ಮಿಯಾಮಿ ಚಿತ್ರೋತ್ಸವದಲ್ಲಿ ಕನ್ನಡ ಕಿರುಚಿತ್ರ ಪ್ರದರ್ಶನ, ಮನ್ನಣೆಯ ನಿರೀಕ್ಷೆಯಲ್ಲಿ ಚಿತ್ರತಂಡ

ಲೈಂಗಿಕ ಕಿರುಕುಳ ಕಥೆ ಆಧರಿಸಿ ಕನ್ನಡದಲ್ಲಿ ತಯಾರಾದ ಕಿರುಚಿತ್ರವೊಂದು ಮಿಯಾಮಿ ಇಂಡಿಪೆಂಡೆಂದ್ಟ್ ಫಿಲ್ಮ್ ಫೆಸ್ಟಿವಲ್ ಗೆ ಆಯ್ಕೆಯಾಗಿದೆ.
ಮಿಯಾಮಿ ಚಿತ್ರೋತ್ಸವದಲ್ಲಿ ಕನ್ನಡ ಕಿರುಚಿತ್ರ ಪ್ರದರ್ಶನ, ಮನ್ನಣೆಯ ನಿರೀಕ್ಷೆಯಲ್ಲಿ ಚಿತ್ರತಂಡ
ಮಿಯಾಮಿ ಚಿತ್ರೋತ್ಸವದಲ್ಲಿ ಕನ್ನಡ ಕಿರುಚಿತ್ರ ಪ್ರದರ್ಶನ, ಮನ್ನಣೆಯ ನಿರೀಕ್ಷೆಯಲ್ಲಿ ಚಿತ್ರತಂಡ
ಬೆಂಗಳೂರು: ಲೈಂಗಿಕ ಕಿರುಕುಳ ಕಥೆ ಆಧರಿಸಿ ಕನ್ನಡದಲ್ಲಿ ತಯಾರಾದ ಕಿರುಚಿತ್ರವೊಂದು ಮಿಯಾಮಿ ಇಂಡಿಪೆಂಡೆಂದ್ಟ್ ಫಿಲ್ಮ್ ಫೆಸ್ಟಿವಲ್ ಗೆ ಆಯ್ಕೆಯಾಗಿದೆ.
ಆಗಸ್ಟ್ ಮೊದಲ ವಾರದಲ್ಲಿ  ಈ ಕಿರುಚಿತ್ರ ವಿಘಟನೆ ಪ್ರದರ್ಶನವಾಗಲಿದೆ. ಈ ಸಮಯದಲ್ಲಿ ಐವರು ಸದಸ್ಯರ ತಂಡ ಎಕ್ಸ್ ಪೆಸ್ ಜತೆಗೆ ಚಿತ್ರ ತಯಾರಿ ಕುರಿತು ಮಾತನಾಡಿದೆ.
ಅನ್ಯಾಯ ಖ್ಯಾತಿಯ ದೀಪಕ್ ಸುಬ್ರಹ್ಮಣ್ಯ, ಭಾಮಿನಿ ನಾಗರಾಜು ಚಿತ್ರದ ಮುಖ್ಯ ಪಾತ್ರಗಳಲ್ಲಿ ಇದ್ದು ರಾಮ್ ಮಣಿಜೋನಾಥ್ ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ಮಾನಸ ಶರ್ಮಾ ಚಾಯಾಗ್ರಹಣ ಹಾಗು ಸಂಪಾದನಾ ಕೆಲಸ ಮಾಡಿದ್ದಾರೆ.ಅಪರಾಜಿತ ಸಿರಿಸ್ ಚಿತ್ರಕ್ಕೆ ಸಂಗೀತ ಒದಗಿಸಿದ್ದಾರೆ.
"ನಾವು ಈ ಕಿರುಚಿತ್ರವನ್ನು ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಕ್ಕಾಗಿ ಸಿದ್ದಪಡಿಸಿದ್ದೆವು. ಜುಲೈ 10 ಚಿತ್ರೋತ್ಸವಕ್ಕೆ ನೊಂದಣಿ ಮಾಡಲು ಕಡೆಯ ದಿನವಾಗಿದ್ದು ನಾವು ಒಂದು ದಿನದಲ್ಲಿ ಚಿತ್ರೀಕರಣ ಮಾಡಿದ್ದೇವೆ.ಹಾಗೆಯೇ ಅಂತಿಮ ಪ್ರಾಡಕ್ಟ್ ಎರಡು ದಿನಗಳಲ್ಲಿ ಸಿದ್ಧವಾಗಿತ್ತು ನಾವು ನಮ್ಮ ಕಿರುಚಿತ್ರವನ್ನು ಮಿಯಾಮಿ ಚಿತ್ರೋತ್ಸವ ಸೇರಿ ಅನೇಕ  ಇತರ ಚಲನಚಿತ್ರೋತ್ಸವಗಳಿಗೆ ಕಳುಹಿಸಿದ್ದೇನೆ ಮತ್ತು ನಿನ್ನೆ (ಶನಿವಾರ) ನಾನು ಅವರಿಂದ ದೃಢೀಕರಣವನ್ನು ಸ್ವೀಕರಿಸಿದ್ದೇನೆ" ಕಿರುಚಿತ್ರದ ನಿರ್ದೇಶಕ ರಾಮ್ ಹೇಳಿದ್ದಾರೆ.
ದೀಪಕ್ ಹಾಗೂ ಭಾಮಿನಿ ಚಿತ್ರದ ಪ್ರಮುಖ ಪರಿಕಲ್ಪನೆಯನ್ನು ತಯಾರಿಸಿದ್ದಾರೆ. ’ವಿಘಟನೆ’ ಎನ್ನುವ ಈ ಕಿರುಚಿತ್ರದಲ್ಲಿ ಮನೆಯೊಳಗೆ ನಡೆವ ಘಟನೆಯ ಕಥೆ ಆಧರಿಸಿದೆ. ನಾವು ಹೊರಾಂಗಣ ಚಿತ್ರೀಕರಣಕ್ಕಾಗಿ ತೆರಳುವಷ್ಟು ಸಮಯಾವಕಾಶ ಹೊಂದಿಲ್ಲದ ಕಾರಣ ಇಷ್ಟರಲ್ಲೇ ಉತ್ತಮ ಕಥೆಯನ್ನು ಮಾಡಿದ್ದೇವೆ ಎಂದು ಅವರು ಹೇಳಿದ್ದಾರೆ.
ಎಂಟು ನಿಮಿಷಗಳ ಈ ಕಿರುಚಿತ್ರದಲ್ಲಿ ನಾಲ್ಕರಿಂದ ಐದು ಗಂಟೆಗಳ ಕಾಲದ ಕಥೆ ಹೇಳಲಾಗಿದೆ.ಮಾನವೀಯ ದೃಷ್ಟಿಕೋನವನ್ನು ತೆಗೆದುಕೊಂಡು ಲೈಂಗಿಕ ಕಿರುಕುಳದಂತಹ ಒಂದು ಘಟನೆಯು  ವ್ಯಕ್ತಿಯ ಮೇಲೆ ಹೇಗೆ ಪರಿಣಾಮ ಬೀರುತ್ತದೆಯೆಂಬುದರ ಬಗ್ಗೆ ಚಿತ್ರವು ತೋರಿಸುತ್ತದೆ. ಚಿತ್ರಕಥೆ ನಿಜಕ್ಕೂ ಉತ್ತಮವಾಗಿದೆ ಎಂದು ನಟಿ ಭಾಮಿನಿ ಹೇಳಿದ್ದಾರೆ.
ನಾವು ರಾತ್ರಿ ದೃಶ್ಯಗಳನ್ನು ಬೆಳಿಗ್ಗೆ ಶೂಟ್ ಮಾಡಿದ್ದೆವು, ಅದು ಸಹ ಕ್ಯಾಂಡಲ್ ಲೈಟ್ ನಲ್ಲಾಗಿತ್ತು. ಇದು ನನಗೆ ವಿವಿಧ ಕೋನಗಳಲ್ಲಿ ನೆರಳು ಬೆಳಕಿನ ಆಟವಾಡಲು ಅವಕಾಶ ಒದಗಿಸಿತು ಎಂದು ಛಾಯಾಗ್ರಾಹಕಿ ಮಾನಸಾ ಶರ್ಮಾ ಹೇಳಿದ್ದಾರೆ. 
ಮಿಯಾಮಿ ಚಿತ್ರೋತ್ಸವದಲ್ಲಿ ಕಿರುಚಿತ್ರಕ್ಕೆ ಪ್ರಶಸ್ತಿ, ಪುರಸ್ಕಾರಗಳು  ಲಭಿಸಲಿದೆ ಎಂದು ಚಿತ್ರತಂಡ ಭರವಸೆ ಇಟ್ಟಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com