ಚಮಕ್ ಚಿತ್ರದಲ್ಲಿ ಗಣೇಶ್-ರಶ್ಮಿಕಾ
ಸಿನಿಮಾ ಸುದ್ದಿ
ಚಮಕ್ ಚಿತ್ರದ 50 ದಿನಗಳ ಪ್ರದರ್ಶನ:ಚಿತ್ರತಂಡದಿಂದ ಹೊಸ ಟ್ರೈಲರ್ ಬಿಡುಗಡೆ
ನಾಳೆ, ಶುಕ್ರವಾರ ಸುನಿ ನಿರ್ದೇಶನದ ಚಮಕ್ ಚಿತ್ರ 50 ದಿನಗಳ ಪ್ರದರ್ಶನ ಪೂರೈಸುತ್ತಿದ್ದು, ಚಿತ್ರದ ....
ನಾಳೆ, ಶುಕ್ರವಾರ ಸುನಿ ನಿರ್ದೇಶನದ ಚಮಕ್ ಚಿತ್ರ 50 ದಿನಗಳ ಪ್ರದರ್ಶನ ಪೂರೈಸುತ್ತಿದ್ದು, ಚಿತ್ರದ ಯಶಸ್ಸಿನ ಹಿನ್ನೆಲೆಯಲ್ಲಿ ನಿರ್ಮಾಪಕರು ಪೋಸ್ಟ್ ರಿಲೀಸ್ ಟ್ರೈಲರ್ ನ್ನು ಇಂದು ಬಿಡುಗಡೆ ಮಾಡಲಿದ್ದಾರೆ.
ವ್ಯಾಲೆಂಟೈನ್ಸ್ ವಾರದಲ್ಲಿ ಚಿತ್ರವನ್ನು ನೋಡಿ ಪ್ರೀತಿಯ ದಿನವನ್ನು ಆಚರಿಸಲು ನಿರ್ಧರಿಸುವವರಿಗೆ ಚಿತ್ರತಂಡದಿಂದ ಇದು ಮತ್ತೊಂದು ರೀತಿಯ ಆಹ್ವಾನವಾಗಿದೆ ಎಂದು ನಿರ್ದೇಶಕ ಸುನಿ ಹೇಳುತ್ತಾರೆ.
ಗಣೇಶ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಚಿತ್ರಕ್ಕೆ ಜುಡ ಸ್ಯಾಂಡಿ ಸಂಗೀತ ಮತ್ತು ಸಂತೋಷ್ ರೈ ಪಾತಾಜೆ ಛಾಯಾಗ್ರಹಣ ಒದಗಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ