ಸಿನಿಮಾ ಸುದ್ದಿ
ಹಿಂದಿಯಲ್ಲಿ ರಾಜಾಹುಲಿ ಬ್ಲಾಕ್ ಬಸ್ಟರ್; ಯೂಟ್ಯೂಬ್‌ನಲ್ಲಿ 1 ಕೋಟಿಗೂ ಹೆಚ್ಚು ವೀಕ್ಷಣೆ, ಸಿಡಿದೆದ್ದ ಕೆ.ಮಂಜು!
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಸ್ಯಾಂಡಲ್ವುಡ್ ನ ಬ್ಲಾಕ್ ಬಸ್ಟರ್ ರಾಜಾಹುಲಿ ಚಿತ್ರವನ್ನು ಕಿಡಿಗೇಡಿಗಳು ಹಿಂದಿಯಲ್ಲಿ ವಾಯ್ಸ್ ಡಬ್ ಮಾಡಿ ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಿದ್ದು...
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಸ್ಯಾಂಡಲ್ವುಡ್ ನ ಬ್ಲಾಕ್ ಬಸ್ಟರ್ ರಾಜಾಹುಲಿ ಚಿತ್ರವನ್ನು ಕಿಡಿಗೇಡಿಗಳು ಹಿಂದಿಯಲ್ಲಿ ವಾಯ್ಸ್ ಡಬ್ ಮಾಡಿ ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಿದ್ದು ಬರೋಬ್ಬರಿ 1 ಕೋಟಿಗೂ ಅಧಿಕ ಜನ ಚಿತ್ರವನ್ನು ವೀಕ್ಷಿಸಿದ್ದಾರೆ.
ರಾಜಾಹುಲಿ ಚಿತ್ರಕ್ಕೆ ತೆಲುಗು ಹಾಗೂ ತಮಿಳಿನಲ್ಲಿ ಬಹು ಬೇಡಿಕೆ ಇತ್ತು. ಆದರೆ ಇಲ್ಲಿಯವರೆಗೂ ನಿರ್ಮಾಪಕ ಕೆ. ಮಂಜು ಅವರು ಯಾರಿಗೂ ರೈಟ್ಸ್ ಕೊಟ್ಟಿರಲಿಲ್ಲ. ಸದ್ಯ ಕೆಜಿಎಫ್ ಚಿತ್ರದ ಯಶಸ್ಸಿನ ನಂತರ ಇತರ ಭಾಷೆಗಳಿಗೆ ಡಬ್ಬಿಂಗ್ ಮಾಡುವ ಉದ್ದೇಶ ಮಂಜು ಅವರಿಗಿತ್ತು. ಆದರೆ ಕಳೆದ ಆರು ತಿಂಗಳ ಹಿಂದೆಯೇ ಯಾರೋ ಕಿಡಿಗೇಡಿಗಳು ಹಿಂದಿಗೆ ವಾಯ್ಸ್ ಡಬ್ ಮಾಡಿ ದಿ ಮೂವಿಸ್ ಎಂಟರ್ಟೈನ್ಮೆಂಟ್ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆ ಮಾಡಿದ್ದಾರೆ.
ಕಳೆದ ಆರು ತಿಂಗಳಲ್ಲಿ ರಾಜಾಹುಲಿ ಚಿತ್ರ ಬರೋಬ್ಬರಿ 11,561,695 ಕೋಟಿ ವೀಕ್ಷಣೆ ಕಂಡಿದೆ. ಇನ್ನು ಈ ಬಗ್ಗೆ ಬೇಸರಗೊಂಡಿರುವ ಮಂಜು ಅವರು ಇದರಿಂದ ನಿರ್ಮಾಪಕನಾದ ನನಗೆ ಅನ್ಯಾಯವಾಗಿದೆ. ಯಾರು ಯೂಟ್ಯೂಬ್ ಮೂಲಕ ಹರಿಬಿಟ್ಟಿದ್ದಾರೆ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೈಬರ್ ಕ್ರೈ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಇದರಿಂದ ನನಗೆ 8 ರಿಂದ 9 ಕೋಟಿ ರುಪಾಯಿ ನಷ್ಟವಾಗಿದೆ. ಇದರಲ್ಲಿ ಯಾರ ಕೈವಾಡವಿದ್ದರೂ ಅವರಿಗೆ ತಕ್ಕ ಶಿಕ್ಷೆಯಾಗಬೇಕು. ಕನ್ನಡ ಚಿತ್ರರಂಗಕ್ಕೆ ಈ ರೀತಿ ಅನ್ಯಾಯವಾಗುತ್ತಿದೆ ಇದನ್ನು ತಡೆಗಟ್ಟಬೇಕು ಎಂದು ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ