯ ಸೈ ರಾ ನರಸಿಂಹ ರೆಡ್ಡಿ ಸಿನಿಮಾದಲ್ಲೂ ಅಭಿನಯಿಸುತ್ತಿದ್ದಾರೆ. ಸುದೀಪ್ ಹೈದರಾಬಾದ್ ನಿಂದ ಮೈಸೂರಿಗೆ ಓಡಾಡುತ್ತಿದ್ದಾರೆ.
ಈಗಾಗಲೇ ಸಿನಿಮಾದ ಶೇ, 90 ರಷ್ಟು ಭಾಗ ಶೂಟಿಂಗ್ ಮುಗಿದಿದೆ,ಇನ್ನೂ ಮೂರು ಹಾಡುಗಳು ಹಾಗೂ ಫೈಟ್ ಬಾಕಿ ಉಳಿದಿದೆ ಎಂದು ನಿರ್ದೇಶಕರು ಹೇಳಿದ್ದಾರೆ, ಇದಾದ ನಂತರ ಲೋಕೇಶನ್ ಹುಡುಕಾಟ ನಡೆಸಲಿದ್ದಾರೆ, ಟಾಕೀ ಪೋರ್ಶನ್ ಸಂಪೂರ್ಣಗೊಂಡ ನಂತರ ಬಿಡುಗಡೆಯ ಬಗ್ಗೆ ನಿರ್ಧರಿಸಲಾಗುವುದು ಎಂದು ಹೇಳಿದ್ದಾರೆ.
7 ಭಾಷೆಗಳಲ್ಲಿ ಏಕಕಾಲದಲ್ಲಿ ರಿಲೀಸ್ ಆಗಲಿದೆ, ದಕ್ಷಿಣ ಭಾಷೆಯ 4 ಭಾಷೆಗಳ ಜೊತೆಗೆ ಹಿಂದಿ, ಮರಾಠಿ, ಮತ್ತು ಬೋಜ್ ಪುರಿಯಲ್ಲೂ ರಿಲೀಸ್ ಆಗಲಿದೆ, ಈ ಸಿನಿಮಾದಲ್ಲಿ ಸುದೀಪ್ ಬಾಕ್ಸರ್ ಆಗಿ ನಟಿಸಿದ್ದಾರೆ. ಸಿನಿಮಾಗೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ರಾಮ ಲಕ್ಷ್ಮಣ ಸಹೋದರರು ಪೈಲ್ವಾನ್ ಸಿನಿಮಾದಲ್ಲಿ ಫೈಟ್ ಮಾಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ