ಪ್ಯಾಡ್ ಮ್ಯಾನ್ ಗೆ ಪಾಕ್ ನಲ್ಲಿ ನಿಷೇಧ, ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ
ಖ್ಯಾತ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಭಿನಯದ ಪ್ಯಾಡ್ ಮ್ಯಾನ್ ಚಿತ್ರಕ್ಕೆ ಪಾಕಿಸ್ತಾನದಲ್ಲಿ ನಿಷೇಧ ಹೇರಿರುವುದನ್ನು ವಿರೋಧಿಸಿ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ನವದೆಹಲಿ: ಖ್ಯಾತ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಭಿನಯದ ಪ್ಯಾಡ್ ಮ್ಯಾನ್ ಚಿತ್ರಕ್ಕೆ ಪಾಕಿಸ್ತಾನದಲ್ಲಿ ನಿಷೇಧ ಹೇರಿರುವುದನ್ನು ವಿರೋಧಿಸಿ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ಅಗ್ಗದ ದರದ ಸ್ಯಾನಿಟರಿ ಪ್ಯಾಡ್ ಗಳ ತಯಾರಕನೋರ್ವನ ಸುತ್ತ ಜರಗುವ ಕಥಾ ಹಂದರವನ್ನು ಹೊಂದಿರುವ ಪ್ಯಾಡ್ ಮ್ಯಾನ್ ಚಿತ್ರ ಮಹಿಳೆಯರ ಮೂಲಭೂತ ಸಮಸ್ಯೆಗಳ ಕುರಿತು ಬೆಳಕು ಚೆಲ್ಲುತ್ತದೆ. ಇಂತಹ ಚಿತ್ರವನ್ನು ನಿಷೇಧಿಸಿರುವುದು ಪಾಕಿಸ್ತಾನಿ ಮಹಿಳೆಯರ ಆಕ್ರೋಶಕ್ಕೆ ಕಾರಣವಾಗಿದೆ. ಸ್ವತಃ ಪಾಕಿಸ್ತಾನ ಸರ್ಕಾರದ ವಿರುದ್ಧ ಪಾಕ್ ಮಹಿಳೆಯರೇ ಆಕ್ರೋಶ ವ್ಯಕ್ತಪಡಿಸಿದ್ದು, ಸರ್ಕಾರದ ನಿರ್ಧಾರವನ್ನು ಒಕ್ಕೋರಲಿನಿಂದ ವಿರೋಧಿಸಿದ್ದಾರೆ.
ಟ್ವಿಟರ್ ನಲ್ಲಿ ಈ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದ್ದು, ಐ ಸಪೋರ್ಟ್ ಪ್ಯಾಡ್ ಮ್ಯಾನ್ (#ISupportPadman) ಎಂಬ ಹ್ಯಾಶ್ ಟ್ಯಾಗ್ ನೊಂದಿಗೆ ಪಾಕ್ ಸರ್ಕಾರಕ್ಕೆ ಛೀಮಾರಿ ಹಾಕಲಾಗುತ್ತಿದೆ. ಪಾಕಿಸ್ತಾನದ ಮಹಿಳಾ ರಾಜಕಾರಣಿಗಳು, ನಟಿಯರು ಹಾಗೂ ಪತ್ರಕರ್ತರು ಈ ಬಗ್ಗೆ ತಮ್ಮ ತಮ್ಮ ಟ್ವಿಟರ್ ಖಾತೆಯಲ್ಲಿ ಸಂದೇಶ ಟೈಪಿಸಿ ಶೇರ್ ಮಾಡುತ್ತಿದ್ದಾರೆ.
ಚಿತ್ರ ಪಾಕಿಸ್ತಾನಿ ಸಂಪ್ರದಾಯ ಮತ್ತು ಸಂಸ್ಕೃತಿಗೆ ವಿರೋಧವಾಗಿ ಎಂಬ ಕಾರಣ ನೀಡಿ ಸರ್ಕಾರ ಚಿತ್ರದ ಮೇಲೆ ನಿಷೇಧ ಹೇರಲಾಗಿತ್ತು. ಇದನ್ನು ವಿರೋಧಿಸಿ ಟ್ವಿಟರ್ ನಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಇನ್ನು ಅತ್ತ ಚಿತ್ರಕ್ಕೆ ಟ್ವಿಟರ್ ನಲ್ಲಿ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ಇತ್ತ ಸ್ಪಷ್ಟನೆ ನೀಡಿರುವ ಪಾಕ್ ಸರ್ಕಾರ ಚಿತ್ರ ಪಾಕಿಸ್ತಾನಿ ಸೆನ್ಸಾರ್ ಮಂಡಳಿ ಮುಂದೆ ಪ್ರದರ್ಶನವಾಗಿ ಪ್ರಮಾಣ ಪತ್ರ ಪಡೆದಿಲ್ಲ. ಹೀಗಾಗಿ ಚಿತ್ರ ಬಿಡುಗಡೆಗೆ ಅನುಮತಿ ನೀಡಿಲ್ಲ ಎಂದು ಟ್ವೀಟ್ ಮಾಡಿದೆ.
"Against our traditions & culture" Oh well, coz women don't menstruate here... What stupid people sitting at Censor Board ! #PadMan must be allowed in Pakistan ! https://t.co/S7PUfBV9ak
Banning PadMan in Pakistan is another one of those illogical things that simply affect the business of cinemas in Pakistan. Menstruation is a fact of life, and bringing it to mainstream consciousness is neither immoral nor un- Islamic.
Insecurity, illiteracy & double standards of #Pakistani filmmakers who're okay with dirty raunchy item numbers but consider "unislamic" to film a social awareness topic of #menstruation on #WomenEmpowerment Censor board,