ಯಶ್ ಫೇಸ್‍ಬುಕ್  ಲೈವ್
ಯಶ್ ಫೇಸ್‍ಬುಕ್ ಲೈವ್

'ಕೆಜಿಎಫ್' ಬಿಡುಗಡೆ ಬಳಿಕ ಮೊದಲ ಬಾರಿಗೆ ಎಫ್‍ಬಿ ಲೈವ್ ಬಂದ ರಾಕಿಂಗ್ ಸ್ಟಾರ್ ಹೇಳಿದ್ದೇನು?

ರಾಕಿಂಗ್ ಸ್ಟಾರ್ ಯಶ್ ಅಭಿನಯದ "ಕೆಜಿಎಫ್ ಐದು ಭಾಷೆಗಳಲ್ಲಿ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇದೀಗ ಚಿತ್ರದ ಯಶಸ್ವಿ ಪ್ರದರ್ಶನದಿಂದ ಖುಷಿಯಾಗಿರುವ ನಟ ಯಶ್ ತಾವು....
Published on
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ "ಕೆಜಿಎಫ್ ಐದು ಭಾಷೆಗಳಲ್ಲಿ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇದೀಗ ಚಿತ್ರದ ಯಶಸ್ವಿ ಪ್ರದರ್ಶನದಿಂದ ಖುಷಿಯಾಗಿರುವ ನಟ ಯಶ್ ತಾವು ಫೇಸ್‍ಬುಕ್  ಲೈವ್ ಬಂದಿದ್ದು ಪ್ರೇಕ್ಷಕರಿಗೆ ಅಭಿನಂದನೆ ಸಲ್ಲಿಸಿದ್ದಲ್ಲದೆ ಅಭಿಮಾನಿಗಳಿಗೆ ಕೆಲ ಸಲಹೆಗಳನ್ನು ನೀಡಿದ್ದಾರೆ.
ವಿಶೇಷವೆಂದರೆ ಫೇಸ್‍ಬುಕ್ ಲೈವ್ ಮಾಡುವಾಗ ಎಲ್ಲಾ ಐದು ಭಾಷೆಗಳಲ್ಲಿ ಚಿತ್ರ ನೋಡಿದ್ದ ಆಯಾ ರಾಜ್ಯದ ಅಭಿಮಾನಿ ಪ್ರೇಕ್ಷಕರು ತಮ್ಮ ಮಾತೃಭಾಷೆಯಲ್ಲಿ ಪ್ರಶ್ನೆಗಳನ್ನು ಕೇಳಿದ್ದಾರೆ. ಅದಕ್ಕೆ ನಟ ಯಶ್ ಸಹ ಅದೇ ಭಾಷೆಗಳಲ್ಲಿ ಉತ್ತರಿಸಿದ್ದಾರೆ.
ಚಿತ್ರವನ್ನು ಸಿನಿಮಾ ಮಂದಿರಗಳಲ್ಲೇ ಹೋಗಿ ನೋಡಿ, ಎಲ್ಲಿಯೂ ಪೈರಸಿ ಮಾಡಬೇಡಿ ಎಂದಿರುವ ಯಶ್ ಪೈರಸಿ ತಡೆಗಾಗಿ ಟೀಂ ಒಂದನ್ನು ರಚಿಸಲಾಗಿದೆ.ಪೈರಸಿ ವೀಡಿಯೋವನ್ನು ತಕ್ಷಣ ಗುರುತಿಸಿ ಡಿಲೀಟ್ ಮಾಡಲಾಗುತ್ತದೆ ಎಂದಿದ್ದಾರೆ.
ಇನ್ನು ಅಭಿಮಾನಿಗಳು ದೊಡ್ಡ ದೊಡ್ಡ ಕಟೌಟ್ ಗಳನ್ನು ನಿರ್ಮಿಸಿ ಅದಕ್ಕೆ ಹಾರ ಹಾಕುವ ಸಮಯದಲ್ಲಿ ಜಾಗೃತೆ ವಹಿಸಿ ಎಂದು ನಟ ಯಶ್ ಅಭಿಮಾನಿಗಳಿಗೆ ತಿಳುವಳಿಕೆ ಹೇಳಿದ್ದಾರೆ.
ನಾವು ಸಿನಿಮಾ ನಿರ್ಮಾಣ ಮಾಡಿ ನಿಮ್ಮ ಮುಂದಿರಿಸಿದ್ದೇವೆ, ನೀವು ಅದನ್ನು ದೊಡ್ಡ ಎತ್ತರಕ್ಕೆ ತೆಗೆದುಕೊಂಡು ಹೋಗಿದ್ದೀರಿ, ನಿಮಗೆ ನನ್ನ ಹೃದಯಪೂರ್ವಕ ಧನ್ಯವಾದ ಎಂದು ನಟ ಲೈವ್ ಮೂಲಕ ಅಭಿಮಾನಿಗಳಿಗೆ ಧನ್ಯವಾದ ಹೇಳಿದ್ದಾರೆ. ಅಲ್ಲದೆ ಸಿನಿಮಾಗಾಗಿ ಕೆಲಸ ಮಾಡಿದ್ದ ಕಲಾವಿದರು, ತಂತ್ರಜ್ಞರು, ವಿತರಕರಿಗೆ ಸಹ ನಟ ಇದೇ ವೇಳೆ ಧನ್ಯವಾದ ಸಮರ್ಪಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com