ಬೆಂಗಳೂರು: ಕನ್ನಡದ ಬಹು ನಿರೀಕ್ಷೆಯ ಬಿಗ್ ಬಜೆಟ್ ಚಿತ್ರ ‘ಕುರುಕ್ಷೇತ್ರ’ ಕ್ಕೆ ಸೆಸ್ಸಾರ್ ಮಂಡಳಿ ಪ್ರಮಾಣ ಪತ್ರ ನೀಡಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ 50ನೇ ಚಿತ್ರ ಕುರುಕ್ಷೇತ್ರವಾಗಿದ್ದು ಪ್ರಾದೇಶಿಕ ಸೆನ್ಸಾರ್ ಮಂಡಳಿಂದ ಚಿತ್ರಕ್ಕೆ 'ಯು/ಎ' ಪ್ರಮಾಣ ಪತ್ರ ನೀಡಿದೆ.
ನಾಗಣ್ಣ ನಿರ್ದೇಶನದ ಈ ಸಿನಿಮಾದಲ್ಲಿ ದರ್ಶನ್ ದುರ್ಯೋಧನನ ಪಾತ್ರದಲ್ಲಿ ನಟಿಸಿದ್ದಾರೆ. ಒಟ್ಟಾರೆ ಸಿನಿಮಾ 3 ಗಂಟೆ ಐದು ನಿಮಿಷ ಪ್ರದರ್ಶನ ಕಾಣಲಿದೆ, ಈ ವರ್ಷಾಂತ್ಯದಲ್ಲಿ ಸಿನಿಮಾದ ಸಂಪೂರ್ಣ ಶೂಟಿಂಗ್ ಮುಗಿಯಲಿದೆ. 3ಡಿ ವರ್ಸನ್ ನ ಪೋಸ್ಟ್ ಪ್ರೊಡಕ್ಷನ್ ಕೆಲಸ ಮಾತ್ರ ಬಾಕಿ ಉಳಿದಿದೆ.,
ಕನ್ನಡಿಗರನ್ನು ಅಗಲಿದ ರೆಬಲ್ ಸ್ಟಾರ್ ಅಂಬರೀಶ್ ಭೀಷ್ಮನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಸಹ ಕುರುಕ್ಷೇತ್ರದ ತಾರಾಗಣದಲ್ಲಿದ್ದಾರೆ.