
ಘರ್ಗಾ ಸಿನಿಮಾ ಮೂಲಕ ಸಿನಿಮಾ ಜಗತ್ತಿಗೆ ಮತ್ತೊಬ್ಬ ನಟಿ ರಾಗವಿ ಗೌಡ ಕಾಲಿಡುತ್ತಿದ್ದಾರೆ. ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವನ್ನು ಅರಣ್ಯ ಪ್ರದೇಶದಲ್ಲಿ ಚಿತ್ರೀಕರಿಸಲಾಗುತ್ತಿದ್ದು ಹೊಸಬರಾದ ಎಂ.ಶಶಿದರ್ ನಿರ್ದೇಶಿಸುತ್ತಿದ್ದಾರೆ. ಆಡಿಯೊ ಕಂಪೆನ ಮಾಲಿಕ ಅಶ್ವಿನಿ ರಾಮಪ್ರಸಾದ್ ಅವರ ಪುತ್ರ ಅರುಣ್ ರಾಮಪ್ರಸಾದ್ ಅವರ ನಿರ್ಮಾಣದ ಮೊದಲ ಚಿತ್ರವಿದು.
ಚಿತ್ರದ ಮೊದಲ ಭಾಗದ ಚಿತ್ರೀಕರಣ ಮುಗಿದಿದ್ದು ಸಿಟಿ ಎಕ್ಸ್ ಪ್ರೆಸ್ ಜೊತೆ ಕೆಲವು ವಿವರಗಳನ್ನು ಹಂಚಿಕೊಂಡಿದ್ದಾರೆ. ವಿಎಫ್ಎಕ್ಸ್ ಪುಣೆಯಲ್ಲಿ ಅಧ್ಯಯನ ಮಾಡಿರುವ ನಿರ್ದೇಶಕರು ಎ.ಪಿ.ಅರ್ಜುನ್ ಜೊತೆಗೆ ಈಗಾಗಲೇ ಕಿಸ್ ನಲ್ಲಿ ಕೆಲಸ ಮಾಡಿದ್ದಾರೆ.
ನೀನಾಸಂ ರಂಗಮಂದಿರದಿಂದ ತರಬೇತಿ ಪಡೆದು ಹೊರಬಂದಿರುವ ಅರುಣ್ ತಮ್ಮ ಸಿನಿವೃತ್ತಿಯನ್ನು ಆರಂಭಿಸಲು ಸೂಕ್ತ ನಿರ್ದೇಶಕರಿಗಾಗಿ ಕಾಯುತ್ತಿದ್ದರು. ಅರುಣ್ ಮತ್ತು ರಾಗವಿ ಅವರೊಂದಿಗೆ ಸಾಯಿ ಕುಮಾರ್, ಅರುಣ್ ಸಾಗರ್, ಮಿತ್ರಾ ಕೂಡ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ವಶಿಷ್ಟ ಸಿಂಹ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
Advertisement