ದರ್ಶನ್ ರ 51ನೇ ಚಿತ್ರಕ್ಕೆ ತನ್ಯಾ ಹೊಪೆ ಮತ್ತೊಬ್ಬ ನಾಯಕಿ?

ನಟ ದರ್ಶನ್ ಅವರ 51ನೇ ಚಿತ್ರಕ್ಕೆ ಸೂಕ್ತ ಆಕರ್ಷಕ ಶೀರ್ಷಿಕೆಯಿಡಲು ನಿರ್ದೇಶಕ ಪೊನ್ ಕುಮಾರ್ ಮತ್ತು...
ದರ್ಶನ್-ತನ್ಯಾ ಹೊಪೆ
ದರ್ಶನ್-ತನ್ಯಾ ಹೊಪೆ
Updated on
ನಟ ದರ್ಶನ್ ಅವರ 51ನೇ ಚಿತ್ರಕ್ಕೆ ಸೂಕ್ತ ಆಕರ್ಷಕ ಶೀರ್ಷಿಕೆಯಿಡಲು ನಿರ್ದೇಶಕ ಪೊನ್ ಕುಮಾರ್ ಮತ್ತು ಚಿತ್ರತಂಡ ಯೋಚನೆಯಲ್ಲಿ ತೊಡಗಿದ್ದು ಇನ್ನೊಂದೆಡೆ ಈ ತಿಂಗಳ ಮಧ್ಯಭಾಗದಿಂದ ಚಿತ್ರದ ಶೂಟಿಂಗ್ ಆರಂಭವಾಗಲಿದೆ.
ಶೈಲಜಾ ನಾಗ್ ಮತ್ತು ಬಿ.ಸುರೇಶ್ ನಿರ್ಮಾಣದ ಚಿತ್ರದಲ್ಲಿ ಇಬ್ಬರು ಹಿರೋಯಿನ್ ಗಳು ಇರಲಿದ್ದಾರೆ. ಒಬ್ಬರು ರಶ್ಮಿಕಾ ಮಂದಣ್ಣ ಆದರೆ ಮತ್ತೊಬ್ಬ ನಟಿಯ ಹೆಸರನ್ನು ಕುತೂಹಲ ಮೂಡಿಸಲು ಚಿತ್ರತಂಡ ನಿರ್ಧರಿಸಿದೆ.
ಆದರೆ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವದಂತಿಗಳ ಪ್ರಕಾರ ಇನ್ನೊಬ್ಬ ನಟಿ ತನ್ಯಾ ಹೊಪೆ. ಸಿನಿಮಾ ಶೂಟಿಂಗ್ ಆರಂಭವಾಗುವ ಹೊತ್ತಿಗೆ ಮತ್ತೊಬ್ಬ ನಾಯಕಿಯ ಹೆಸರನ್ನು ಚಿತ್ರತಂಡ ಬಹಿರಂಗಪಡಿಸಲಿದೆ. ಮಂಗಳೂರು ಮೂಲದ ತನ್ಯಾ ಹೊಪೆ 2015ರಲ್ಲಿ ಮಿಸ್ ಇಂಡಿಯಾ ಸ್ಪರ್ಧಾಳುವಾಗಿದ್ದರು. ಉಪೇಂದ್ರ ಅವರ ಹೋಂ ಮಿನಿಸ್ಟರ್ ಚಿತ್ರದಲ್ಲಿ ನಾಯಕಿಯಾಗಿ ಆಗಮಿಸುವ ಮೂಲಕ ಇತ್ತೀಚೆಗೆ ಸುದ್ದಿಯಾಗಿದ್ದರು.
ತನ್ಯಾ ಹೊಪೆ ಈಗಾಗಲೇ ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಇದೀಗ ದರ್ಶನ್ ಸಿನಿಮಾದಲ್ಲಿ ಕನ್ನಡಕ್ಕೆ ಬಂದರೆ ಖಂಡಿತಾ ಅವರ ವೃತ್ತಿಜೀವನದಲ್ಲಿ ಮೈಲಿಗಲ್ಲು ಎನ್ನಬಹುದು. 
ಇನ್ನು ಸುನಿಲ್ ಕುಮಾರ್ ದೇಸಾಯಿ ಅವರ ಉದ್ಗರ್ಷ ಸಿನಿಮಾದಲ್ಲಿ ಕೂಡ ತನ್ಯಾ ಅಭಿನಯಿಸುತ್ತಿದ್ದಾರೆ. ತಮಿಳಿನಲ್ಲಿ ಅರುಣ್ ವಿಜಯ್ ಅವರ ತಡಮ್ ಚಿತ್ರದಲ್ಲಿ ತನ್ಯಾ ಅಭಿನಯಿಸುತ್ತಿದ್ದಾರೆ. 
ದರ್ಶನ್ ಅವರ 51ನೇ ಚಿತ್ರಕ್ಕೆ ವಿ.ಹರಿಕೃಷ್ಣ ಅವರ ಸಂಗೀತ ಮತ್ತು ಶ್ರೀಶ ಕುಡುವಳ್ಳಿ ಅವರ ಛಾಯಾಗ್ರಹಣವಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com