ನೀರವ್ ಮೋದಿ ಜೊತೆಗಿನ ಒಪ್ಪಂದ ರದ್ದು: ಪ್ರಿಯಾಂಕಾ ಚೋಪ್ರಾ ಕಾನೂನು ಸಲಹೆ

ಆಭರಣ ಉದ್ಯಮಿ ನೀರವ್ ಮೋದಿ ವಿರುದ್ಧ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಆತನೊಂದಿಗೆ ಮಾಡಿಕೊಂಡಿದ್ದ ಒಪ್ಪಂದ ಮುರಿದುಕೊಳ್ಳಲು ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಕಾನೂನು ಸಲಹೆ ಪಡೆಯುತ್ತಿದ್ದಾರೆ
ನೀರವ್ ಮೋದಿ ಅವರ ಆಭರಣಗಳ ಬ್ರಾಂಡ್ ಅಂಬಾಸಿಡರ್ ಪ್ರಿಯಾಂಕ ಚೋಪ್ರಾ ಅವರ ಚಿತ್ರ
ನೀರವ್ ಮೋದಿ ಅವರ ಆಭರಣಗಳ ಬ್ರಾಂಡ್ ಅಂಬಾಸಿಡರ್ ಪ್ರಿಯಾಂಕ ಚೋಪ್ರಾ ಅವರ ಚಿತ್ರ

ಮುಂಬೈ: ಪಂಬಾಬ್ ನ್ಯಾಷನಲ್ ಬ್ಯಾಂಕಿನ 11.300 ಕೋಟಿ ರೂ. ಹಗರಣಕ್ಕೆ ಸಂಬಂಧಿಸಿದಂತೆ  ಆಭರಣ ಉದ್ಯಮಿ ನೀರವ್ ಮೋದಿ ವಿರುದ್ಧ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಆತನೊಂದಿಗೆ ಮಾಡಿಕೊಂಡಿದ್ದ ಒಪ್ಪಂದ ಮುರಿದುಕೊಳ್ಳಲು ಬಾಲಿವುಡ್ ನಟಿ ಪ್ರಿಯಾಂಕ  ಚೋಪ್ರಾ ಕಾನೂನು ಸಲಹೆ ಪಡೆಯುತ್ತಿದ್ದಾರೆ

ನೀರವ್ ಮೋದಿ ವಿನ್ಯಾಸದ ಆಭರಣಗಳ ರಾಯಬಾರಿಯಾಗಿ ಪ್ರಿಯಾಂಕ ಚೋಪ್ರಾ ಕಳೆದ ವರ್ಷ ಒಪ್ಪಂದ ಮಾಡಿಕೊಂಡಿದ್ದರು.ಆದರೆ, ಪಂಬಾಬ್ ನ್ಯಾಷನಲ್ ಬ್ಯಾಂಕಿನಲ್ಲಿ  ವಂಚನೆ ಪ್ರಕರಣದ ಹಿನ್ನೆಲೆಯಲ್ಲಿ ಆತನೊಂದಿಗಿನ ಮೈತ್ರಿ ಮುರಿದುಕೊಳ್ಳಲು ಮುಂದಾಗಿದ್ದಾರೆ ಎಂದು ಪ್ರಿಯಾಂಕಾ ಚೋಪ್ರಾ ಅವರ ವಕ್ತಾರರು ತಿಳಿಸಿದ್ದಾರೆ.

ನೀರವ್ ಮೋದಿ ವಿರುದ್ಧ ಪ್ರಿಯಾಂಕ ಚೋಪ್ರಾ ಮೊಕದ್ದಮೆ ಹೊಡುತ್ತಾರೆ ಎಂಬುದು ಊಹಪೋಹ ವರದಿ. ಆದಾಗ್ಯೂ, ಅವರೊಂದಿಗೆ ಒಪ್ಪಂದ ರದ್ದು ಮಾಡಿಕೊಳ್ಳಲು ಕಾನೂನು ಸಲಹೆ ಪಡೆಯುತ್ತಿದ್ದಾರೆ ಅವರು ಹೇಳಿದ್ದಾರೆ.

ಹಾಲಿವುಡ್ ನಲ್ಲಿ ತಮ್ಮ ಛಾಪೂ ಮೂಡಿಸಿರುವ ಪ್ರಿಯಾಂಕ ಚೋಪ್ರಾ, 2017ರಿಂದಲೂ ನೀರವ್ ಮೋದಿ ಅವರ ಲಕ್ಸುರಿ ಡೈಮಂಡ್ ಆಭರಣಗಳ  ರಾಯಬಾರಿಯಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com