'ಅಮೆರಿಕಾದಲ್ಲಿ ಅಧ್ಯಕ್ಷ'ನ ಜೊತೆ ರಾಗಿಣಿ ದ್ವಿವೇದಿ ವಿದೇಶದಲ್ಲಿ ಶೂಟಿಂಗ್!

ನವನಿರ್ದೇಶಕ ಯೋಗಾನಂದ ಮುದ್ದಣ್ಣ ನಿರ್ದೇಶನದ ಅಮೆರಿಕ ಅಧ್ಯಕ್ಷ ಚಿತ್ರದ ಚಿತ್ರೀಕರಣಕ್ಕಾಗಿ ಚಿತ್ರತಂಡ ಅಮೆರಿಕಾದಲ್ಲಿ ಬೀಡುಬಿಟ್ಟಿದೆ...
ರಾಗಿಣಿ ದ್ವಿವೇದಿ
ರಾಗಿಣಿ ದ್ವಿವೇದಿ
ನವನಿರ್ದೇಶಕ ಯೋಗಾನಂದ ಮುದ್ದಣ್ಣ ನಿರ್ದೇಶನದ ಅಮೆರಿಕ ಅಧ್ಯಕ್ಷ ಚಿತ್ರದ ಚಿತ್ರೀಕರಣಕ್ಕಾಗಿ ಚಿತ್ರತಂಡ ಅಮೆರಿಕಾದಲ್ಲಿ ಬೀಡುಬಿಟ್ಟಿದೆ. 
ನಾಲ್ವತ್ತು ದಿನಗಳ ಸುದೀರ್ಘ ಚಿತ್ರೀಕರಣಕ್ಕಾಗಿ ಶರಣ್, ರಾಗಿಣಿ ದ್ವಿವೇದಿ ಮತ್ತು ಚಿತ್ರ ತಂಡ ಅಮೆರಿಕಕ್ಕೆ ತೆರಳಿದೆ. ಇನ್ನು ಅಮೆರಿಕದಲ್ಲಿ ರಾಗಿಣಿ ದ್ವಿವೇದಿ ಸಖತ್ ಎಂಜಾಯ್ ಮಾಡುತ್ತಿದ್ದಾರಂತೆ. ಇದು ವಿದೇಶದಲ್ಲಿ ನನ್ನ ಸುದೀರ್ಘ ಚಿತ್ರೀಕರಣದ ಕಾಲವಾಗಿದೆ. 40 ದಿನಗಳ ಕಾಲ ಅಮೆರಿಕದಲ್ಲಿ ಚಿತ್ರೀಕರಣ ನಡೆಯಲಿದೆ ಎಂದರು. 
ಹೌದು, ನಮ್ಮ ದೇಶದ ವಾತಾವರಣ ಹಾಗೂ ಅಮೆರಿಕ ವಾತಾವರಣಕ್ಕೆ ತುಂಬಾ ವ್ಯತ್ಯಾಸ ಇದೆ. ಆದರೆ ಅದನ್ನು ಅನುಭವಿಸುವುದರಲ್ಲಿ ಒಂಥರಾ ಥ್ರಿಲ್ ಇದೆ ಎಂದು ಹೇಳಿದ್ದಾರೆ. 
ಅಮೆರಿಕದಲ್ಲಿ ಕನ್ನಡ ಸಿನಿಮಾ ಶೂಟ್ ಆಗೋದು ತುಂಬಾ ಅಪರೂಪ. ಇಲ್ಲಿ ಈಗ ಸಮ್ಮರ್, ಬೆಳಗಿನ ಜಾವ 4 ಗಂಟೆಗೆಲ್ಲಾ ಸೂರ್ಯ ಹುಟ್ಟುತಾನೆ. ಮತ್ತೆ ಕತ್ತಲಾಗೋದು ತುಂಬಾ ತಡ. ರಾತ್ರಿ 10 ಗಂಟೆಯಾದರೂ ಬೆಳಕೋ ಬೆಳಕು. ಬೆಳಗ್ಗೆ ಬ್ರೇಕ್ ಫಾಸ್ಟ್ ಮಾಡಿದ ಹಾಗೇ ರಾತ್ರಿ ಡಿನ್ನರ್ ಅನ್ನು ಡೇ ಲೈಟ್ ನಲ್ಲೇ ಮಾಡ್ತಿದ್ದೀವಿ. ನನ್ನ ಮಟ್ಟಿಗೆ ಇದೊಂದು ವಿಚಿತ್ರ ಅನುಭವ ಎಂದು ಹೇಳಿದ್ದಾರೆ. 
ಚಿತ್ರದಲ್ಲಿ ಶರಣ್ ಮತ್ತು ರಾಗಿಣಿ ಗಂಡ ಹೆಂಡತಿಯಾಗಿ ನಟಿಸುತ್ತಿದ್ದಾರೆ. ಶರಣ್ ಜತೆ ನಾನು ವಿಕ್ಟರಿ ಚಿತ್ರದಲ್ಲಿ ನಟಿಸಿದ್ದೆ. ಆ ಚಿತ್ರ ಸೂಪರ್ ಹಿಟ್ ಆಗಿತ್ತು. ಈ ಚಿತ್ರ ಕೂಡ ಹಿಟ್ ಆಗುತ್ತೆ. ಔಟ್ ಅಂಡ್ ಔಟ್ ಕಾಮಿಡಿ ಚಿತ್ರ. ನಾನು ಮೊದಲ ಬಾರಿಗೆ ಕಾಮಿಡಿ ಸಿನಿಮಾದಲ್ಲಿ ನಟಿಸುತ್ತಿದ್ದೇನೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com