
ಮುಂಬೈ: ಮಲಯಾಳಂ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ನಟಿಸಿರುವ ಒರು ಅದಾರ್ ಲವ್ ಸಿನಿಮಾದ ಮಾಣಿಕ್ಯ ಮಲರಯಾ ಪೂವಿ ಹಾಡು ಭಾರೀ ಸದ್ದು ಮಾಡುತ್ತಿದ್ದಂತೆ ಈ ಬಗ್ಗೆ ಅಪಸ್ವರ ಕೂಡ ಎದ್ದಿದೆ. ಹಾಡಿನಲ್ಲಿ ಮುಸಲ್ಮಾನರ ಭಾವನೆಗಳಿಗೆ ಧಕ್ಕೆ ತರಲಾಗಿದೆ ಎಂದು ಆರೋಪಿಸಿ ದೂರು ದಾಖಲಾಗಿದೆ.
ಫಾರೂಕ್ ನಗರ ಪ್ರದೇಶದ ಯುವಕರ ಗುಂಪೊಂದು ಹೈದರಾಬಾದಿನ ಫಲಕ್ನುಮಾ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಪೊಲೀಸರು ಬರಹದ ಮೂಲಕ ದೂರನ್ನು ಸ್ವೀಕರಿಸಿದ್ದು ತನಿಖೆ ನಡೆಸುತ್ತಿದ್ದಾರೆ.
ಎಎನ್ಐ ಸುದ್ದಿಸಂಸ್ಥೆಯಲ್ಲಿ ಬಂದಿರುವ ದೂರಿನ ಪ್ರಕಾರ, ಫಲಕ್ನುಮಾ ಎಸಿಪಿ ಸೈಯದ್ ಫೈಯಾಜ್, ಮುಂಬರುವ ಚಿತ್ರ ಮಾಣಿಕ್ಯ ಮಲರಯಾ ಪೂರ್ವಿ ಚಿತ್ರದ ಹಾಡುಗಳ ಸಾಹಿತ್ಯದಲ್ಲಿ ಮುಸಲ್ಮಾನರ ಭಾವನೆಗಳಿಗೆ ಧಕ್ಕಯುಂಟುಮಾಡಲಾಗಿದೆ ಎಂದು ದೂರು ಬಂದಿದೆ ಎಂದಿದ್ದಾರೆ. ದೂರಿನ ಜೊತೆ ಸಾಕ್ಷಿಯ ವಿಡಿಯೊವನ್ನು ಸಲ್ಲಿಸಿಲ್ಲ ಹೀಗಾಗಿ ನಾವು ವಿಡಿಯೊವನ್ನು ಕೂಡ ನೀಡುವಂತೆ ಕೇಳಿದ್ದೇವೆ. ಎಫ್ಐಆರ್ ದಾಖಲಾಗಿಲ್ಲ ಎಂದಿದ್ದಾರೆ.
ಮಾಣಿಕ್ಯ ಮಲರಯಾ ಪೂವಿ ಹಾಡನ್ನು ವಿನೀತ್ ಶ್ರೀನಿವಾಸನ್ ಹಾಡಿದ್ದು ಶಾನ್ ರೆಹಮಾನ್ ಸಂಯೋಜಿಸಿದ್ದಾರೆ. ಆದರೆ ರಾತ್ರಿ ಕಳೆಯುವುದರೊಳಗೆ ಜನಪ್ರಿಯರಾಗಿದ್ದು ಪ್ರಿಯಾ ಪ್ರಕಾಶ್ ವಾರಿಯರ್.
ಹಾಡಿನ ವಿಡಿಯೊದಲ್ಲಿ ಪ್ರಿಯಾ ಕಣ್ಣನ್ನು ಮಿಟುಕಿಸಿ ತನ್ನ ಪ್ರೀತಿಪಾತ್ರದ ಹುಡುಗನ ಗಮನವನ್ನು ಸೆಳೆಯುವ ದೃಶ್ಯ ನೋಡುಗರನ್ನು ಸೆಳೆಯುತ್ತದೆ. ಕೇರಳದ ತ್ರಿಶೂರಿನ 18 ವರ್ಷದ ಹುಡುಗಿ ಪ್ರಿಯಾ ತಮ್ಮ ಸಮ್ಮೋಹಗೊಳಿಸುವ ಅಭಿವ್ಯಕ್ತಿ ಮೂಲಕ ಕ್ರೇಜ್ ಹುಟ್ಟಿಸುತ್ತಾರೆ. ಕೇವಲ ಒಂದೇ ದಿನದಲ್ಲಿ ಅವರಿಗೆ ಸಾಮಾಜಿಕ ಮಾಧ್ಯಮದಲ್ಲಿ 606 ಸಾವಿರ ಅನುಯಾಯಿಗಳು ಹುಟ್ಟಿಕೊಂಡಿದ್ದಾರೆ.
1.7 ದಶಲಕ್ಷ ಅನುಯಾಯಿಗಳನ್ನು ಹೊಂದಿರುವ ಬಿ.ಕಾಂನಲ್ಲಿ ಓದುತ್ತಿರುವ ಪ್ರಿಯಾ ಪ್ರಕಾಶ್ ಇಂಟರ್ನೆಟ್ ನಲ್ಲಿ ಸೆನ್ಸೇಷನ್ ಹುಟ್ಟಿಸಿದವರಾಗಿದ್ದಾರೆ.
Advertisement