ಕಾಳಿಂಗ ರಾವ್ ಪಾತ್ರಕ್ಕೆ ನಟನ ಹುಡುಕಾಟದಲ್ಲಿ ರಾಜೇಂದ್ರ ಸಿಂಗ್ ಬಾಬು

ರಾಕ್ ಲೈನ್ ಪ್ರೊಡಕ್ಷನ್ ನಡಿ ತಯಾರಾದ ಹಲವು ಚಿತ್ರಗಳಲ್ಲಿ ಸಂಗೀತ ನಿರ್ದೇಶಕ ...
ಕಾಳಿಂಗ ರಾವ್ ಎಡಚಿತ್ರದಲ್ಲಿ, ಬಲ ಚಿತ್ರದಲ್ಲಿ ರಾಕ್ ಲೈನ್ ವೆಂಕಟೇಶ್ ಮತ್ತು ರಾಜೇಂದ್ರ ಸಿಂಗ್ ಬಾಬು
ಕಾಳಿಂಗ ರಾವ್ ಎಡಚಿತ್ರದಲ್ಲಿ, ಬಲ ಚಿತ್ರದಲ್ಲಿ ರಾಕ್ ಲೈನ್ ವೆಂಕಟೇಶ್ ಮತ್ತು ರಾಜೇಂದ್ರ ಸಿಂಗ್ ಬಾಬು
ರಾಕ್ ಲೈನ್ ಪ್ರೊಡಕ್ಷನ್ ನಡಿ ತಯಾರಾಗುವ ಹಲವು ಚಿತ್ರಗಳಲ್ಲಿ ಸಂಗೀತ ನಿರ್ದೇಶಕ ಪಿ.ಕಾಳಿಂಗ ರಾವ್ ಅವರ ಜೀವನ ಚರಿತ್ರೆ ಕುರಿತು ಮಾಡುವ ಚಿತ್ರ ಒಂದು ಮಹಾತ್ವಾಕಾಂಕ್ಷಿ ಸಿನಿಮಾಗಳಲ್ಲಿ ಒಂದು.
ರಾಜೇಂದ್ರ ಸಿಂಗ್ ಬಾಬು ಅವರ ನಿರ್ದೇಶನದಲ್ಲಿ ಮೂಡಿಬರಲಿರುವ ಸಿನಿಮಾಕ್ಕೆ ಕನ್ನಡಾಭರಣ ಕಾಳಿಂಗ ರಾವ್ ಎಂದು ಹೆಸರಿಡಲಾಗಿದೆ. ನಿರ್ದೇಶಕರು ಮತ್ತು ನಿರ್ಮಾಪಕರು ಚಿತ್ರದ ಕುರಿತು ಚರ್ಚೆ ನಡೆಸಿದ್ದು ಅದೀಗ ನಿರ್ಮಾಣಪೂರ್ವ ಹಂತದಲ್ಲಿದೆ.
ಚಿತ್ರದ ನಾಯಕನನ್ನು ಆಯ್ಕೆ ಮಾಡುವಲ್ಲಿ ಚಿತ್ರತಂಡದ ಆಸಕ್ತಿಕರ ವಿಷಯ ಅಡಗಿದೆ. ಚಿತ್ರನಿರ್ಮಾಪಕರು ನಾಯಕನ ಆಯ್ಕೆಗೆ ರಾಜ್ಯ ಮತ್ತು ದೇಶೀಯ ಮಟ್ಟದಲ್ಲಿ ವ್ಯಕ್ತಿಚಿತ್ರದ ಆಡಿಷನ್ ನಡೆಸಲು ಮುಂದಾಗಿದ್ದಾರೆ. ಕನ್ನಡದ ನಾಯಕನನ್ನೇ ಸಿನಿಮಾಕ್ಕೆ ಹಾಕಿಕೊಳ್ಳಲು ಚಿತ್ರತಂಡ ಒಲವು ತೋರುತ್ತಿದ್ದರೂ ಕೂಡ ಕಾಳಿಂಗ ರಾವ್ ಪಾತ್ರವನ್ನು ನಿಭಾಯಿಸಲು ಸೂಕ್ತ ನಾಯಕನ ಆಯ್ಕೆಗೆ ರಾಷ್ಟ್ರೀಯ ನಾಟಕ ಶಾಲೆಯನ್ನು ಕೂಡ ಸಂಪರ್ಕಿಸಲಿದ್ದಾರೆ.
ನಾಯಕನನ್ನು ಅಂತಿಮಗೊಳಿಸುವ ಮುನ್ನ ಹಲವು ಪ್ರತಿಭೆಗಳ ಹುಡುಕಾಟ ನಡೆಸಲಿದ್ದೇವೆ ಎನ್ನುತ್ತಾರೆ ರಾಜೇಂದ್ರ ಸಿಂಗ್ ಬಾಬು.
ಕಾಳಿಂಗ ರಾವ್ ಜೀವನ ಚರಿತ್ರೆಯನ್ನು ಸಿನಿಮಾದಲ್ಲಿ ಹೇಗೆ ತೋರಿಸಬೇಕು ಎಂಬುದರ ಕುರಿತು ಮತ್ತು ಚಿತ್ರದ ಮುಹೂರ್ತಕ್ಕಾಗಿ ಇದಿರು ನೋಡುತ್ತಿದ್ದಾರೆ ನಿರ್ದೇಶಕರು.
ಕಾಳಿಂಗ ರಾವ್ ಕುರಿತ ಪುಸ್ತಕವನ್ನು ಓದಿ ಸಿನಿಮಾ ತಯಾರಿಸಲು ರಾಜೇಂದ್ರ ಸಿಂಗ್ ಬಾಬುರವರು ಸ್ಪೂರ್ತಿಗೊಂಡರಂತೆ. ಕಾಳಿಂಗ ರಾವ್ ರಚನೆಯ ಎಂದೆಂದಿಗೂ ನೆನಪಿನಲ್ಲುಳಿಯುವ ಹಾಡುಗಳೊಂದಿಗೆ ಅವರ ಜೀವನ ಕುರಿತ ಕೆಲವು ಆಸಕ್ತಿಕರ ವಿಷಯಗಳಿವೆಯಂತೆ. 
ರಾಜೇಂದ್ರ ಸಿಂಗ್ ಬಾಬು ಅವರ ತಂದೆಯ ಜೊತೆಗೆ ಕಾಳಿಂಗ ರಾವ್ 1948 ಮತ್ತು 1949ರ ಇಸವಿಯಲ್ಲಿ ಕೆಲಸ ಮಾಡಿದ್ದರಂತೆ. ಅಂದಿನ ಸಂಗೀತ ನಿರ್ದೇಶಕರಲ್ಲಿ ಇಂದು ಚಾಲ್ತಿಯಲ್ಲಿರುವವರಲ್ಲಿ ಹಂಸಲೇಖ ಪ್ರಮುಖರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com