ಜಯತೀರ್ಥ ನಿರ್ದೇಶದನ ಬ್ಯುಟಿಪೂಲ್ ಮನಸ್ಸುಗಳು ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ಸ್ವಾತಿ ಕೊಂಡೆ ಅವರು ವನಿಲ್ಲಾ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಮಧ್ಯೆ ಸ್ವಾತಿ ಕೊಂಡೆ ಅವರು ಇದೀಗ ತಮ್ಮ ಐದನೇ ಚಿತ್ರಕ್ಕೆ ಸಹಿ ಮಾಡಿದ್ದಾರೆ.
ಅದು ಒಂದು ಹಾಡಿನ ಸೆಳೆತದಿಂದ ಭರಣಿ ಚಿತ್ರದ ನಾಯಕಿ ಪಾತ್ರವನ್ನು ಒಪ್ಪಿಕೊಂಡೆ. ಈ ಹಾಡನ್ನು ಕೇಳಿದಾಗ ಚಿತ್ರದಲ್ಲಿನ ನನ್ನ ಪಾತ್ರದ ಮುಗ್ಧತೆಯನ್ನು ನಾನು ಅರ್ಥಮಾಡಿಕೊಂಡೆ ಅಲ್ಲದೆ ನಾನು ಅದರಲ್ಲಿ ನನ್ನನ್ನು ಚಿತ್ರಿಸಿಕೊಂಡೆ. ಕೂಡಲೇ ನಾನು ಚಿತ್ರದ ಭಾಗವಾಗಲು ಬಯಸಿದೆ ಎಂದು ಸ್ವಾತಿ ಕೊಂಡೆ ಹೇಳಿದ್ದಾರೆ.
ಭರಣಿ ಚಿತ್ರಕ್ಕೆ ಪಾರ್ವತಮ್ಮನ ಮಗ ಎಂದು ಟ್ಯಾಗ್ ಲೈನ್ ನೀಡಲಾಗಿದೆ. ಚಿತ್ರವನ್ನು ನವನಿರ್ದೇಶಕ ಚನ್ನನಿರಾಜು ನೀರ್ಮಾನ್ವಿ ಎಂಬುವರು ನಿರ್ದೇಶಿಸುತ್ತಿದ್ದಾರೆ. ಲೂಸ್ ಮಾದ ಯೋಗೀಶ್ ಸೋದರ ಸಂಬಂಧಿ ಮಾಧವ್ ಎಂಬುವರು ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಯೋಗೇಶ್ ಎಂಬುವರು ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಚಿತ್ರದ ಫಸ್ಟ್ ಲುಕ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಭರಣಿ ಚಿತ್ರ ವಿಶಿಷ್ಟ ಗ್ರಾಮದ ಹಿನ್ನಲೆಯನ್ನು ಹೊಂದಿದೆ.
ಫೆಬ್ರವರಿ ಮೊದಲ ವಾರದಿಂದ ಚಿತ್ರೀಕರಣ ಪ್ರಾರಂಭವಾಗಲಿದ್ದು ಹೆಚ್ಚಿನ ಮಾಹಿತಿಯನ್ನು ಅಂದು ಚಿತ್ರತಂಡ ನೀಡಲಿದೆ. ಸ್ವಾತಿ ಕೊಂಡೆ ಕಮರೊಟ್ಟು ಚೆಕ್ ಪೋಸ್ಟ್ ಮತ್ತು ಕಟ್ಟು ಕತೆ ಚಿತ್ರಗಳಲ್ಲಿ ಅಭಿನಯಿಸಿದ್ದು ಈ ಚಿತ್ರಗಳು ಇನ್ನಷ್ಟೇ ಬಿಡುಗಡೆಯಾಗಬೇಕಿದೆ.