ಸುದೀಪ್
ಸುದೀಪ್

ನನ್ನ ಚಿತ್ರ ಜೀವನವೇ ಒಂದು ಯಾನ, ಅಭಿಮಾನಿಗಳ ಪ್ರೀತಿಗೆ ನಾನು ಋಣಿ : ಕಿಚ್ಚ ಸುದೀಪ್

ಜ.31 ಸ್ಯಾಂಡಲ್ ವುಡ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಪಾಲಿಗೆ ಮಹತ್ವದ ದಿನ.
ಬೆಂಗಳೂರು: ಜ.31 ಸ್ಯಾಂಡಲ್ ವುಡ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಪಾಲಿಗೆ ಮಹತ್ವದ ದಿನ. ಈ ದಿನ ಅವರು ಕನ್ನಡ ಚಿತ್ರ ಜಗತ್ತಿಗೆ ಪದಾರ್ಪಣೆ ಮಾಡಿ ಇಪ್ಪತ್ತೆರಡು ವರ್ಷಗಳಾದವು. ಜ.31, 1996ರಂದು 'ಬ್ರಹ್ಮ' ಚಿತ್ರಕ್ಕಾಗಿ ಮೊದಲ ಬಾರಿಗೆ ಕ್ಯಾಮರಾ ಎದುರಿಸಿದ್ದ ಸುದೀಪ್ ಅಲ್ಲಿಂದ ಇಲ್ಲಿಯವರೆಗೆ ಸಾಕಷ್ಟು ಯಶಸ್ಸು ಕಂಡಿದ್ದು ಬಹು ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ.
"ನಾನು ಮೊದಲ ಬಾರಿಗೆ ಬಣ್ಣ ಹಚ್ಚಿದ್ದ ಆ ಕ್ಷಣಗಳು ನನ್ನ ಜೀವನದ ಅತಿ ಅಮೂಲ್ಯ ದಿನಗಳಾಗಿದ್ದವು" ಎನ್ನುವ ಸುದೀಪ್ ಅಂಬರೀಶ್ ಸೇರಿದಂತೆ ಅವರ ವೃತ್ತಿಜೀವನದ ಭಾಗವಾಗಿದ್ದ ಪ್ರತಿಯೊಬ್ಬ ವ್ಯಕ್ತಿಗೆ ಧನ್ಯವಾದ್ಸ ಹೇಳಿದ್ದಾರೆ.ಪ್ರಸ್ತುತ 'ದಿ ವಿಲನ್' ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿರುವ ನಟ ಸುದೀಪ್ ಅವರನ್ನು ಎಕ್ಸ್ ಪ್ರೆಸ್ ಮಾತನಾಡಿಸಿದೆ.
"ನನ್ನ ಜೀವನದಲ್ಲಿ ನಾನು ಪಾಠಗಳನ್ನು ಕಲಿತಿದ್ದು ನಾನೆಂದೂ ವಿಷಾದಕ್ಕೆ ಕಾರಣವಾಗುವ ಕೆಲಸಗಳನ್ನು ಮಾಡುವುದಿಲ್ಲ. ನೀವು ಎಲ್ಲಿಯವರೆಗೆ ಯಾರನ್ನೂ ನೋಯಿಸುವುದಿಲ್ಲವೋ ಅಲ್ಲಿಯವರೆಗೆ ವಿಷಾದ ಪಡಬೇಕಾಗಿಲ್ಲ. ನಾನು ಹಾಗೆ ಬದುಕುತ್ತಿದ್ದೇನೆ." ನೀವೆಂದಾದರೂ ತನ್ನಿಂದ ಇದಾಗಬಾರದಿತ್ತೆಂದು ಯೋಚಿಸಿದ್ದಿರಾ? ಎಂದು ಎಕ್ಸ್ ಪ್ರೆಸ್ ಪ್ರಶ್ನೆ ಕೇಳಲು ಸುದಿಪ್ ಮೇಲಿನಂತೆ ಉತ್ತರಿಸಿದ್ದಾರೆ. ಸಿನಿಮಾ ನನ್ನ ಜೀವನದ ಭಾಗವಾಗಿರುವುದಕ್ಕೆ ನನಗೆ ಸಂತಸವಿದೆ ಎನ್ನುವ ಕಿಚ್ಚ ಸುದೀಪ್ "ನಾನು ಲೆಜೆಂಡ್ಸ್ ಅಥವಾ ಸೂಪರ್ ಸ್ಟಾರ್ ಗಳೊಡನೆ ನನ್ನನ್ನ ಹೋಲಿಸಿಕೊಳ್ಳುತ್ತಿಲ್ಲ. ಆದರೆ ಬಹುತೇಕರು ದೊಡ್ಡ ಬಣ್ಣದ ಕನಸಿನೊಡನೆ ಈ ಕ್ಷೇತರಕ್ಕೆ ಆಗಮಿಸುತ್ತಾರೆ. ಆದರೆ ಆವರಿಗೆ ಎಲ್ಲವೂ ಸಿಗುವುದಿಲ್ಲ. ಆ ರೀತಿಯಲ್ಲಿ, ಸಿನೆಮಾ ನನಗೆ ಒಳ್ಳೆಯ ಅವಕಾಶ ನಿಡಿದೆ, ಮತ್ತು ನಾನು ಅದನ್ನು ಆನಂದಿಸಲು ಬಯಸುತ್ತೇನೆ.  ನಿಮಗೆ ಸಿಗಬಹುದಾದ ಉತ್ತಮ ಕಥೆಗಳಲ್ಲಿ ನಟಿಸಿದ್ದೇನೆನ್ನುವ ಸಂತಸವಿದೆ. ಪ್ರೇಕ್ಷಕರು ಯಾವುದನ್ನು ಬಯಸುತ್ತಾರೆಯೋ ಅದನ್ನೇ ನಿಡುವುದಕ್ಕೆ ನಾನು ಪ್ರಯತ್ನಿಸುತ್ತೇನೆ. ನಾನು "ಈ ಕ್ಷಣದಲ್ಲಿ" ಜೀವಿಸುತ್ತೇನೆ. ಹಾಇಗಾಗಿ ವರ್ತಮಾನಕ್ಕೆ ನಾನು ಹೆಚ್ಚು ಮಹತ್ವ ನೀಡುತ್ತೇನೆ."ಸುದೀಪ್ ಹೇಳಿದ್ದಾರೆ.
"ಇಂದು, ನನ್ನ ಪ್ರಸ್ತುತ ಚಿತ್ರ ಮತ್ತು ಅದರ ಬಿಡುಗಡೆಯಲ್ಲಿ ನಾನು ತೊಡಗಿಸಿಕೊಳ್ಳುತ್ತೇನೆ. ಇದೆಲ್ಲ ಮುಗಿದ ಬಳಿಕ ನಾವು ಮತ್ತೆ ಮುಂದೆ ಸಾಗುತ್ತಿರಬೇಕು.
"ನಾನು ನಿರ್ದೇಶಕ್ಕಾಗಿ ಕಥೆ ಆಯ್ಕೆ ಮಾಡಿಕೊಂಡಿದ್ದೇನೆ. ಆದಎ ಅದಕ್ಕೆಲ್ಲಾ ಇನ್ನೂ ಸಮಯ ಬೇಕಾಗಿದೆ. ಆದರೆ ನಾನು ನಿರ್ದೇಶನಕ್ಕೆ ಇಳಿದಾಗಿನ ಕ್ಷಣಗಳನ್ನು ಆನಂದಿಸುತ್ತೇನೆ., ನಾನು ಒಂದೆರಡು ಒಳ್ಳೆಯ ಚಿತ್ರಗಳನ್ನು ಮಾಡಿದ್ದೇನೆ ಮತ್ತು ನನಗೆ ಸಾಧ್ಯವಾಗುವಷ್ಟು ಒಳ್ಳೆಯ ಅಭಿನಯ ಕೊತ್ಟಿದ್ದೇನೆ. ಆದರೆ ನಾನು ಉತ್ತಮ ಡ್ಯಾನ್ಸರ ಅಲ್ಲ, ಫೈಟಿಂಗ್ ಸಹ ಅಷ್ಟಾಗಿ ತಿಳಿದಿಲ್ಲ. ಆದರೆ ನಾನು ತೀರಾ ಅಲ್ಪ ಪ್ರಮಾಣದಲ್ಲಿ ಇದೆಲ್ಲವನ್ನೂ ಬಲ್ಲೆ. ಆದರೆ ಸಿನಿಮಾ ಎಂಡರೆ ಅಭಿನಯ ಒಂಡೇ ಅಲ್ಲ. ಅದಕ್ಕೂ ಹೆಚ್ಚಿನದ್ದು. ನನ್ನ ಅಭಿಮಾನಿಗಳು ನಾನು ನನ್ನ ನಟನೆಯಲ್ಲಿ ಕಾಣಲಾರದ್ದನ್ನು ನನ್ನ ಅಭಿನಯದಲ್ಲಿ ಅವರು ಕಂಡಿದ್ದಾರೆ."ಸುದೀಪ್ ಹೇಳಿದರು.
"ಸ್ಕ್ರಿಪ್ಟ್ ರೂಪಿಸಿದಂತೆ ಸಿನಿಮಾ ಆಗುತ್ತವೆ, ಪಾತ್ರಗಳು ಬರುತ್ತದೆ, ಹೋಗುತ್ತದೆ. ಮೂಲತಃ ನಾನೊಬ್ಬ ಮನುಷ್ಯನಷೇ. ಅಭಿಮಾನಿಗಳು ನನ್ನಲ್ಲಿ ಕೆಲ ಆದರ್ಶಗಳನ್ನು ಕಂಡಿದ್ದಾರೆ, ಆದರೆ ನನ್ನ ಕುಟುಂಬ, ಸ್ನೇಹಿತರು, ಅಭಿಮಾನಿಗಳ ಜತೆ ನಾನೊಬ್ಬ ಸಾಮಾನ್ಯ ವ್ಯಕ್ತಿಯೇ ಆಗಿದ್ದೇನೆ. ಎಲ್ಲರಿಗೂ ನಾನಿದನ್ನು ತಿಳಿಸಲು ಇಚ್ಚಿಸುತ್ತೇನೆ." ಅಭಿಮಾನಿಗಳ ಪಾಲಿನ ಕಿಚ್ಚ ಮನಬಿಚ್ಚಿಇ ಹೇಳಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com