ಕುರುಕ್ಷೇತ್ರ ನೆನಪಿಗಾಗಿ ಗದೆ, ಕಿರೀಟ ಮನೆಗೆ ಕೊಂಡೊಯ್ಯಲು ದರ್ಶನ್ ಒಲವು

ಪುರಾಣ ಮತ್ತು ಇತಿಹಾಸ ಚಿತ್ರಗಳಲ್ಲಿ ಮುಖ್ಯ ಪಾತ್ರಗಳನ್ನು ವಹಿಸಿದವರ ಮೇಲೆ ಆ ಪಾತ್ರ ....
ಕುರುಕ್ಷೇತ್ರ ಸೆಟ್ ನಲ್ಲಿ ದರ್ಶನ್
ಕುರುಕ್ಷೇತ್ರ ಸೆಟ್ ನಲ್ಲಿ ದರ್ಶನ್
ಪುರಾಣ ಮತ್ತು ಇತಿಹಾಸ ಚಿತ್ರಗಳಲ್ಲಿ ಮುಖ್ಯ ಪಾತ್ರಗಳನ್ನು ವಹಿಸಿದವರ ಮೇಲೆ ಆ ಪಾತ್ರ ವಿಶೇಷವಾಗಿ ಪರಿಣಾಮ ಬೀರುತ್ತದೆ. ಮುನಿರತ್ನ ಅವರ ಕುರುಕ್ಷೇತ್ರ ಚಿತ್ರದ ಶೂಟಿಂಗ್ ನ್ನು ಎರಡು ದಿನಗಳ ಕಾಲ ವಿಸ್ತರಿಸಿಕೊಂಡಿದ್ದ ನಟ ದರ್ಶನ್ ಕೊನೆಯ ಹಂತದ ಶೂಟಿಂಗ್ ಮುಗಿದಿದೆ.
ಪುರಾಣ ಚಿತ್ರಕ್ಕೆ ಹೈದರಾಬಾದ್ ನಲ್ಲಿ ಹಾಕಲಾಗಿದ್ದ ಅದ್ದೂರಿ ಸೆಟ್ ತೆಗೆಯುತ್ತಿರುವಂತಹ ಸಂದರ್ಭದಲ್ಲಿ ದರ್ಶನ್ ಹಲವು ನೆನಪುಗಳನ್ನು ಕರೆದೊಯ್ಯಲು ಇಷ್ಟಪಟ್ಟಿದ್ದಾರೆ.
ಕುರುಕ್ಷೇತ್ರ ದರ್ಶನ್ ಅವರ 50ನೇ ಸಿನಿಮಾ. ಅದರಲ್ಲಿ ದುರ್ಯೋಧನ ಪಾತ್ರವನ್ನು ನಿರ್ವಹಿಸಿದ್ದಾರೆ. 
ಹಾಗಾದರೆ ಯಾವ ನೆನಪುಗಳನ್ನು ಅವರು ಮನೆಗೆ ತೆಗೆದುಕೊಂಡು ಹೋಗಲು ಇಷ್ಟಪಡುತ್ತಾರೆ ಎಂದು ಕೇಳಿದಾಗ, ದುರ್ಯೋಧನನ ಗಧೆ ಮತ್ತು ಕಿರೀಟವನ್ನು ನಾನು ತೆಗೆದುಕೊಂಡು ಹೋಗಲು ಇಷ್ಟಪಡುತ್ತೇನೆ. ಅವು ನನ್ನ ಜೀವನದ ಭಾಗವಾಗಿ ಮಾರ್ಪಟ್ಟಿದೆ. ದುರ್ಯೋಧನನ ಪಾತ್ರಕ್ಕೆ ವಿನ್ಯಾಸಗೊಳಿಸಲಾದ ಬಟ್ಟೆಯನ್ನು ಮನೆಗೆ ತೆಗೆದುಕೊಂಡು ಹೋಗುವಂತೆ ಹೇಳಿದರು. ಅವರ ಪ್ರೀತಿಗೆ ಆಭಾರಿಯಾಗಿದ್ದೇನೆ ಎನ್ನುತ್ತಾರೆ ದರ್ಶನ್.
ಕನ್ನಡದಲ್ಲಿ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಚಿತ್ರ ತಯಾರಿಸಿರುವ ಮುನಿರತ್ನ ಅವರನ್ನು ದರ್ಶನ್ ಶ್ಲಾಘಿಸುತ್ತಾರೆ. ಇಲ್ಲಿ ಪ್ರತಿಯೊಬ್ಬರೂ ಕಷ್ಟಪಟ್ಟು ಕೆಲಸ ಮಾಡಿದ್ದಾರೆ. ಆದರೆ ಮುನಿರತ್ನ ಅವರ ಸಹಾಯವಿಲ್ಲದೆ ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳುತ್ತಾರೆ. ಅನೇಕರು ತಮ್ಮ ರಾಜಕೀಯ ಲಾಭಕ್ಕಾಗಿ ಮುನಿರತ್ನ ಈ ಚಿತ್ರವನ್ನು ತಯಾರಿಸಿದರು ಎನ್ನುತ್ತಾರೆ, ಆದರೆ ಅದು ನಿಜವಲ್ಲ, ಹಾಗೆ ಮಾಡುವುದಾದರೆ ಅವರಿಗೆ ಬೇರೆ ಮಾರ್ಗಗಳಿವೆ ಎನ್ನುತ್ತಾರೆ ದರ್ಶನ್.
ಚಿತ್ರ ಗೆಲ್ಲುತ್ತೊ, ಸೋಲುತ್ತೋ ಆದರೆ ಕನ್ನಡ ಚಿತ್ರರಂಗದಲ್ಲಿ ಇದೊಂದು ಮೈಲುಗಲ್ಲು ಆಗಲಿದೆ ಎನ್ನುತ್ತಾರೆ ನಟ ದರ್ಶನ್.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com