ವೃತ್ತಿ ಜೀವನದಲ್ಲಿ ಮೊದಲ ಬಾರಿಗೆ ಮಧ್ಯರಾತ್ರಿವರೆಗೂ ಶೂಟಿಂಗ್ ನಲ್ಲಿ ಪಾಲ್ಗೊಂಡ ರೆಬೆಲ್ ಸ್ಟಾರ್!

ರೆಬೆಲ್ ಸ್ಟಾರ್ ಅಂಬರೀಷ್ ನಟಿಸಿರುವ ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾ ಶೂಟಿಂಗ್ ಆರಂಭವಾಗಿದ್ದು ಎಲ್ಲರ ಗಮನ ಸೆಳೆದಿದೆ. ..
ಶೂಟಿಂಗ್ ನಲ್ಲಿ ನಿರ್ದೇಶಕ ಗುರುದತ್ ಜೊತೆ ಅಂಬರೀಷ್
ಶೂಟಿಂಗ್ ನಲ್ಲಿ ನಿರ್ದೇಶಕ ಗುರುದತ್ ಜೊತೆ ಅಂಬರೀಷ್
Updated on
ಬೆಂಗಳೂರು: ರೆಬೆಲ್ ಸ್ಟಾರ್ ಅಂಬರೀಷ್ ನಟಿಸಿರುವ ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾ ಶೂಟಿಂಗ್ ಆರಂಭವಾಗಿದ್ದು ಎಲ್ಲರ ಗಮನ ಸೆಳೆದಿದೆ. 
ಅಂಬರೀಷ್ ತಮ್ಮ ವೃತ್ತಿ ಜೀವನದಲ್ಲಿ ಇದೇ ಮೊದಲ ಬಾರಿಗೆ ಮಧ್ಯರಾತ್ರಿಯವರೆಗೂ ಶೂಟಿಂಗ್ ನಲ್ಲಿ ಪಾಲ್ಗೊಂಡು ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ, ತಮ್ಮ ಸಿನಿಮಾಗಾಗಿ ಸಣ್ಣ ಸಣ್ಣ ಬ್ರೇಕ್ ತೆಗೆದುಕೊಂಡು ಶೂಟಿಂಗ್ ಮುಗಿಸುತ್ತಿದ್ದಾರೆ. ಬೆಳಗ್ಗೆ 11.30ಕ್ಕೆ ಸೆಟ್ ಗೆ ಬರುವ ಅಂಬಿ ರಾತ್ರಿ 2 ಗಂಟೆವರೆಗೂ ಶೂಟಿಂಗ್ ನಲ್ಲಿ ಪಾಲ್ಗೋಳ್ಳುತ್ತಿದ್ದಾರೆ.
ಅಂಬರೀಷ್ ರಂಥ ಹಿರಿಯ ನಾಯಕರು  ಈ ಸಿನಿಮಾಗೆ ಇಷ್ಟೊಂದು ಉತ್ಸಾಹ ತೋರುತ್ತಿರುವುದು ನನಗೆ ತುಂಬಾ ತೋಷ ಉಂಟುಮಾಡಿದೆ, ಈ ವಯಸ್ಸಿನಲ್ಲಿ ಅವರು ಸಿನಿಮಾ ಬಗ್ಗೆ ಇಟ್ಟುಕೊಂಡಿರುವ ಆಸಕ್ತಿ ನೋಡಿ ನನಗೆ ಖುಷಿಯಾಗಿದ್ದು, ಪಾತ್ರಕ್ಕೆ ಶಕ್ತಿ ತುಂಬುತ್ತಿದ್ದಾರೆ ಎಂದು ಯುವ ನಿರ್ದೇಶಕ ಗುರುದತ್ತ ಗಾಣಿಗ ಹೇಳಿದ್ದಾರೆ.
ಕನ್ನಡಕ್ಕೆ  ರಿಮೇಕ್ ಆಗುತ್ತಿರುವ ತಮಿಳಿನ ಪವರ್ ಪಂಡಿ  ಸಿನಿಮಾ ನೋಡುವಂತೆ ಸ್ನೇಹಿತ ರಜನೀ ಕಾಂತ್  ಅಂಬರೀಶ್ ಗೆ ಸಲಹೆ ನೀಡಿದ್ದಾರಂತೆ, ವಂಡರ್ ಬಾರ್ ಫಿಲ್ಮ್ಮ್ ಈ ಸಿನಿಮಾ ತಯಾರಿಸಿದ್ದು, ಸಿನಿಮಾವನ್ನು ಧನುಷ್ ನಿರ್ದೇಶಿಸಿದ್ದಾರೆ. ಅಂಬರೀಷ್ ಅವರಿಗೆ ಮಾತ್ರ ಈ ಪಾತ್ರ ಸೂಟ್ ಆಗುತ್ತದೆ ಎಂದು ನನಗೆ ಅನ್ನಿಸಿತ್ತು ಎಂದು ರಜನಿ ಭಾವಿಸಿದರಂತೆ.
ಮತ್ತೊಂದೆಡೆ ಇನ್ನೂ ಮೂಲ ಸಿನಿಮಾದಲ್ಲಿ  ಧನುಷ್ ಮಾಡಿದ ಪಾತ್ರದಲ್ಲಿ ಸುದೀಪ್  ನಟಿಸುತ್ತಿದ್ದಾರೆ, ಕಿಚ್ಚ ಕ್ರಿಯೇಷನ್ ಅಡಿ ಸುದೀಪ್ ಸಿನಿಮಾದ ಹಕ್ಕು ಪಡೆದಿದ್ದು ಅಂಬರೀಷ್ ಗೆ ತಿಳಿದಿತ್ತು.ಈಗಾಗಿ ಇಬ್ಬರು ಒಟ್ಟಿಗೆ ಕೆಲಸ ಮಾಡಲು ತೀರ್ಮಾನಿಸಿದ್ದಾರೆ.
ನಮ್ಮ ತಂಡದಲ್ಲಿರುವವರು ಬಹುತೇರ ಯುವಕರು ಹಾಗೂ ಚಿಕ್ಕ ವಯಸ್ಸಿನವರು, ಇಂಥಹ ತಂಡ ಲೆಜೆಂಡ್ ಜೊತೆ ಕೆಲಸ ಮಾಡುತ್ತಿರುವುದು ನಮಗೆ ಕೆಲಸವನ್ನು ಮತ್ತಷ್ಟು ಪ್ರೀತಿಸಲು ಹಾಗೂ ಉತ್ಸಾಹದಿಂದ ಕೆಲಸ ಮಾಡಲು ಸ್ಪೂರ್ತಿಯಾಗುತ್ತಿದೆ ಎಂದು ನಿರ್ದೇಶಕ ಗುರುದತ್ತ ಗಣಿಗ ಹೇಳಿದ್ದಾರೆ. 
ಸಿನಿಮಾಗಾಗಿ ಮೋಹನ್ ಬಿ ಕೆರೆ ಬಹು ದೊಡ್ಡ ಸೆಟ್ ನಿರ್ಮಿಸಿದ್ದಾರೆ, ಅರ್ಧ ಭಾಗ ಸಿನಿಮಾ ಅಂದರೆ ಕೆಲ ಹಾಡುಗಳು ಮತ್ತು ಫೈಟಿಂಗ್ ದೃಶ್ಯಗಳನ್ನು ಈ ಸೆಟ್ ನಲ್ಲಿಯೇ ಚಿತ್ರೀಕರಿಸಲಾಗುವುದು, ಉಳಿದ ಭಾಗದ ಶೂಟಿಂಗ್ ಗಾಗಿ ಕೇರಳಕ್ಕೆ ತೆರಳಲಾಗುವುದು, ಅಂಬರೀಶ್ ಗೆ ಜೋಡಿಯಾಗಿ ಸುಹಾಸಿನಿ, ಸುದೀಪ್ ಗೆ ಶೃತಿ ಹರಿಹರನ್ ಭಾಗದ ಶೂಟಿಂಗ್ ಮಾರ್ಚ್ ನಲ್ಲಿ ಆರಂಭಗೊಳ್ಳಲಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com