ಇನ್ನು ಹೊಸ ಚಿತ್ರಗಳಾದ ನಮ್ಮ ಯುಎಫ್ಒ ಮತ್ತು ಅಮರ್ ಚಿತ್ರಾ ಕಥಾ ಚಿತ್ರಗಳಿಗೆ ಸಹಿ ಹಾಕಿದ್ದಾರೆ. ಅಜಯ್ ಸಪ್ರೇಷ್ಕರ್ ನಿರ್ದೇಶನದ ನಮ್ಮ ಯುಎಫ್ಒ ಚಿತ್ರ ಮಾರ್ಚ್ ನಲ್ಲಿ ಸೆಟ್ಟೇರಲಿದ್ದು ಇದೊಂದು ವೈಜ್ಞಾನಿಕ ಕಥಾ ಹಂದರವನ್ನು ಹೊಂದಿದೆ. ಈ ಚಿತ್ರದಲ್ಲಿ ಸಂಯುಕ್ತ ಹೊರನಾಡು ಅವರು ಬಾಹ್ಯಾಕಾಶಕ್ಕೆ ಪ್ರಯಾಣಿಸುವ ಪಾತ್ರವೊಂದನ್ನು ನಿಭಾಯಿಸಲಿದ್ದಾರೆ. ಇದೇ ವಿಚಾರ ಈಗ ಸಂಯುಕ್ತ ಅವರ ಖುಷಿಗೆ ಕಾರಣವಾಗಿದೆ. ಬಾಲ್ಯದಿಂದಲೂ ಅವರಿಗೆ ಚಂದ್ರಯಾನ ಮಾಡುವ ಕನಸನ್ನು ಹೊಂದಿದ್ದು ಅದು ಈ ಚಿತ್ರದ ಮೂಲಕ ನೆರವೇರಲಿದೆ ಎಂದು ಹೇಳಿದ್ದಾರೆ.