ಆ 4 ಗಂಟೆಗಳಲ್ಲಿ ಅಚ್ಚಳಿಯದ ನೆನಪು ಉಳಿಯುವಂತೆ ಮಾಡಿದ್ದರು: ರಮೇಶ್ ಅರವಿಂದ್

ಕಾಶಿನಾಥ್ ಅವರೊಂದಿಗೆ ಕಳೆದ ಆ ನಾಲ್ಕು ಗಂಟೆಗಳು ಅಚ್ಚಳಿಯದ ನೆನಪುಳಿಯುವಂತಾಗಿತ್ತು ಎಂದು ನಟ ರಮೇಶ್ ಅರವಿಂದ್ ಅವರು ಹೇಳಿದ್ದಾರೆ...
ನಟ ರಮೇಶ್ ಅರವಿಂದ್
ನಟ ರಮೇಶ್ ಅರವಿಂದ್
ಬೆಂಗಳೂರು: ಕಾಶಿನಾಥ್ ಅವರೊಂದಿಗೆ ಕಳೆದ ಆ ನಾಲ್ಕು ಗಂಟೆಗಳು ಅಚ್ಚಳಿಯದ ನೆನಪುಳಿಯುವಂತಾಗಿತ್ತು ಎಂದು ನಟ ರಮೇಶ್ ಅರವಿಂದ್ ಅವರು ಹೇಳಿದ್ದಾರೆ. 
ಸ್ಯಾಂಡಲ್ ವುಡ್ ನಲ್ಲಿ ಟ್ರೆಂಡ್ ಸೆಟ್ಟರ್ ಆಗಿದ್ದ ಕಾಶಿನಾಥ್ ಅವರು, ಚಿತ್ರರಂಗದಲ್ಲಿ ನಿಧಾನವಾಗಿ ಗೂಡು ನಿರ್ಮಿಸಲು ಆರಂಭಿಸಿದ್ದರು. ಚಿತ್ರಗಳಿಗೆ ಕಾಮ ಪ್ರಚೋದನೆಯಂತಹ ವಿಷಯಗಳನ್ನು ತೆಗೆದುಕೊಳ್ಳತ್ತಿದ್ದ ಕಾಶಿನಾಥ್ ಅವರು, ಅಶ್ಲೀಲ ಸಂಭಾಷಣಕಾರ ಎಂಬ ಟೀಕೆಗಳನ್ನು ಎದುರಿಸುವಂತಾಗಿತ್ತು. ಆದರೂ, ಕಾಶಿನಾಥ್ ಅವರು ಇದಾವುದಕ್ಕೂ ಕಿವಿಕೊಟ್ಟಿರಲಿಲ್ಲ. 
ಯಾವುದೇ ವಿಷಯಗಳಲ್ಲಿ ಆದರೂ ಕಾಶಿನಾಥ್ ಅವರು ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದರು. ಇದೇ ಅವರ ದೊಡ್ಡ ಯಶಸ್ಸಿಗೆ ಕಾರಣವಾಗಿತ್ತು. ಅಲ್ಲದೆ. ಇದೇ ಅವರ ದೊಡ್ಡ ಸಾಮರ್ಥ್ಯವಾಗಿತ್ತು. ಅಪರಿಚತ ಚಿತ್ರ ಕಾಶಿನಾಥ್ ಅವರಿಗೆ ಸಾಕಷ್ಟು ಹೆಸರನ್ನು ತಂದುಕೊಟ್ಟಿತ್ತು. ಈ ಚಿತ್ರವನ್ನು ನಾನು ಚಿತ್ರಮಂದಿರದಲ್ಲಿ ನೋಡಿದ್ದೆ. ಈಗಲೂ ಅದರ ನೆನಪಿದೆ. 22 ವರ್ಷದ ಯುವಕ ಚಿತ್ರವನ್ನು ನಿರ್ದೇಶಿಸಿರುವುದು ನನಗೆ ಸಾಕಷ್ಟು ಆಶ್ಚರ್ಯವನ್ನು ತಂದಿತ್ತು. ತಾವೊಬ್ಬ ಹೀರೋ ಎಂದು ಕಲ್ಪಿಸಿಕೊಂಡು, ತಮ್ಮ ದೌರ್ಬಲ್ಯಗಳನ್ನು ಚಿತ್ರಿಸಿ ಪರದೆಯ ಮೇಲೆ ಪ್ರದರ್ಶಿಸಿ, ಪ್ರೇಕ್ಷಕರ ಕಲ್ಪನೆಗಳನ್ನು ಹಿಡಿದಿಟ್ಟುಕೊಳ್ಳುವುದು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಇದೊಂದು ದೊಡ್ಡ ಸಾಧನೆಯೆಂದೇ ಹೇಳಬಹುದು. 
ಅತ್ಯಂತ ಕಡಿ ಬಜೆಟ್ ಸಿನಿಮಾ ಸೂಪರ್ ಹಿಟ್ ಆಗಿರುವುದು ಅವರ ಅಪ್ಪಟತೆಗೆ ಮತ್ತೊಂದು ಉದಾಹರಣೆ. ಅಗತ್ಯಕ್ಕೆ ಬೇಕಿದ್ದುದ್ದನ್ನು ಮಾತ್ರ ಅವರು ಚಿತ್ರೀಕರಿಸುತ್ತಿದ್ದರು. ಅವರ ಶಿಷ್ಯರಾದ ವಿ.ಮನೋಹರ್, ಉಪೇಂದ್ರ ಅವರಿಂದಲೇ ಉತ್ತಮ ಚಿತ್ರಗಳನ್ನು ನೀಡಿದ್ದಾರೆ. ಪರದೆ ಮೇಲೆ ಬರುತ್ತಿದ್ದಂತೆಯೇ ಪ್ರೇಕ್ಷಕರ ಮುಖದಲ್ಲಿ ನಗು ಬರುವಂತೆ ಮಾಡುತ್ತಿದ್ದರು. ಕಾಶಿನಾಥ್ ಅವರು ನನಗೆ ವೈಯಕ್ತಿಕವಾಗಿ ಗೊತ್ತಿಲ್ಲದಿದ್ದರೂ, ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಕಾಶಿನಾಥ್  ಅವರು ಬಂದಿದ್ದರು. ಅವರೊಂದಿಗೆ ಕಳೆದ ಆ ನಾಲ್ಕು ಗಂಟೆಗಳು ಅಚ್ಚಳಿಯದ ನೆನಪಾಗಿ ಉಳಿದಿದೆ. ಜೀವನವನ್ನು ಆಳವಾಗಿ ಅರ್ಥಮಾಡಿಕೊಂಡಿರುವ ವ್ಯಕ್ತಿಯಾಗಿದ್ದರು ಎಂದು ರಮೇಶ್ ಅರವಿಂದ್ ಅವರು ತಿಳಿಸಿದ್ದಾರೆ. 
ಕಾರ್ಯಕ್ರಮದ ವೇಳೆ ಅವರು ಆಡಿದ್ದ ಮಾತುಗಳನ್ನು ಮರೆಯಲು ಸಾಧ್ಯವಿಲ್ಲ. ಮತ್ತೊಬ್ಬರ ಕಾಲನ್ನು ಎಳೆದು ನಿಮ್ಮ ಜೀವನವನ್ನು ಹಾಳು ಮಾಡಿಕೊಳ್ಳಬೇಡಿ ಎಂದಿದ್ದರು. ನೀವು ಅವರ ಕಾಲಿನ ಮಟ್ಟದಲ್ಲಿದ್ದೀರಿ, ಅದಕ್ಕಾಗಿಯೇ ನೀವು ಅವಲ ಕಾಲನ್ನು ಎಳೆಯಲು ಸಾಧ್ಯವಾಯಿತು. ನೀವು ತಲೆಯ ಮಟ್ಟದಲ್ಲಿದ್ದರೆ, ನೀವು ಅವರ ಕಾಲಿನ ಮಟ್ಟಕ್ಕೆ ಎಂದಿಗೂ ತಲುಪುವುದಿಲ್ಲ ಎಂದು ಹೇಳಿದ್ದರು. ಈ ಮಾತು ಅವರು ಜೀವನವನ್ನು ಯಾವ ರೀತಿಯಲ್ಲಿ ನೋಡುತ್ತಿದ್ದಾರೆಂಬುದರ ಬಗ್ಗೆ ಸಾಕಷ್ಟು ಆಸಕ್ತಿಗಳನ್ನು ಮೂಡಿಸಿತು ಎಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com