ಅಸ್ಸಾಮಿ ಭಾಷಾ ಚಿತ್ರ 'ವಿಲೇಜ್ ರಾಕ್ ಸ್ಟಾರ್ಸ್' ಆಸ್ಕರ್ ಪ್ರಶಸ್ತಿ ರೇಸ್ ನಿಂದ ಹೊರಕ್ಕೆ

ಆಸ್ಕರ್ ಪ್ರಶಸ್ತಿ 2019 ರೇಸ್ ನಿಂದ ಭಾರತದ ಬಹು ನಿರೀಕ್ಷಿತ ಚಿತ್ರ 'ವಿಲ್ಲೇಜ್ ರಾಕ್ ಸ್ಟಾರ್ಸ್' ಚಿತ್ರ ಹೊರ ಬಿದ್ದಿದ್ದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ವಾಷಿಂಗ್ಟನ್: ಆಸ್ಕರ್ ಪ್ರಶಸ್ತಿ 2019 ರೇಸ್ ನಿಂದ ಭಾರತದ ಬಹು ನಿರೀಕ್ಷಿತ ಚಿತ್ರ 'ವಿಲ್ಲೇಜ್ ರಾಕ್ ಸ್ಟಾರ್ಸ್' ಚಿತ್ರ ಹೊರ ಬಿದ್ದಿದ್ದೆ.
ಅಂತಾರಾಷ್ಟ್ರೀಯ ಚಲನಚಿತ್ರರಂಗದ ಉನ್ನತ ಪ್ರಶಸ್ತಿ ಎಂದೇ ಕರೆಯಲಾಗುವ ಆಸ್ತರ್ ಪ್ರಶಸ್ಕಿಗೆ ನಾಮ ನಿರ್ದೇಶನವಾಗಿದ್ದ ಭಾರತದ ಏಕೈಕ ಚಿತ್ರ ಎಂಬ ಕೀರ್ತಿಗೆ ಭಾಜನವಾಗಿದ್ದ ವಿಲೇಜ್ ರಾಕ್ ಸ್ಟಾರ್ಸ್ ಚಿತ್ರ ನಿರೀಕ್ಷೆ ಹುಸಿಗೊಳಿಸಿ ಪ್ರಶಸ್ತಿ ರೇಸ್ ನಿಂದ ಹೊರಬಿದ್ದಿದೆ. 
ಇನ್ನು ಆಸ್ಕರ್ ಪ್ರಶಸ್ತಿ ರೇಸ್ ನಲ್ಲಿ ಇದೀಗ ಒಟ್ಟು 87 ಚಿತ್ರಗಳಿದ್ದು, What Will People Say (ಪಾಕಿಸ್ತಾನ), "Birds of Passage" (Colombia), "The Guilty" (Denmark), "Never Look Away" (Germany), "Shoplifters" (Japan), "Ayka" (Kazakhstan), "Capernaum" (Lebanon), "Roma" (Mexico), "Cold War" (Poland) and "Burning" (South Korea)  "Roma" (Mexican) ಚಿತ್ರಗಳು ಪ್ರಶಸ್ತಿ ಗೆಲ್ಲುವ ಭರವಸೆ ಮೂಡಿಸಿವೆ. 
ಈ ಪೈಕಿ ಪಾಕಿಸ್ತಾನದ What Will People Say ಚಿತ್ರದಲ್ಲಿ ಬಹುತೇಕ ಭಾರತೀಯ ನಟ-ನಟಿಯರು ಅಭಿನಯಿಸಿದ್ದು, ಪಾಕಿಸ್ತಾನದ ಮೂಲ ನಿವಾಸಿಗಳು ಇತರೆ ದೇಶಗಳಲ್ಲಿ ವಲಸಿಗರಾಗಿ ಅನುಭವಿಸುವ ಕಥೆಯನ್ನು ಈ ಚಿತ್ರ ಒಳಗೊಂಡಿದೆ.
ವಿಲೇಜ್ ರಾಕ್ ಸ್ಟಾರ್ಸ್ ಚಿತ್ರ ಅಸ್ಸಾಮಿನ ಚಿತ್ರವಾಗಿದ್ದು. ಚಿತ್ರವನ್ನು ರಿಮಾ ದಾಸ್ ಅವರು ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ನಿರ್ದೇಶಕರಾದ ರಿಮಾದಾಸ್ ಮತ್ತು ಜಯಾದಾಸ್ ಬಂಡವಾಳ ಹೂಡಿದ್ದು, ಫ್ಲೈಯಿಂಗ್ ರಿವರ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಚಿತ್ರದವನ್ನು ಹಂಚಿಕೆ ಮಾಡಲಾಗಿದೆ. ವಿಲ್ಲೇಜ್ ರಾಕ್ ಸ್ಟಾರ್ಸ್ ಚಿತ್ರ ಈಗಾಗಲೇ ಹತ್ತು ಹಲವು ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡಿದ್ದು, ಹಲವಾರು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಬಾಚಿಕೊಂಡಿದೆ. 
ಇತ್ತೀಚೆಗೆ ನಡೆದ 2017ನೇ ಸಾಲಿನ ಟೊರಾಂಟೋ ಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಿದ್ದ ಈ ಚಿತ್ರ ಅತ್ಯುತ್ತಮ ಪ್ರಾದೇಶಿಕ ಚಿತ್ರ ಎಂಬ ಹಿರಿಮೆಗೆ ಪಾತ್ರವಾಗಿತ್ತು. ಅಂತೆಯೇ 65ನೇ ರಾಷ್ಟ್ರೀಯ ಚಲನ ಚಿತ್ರೋತ್ಸವ ಪ್ರಶಸ್ತಿಗೂ ಪಾತ್ರವಾಗಿತ್ತು. ಇದಲ್ಲದೆ ಈ ಚಿತ್ರ ಅತ್ಯುತ್ತಮ ಬಾಲನಟಿ, ಅತ್ಯುತ್ತಮ ಪ್ರಾದೇಶಿಕ ಶಬ್ಧ ಸಂಕಲನ ಮತ್ತು ಅತ್ಯುತ್ತಮ ಸಂಕಲನ ಪ್ರಶಸ್ತಿಗಳಿಗೂ ಭಾಜನವಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com