ಭಟ್ರು ಹಾಡಿನ ಮೊದಲ ಸಾಲು ಕಿಕ್ ಕೊಡುತ್ತೆ; ಪಂಚತಂತ್ರ ಚಿತ್ರದ ಹಾಡು ನಾಳೆ ಬಿಡುಗಡೆ!

ಪಂಚತಂತ್ರ ಚಿತ್ರಕ್ಕಾಗಿ ನಿರ್ದೇಶಕ ಯೋಗರಾಜ್ ಭಟ್ 'ಶೃಂಗಾರದ ಹೊಂಗೆಮರ ಹೂ ಬಿಟ್ಟಿದೆ' ಅಂತ ಹಾಡೊಂದನ್ನು ಬರೆದಿದ್ದು ಈ ಹಾಡನ್ನು ಖ್ಯಾತ ಗಾಯಕ ವಿಜಯ್ ಪ್ರಕಾಶ್...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ಪಂಚತಂತ್ರ ಚಿತ್ರಕ್ಕಾಗಿ ನಿರ್ದೇಶಕ ಯೋಗರಾಜ್ ಭಟ್ 'ಶೃಂಗಾರದ ಹೊಂಗೆಮರ ಹೂ ಬಿಟ್ಟಿದೆ' ಅಂತ ಹಾಡೊಂದನ್ನು ಬರೆದಿದ್ದು ಈ ಹಾಡನ್ನು ಖ್ಯಾತ ಗಾಯಕ ವಿಜಯ್ ಪ್ರಕಾಶ್ ಹಾಡಿದ್ದಾರೆ. ನಾಳೆ ಹಾಡಿನ ವಿಡಿಯೋ ಬಿಡುಗಡೆಯಾಗುತ್ತಿದ್ದು ಈ ಹಾಡಿನ ಮೂಲಕ ಭಟ್ರು ಏನು ಮೋಡಿ ಮಾಡಿದ್ದಾರೆ ಅಂತ ತಿಳಿಯಲಿದೆ. 
ಪಂಚತಂತ್ರ ಚಿತ್ರವನ್ನು ಯೋಗರಾಜ್ ಭಟ್ ನಿರ್ದೇಶಿಸುತ್ತಿದ್ದಾರೆ. ಬಹುತೇಕ ಹೊಸ ಪ್ರತಿಭೆಗಳ ದಂಡೆ ಈ ಚಿತ್ರದಲ್ಲಿದೆ. ಚಿತ್ರದ ಮೊದಲ ವಿಡಿಯೋ ಸಾಂಗ್ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಡಿಸೆಂಬರ್ 25ರಂದು ಬಿಡುಗಡೆಯಾಗುತ್ತಿದೆ.
ಶೃಂಗಾರದ ಹೊಂಗೆಮರ ಹೂ ಬಿಟ್ಟಿದೆ ಎಂದು ಹಾಡು ಆರಂಭವಾಗಲಿದೆ. ಒಟ್ಟಿನಲ್ಲಿ ಶೃಂಗಾರದ ರಸಮಯ ಸವಿರುಚಿಯನ್ನು ಯೋಗರಾಜ್ ಭಟ್ ಅವರು ಅಭಿಮಾನಿಗಳಿಗೆ ಉಣಬಡಿಸಲಿದ್ದು ಹಾಡಿನತ್ತ ಇಡೀ ಸ್ಯಾಂಡಲ್ವುಡ್ ಪ್ರೇಮಿಗಳ ಚಿತ್ರ ನೆಟ್ಟಿದೆ. ಚಿತ್ರಕ್ಕೆ ವಿ ಹರಿಕೃಷ್ಣ ಸಂಗೀತ ಸಂಯೋಜಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com