ವಿಜಯ್ ದೇವರಕೊಂಡ- ಅಲ್ಲು ಅರ್ಜುನ್-ರಶ್ಮಿಕಾ ಮಂದಣ್ಣ
ಸಿನಿಮಾ ಸುದ್ದಿ
ಅಲ್ಲು ಅರ್ಜುನ್-ವಿಜಯ್ ಅಭಿಮಾನಿಗಳಿಗೆ ರಶ್ಮಿಕಾ ಮಂದಣ್ಣ ಆ್ಯಸಿಡ್ ಹಾಕ್ತೀನಿ ಅಂದಿದ್ದೇಕೆ?
ಸ್ಯಾಂಡಲ್ವುಡ್ ನ ಬ್ಲಾಕ್ ಬಸ್ಟರ್ ಕಿರಿಕ್ ಪಾರ್ಟಿ ಚಿತ್ರದ ಬೆಡಗಿ ರಶ್ಮಿಕಾ ಮಂದಣ್ಣ ಇದೀಗ ಟಾಲಿವುಡ್ ನಲ್ಲಿ ಹೆಚ್ಚು ಬ್ಯುಸಿಯಾಗಿದ್ದಾರೆ...
ಸ್ಯಾಂಡಲ್ವುಡ್ ನ ಬ್ಲಾಕ್ ಬಸ್ಟರ್ ಕಿರಿಕ್ ಪಾರ್ಟಿ ಚಿತ್ರದ ಬೆಡಗಿ ರಶ್ಮಿಕಾ ಮಂದಣ್ಣ ಇದೀಗ ಟಾಲಿವುಡ್ ನಲ್ಲಿ ಹೆಚ್ಚು ಬ್ಯುಸಿಯಾಗಿದ್ದಾರೆ.
ಅರ್ಜುನ್ ರೆಡ್ಡಿ ಖ್ಯಾತಿಯ ವಿಜಯ್ ದೇವರಕೊಂಡ ಜತೆ ರಶ್ಮಿಕಾ ಮಂದಣ್ಣ ಗೀತಾ ಗೋವಿಂದಂ ಚಿತ್ರದಲ್ಲಿ ಅಭಿನಯಿಸಿದ್ದು ಇತ್ತೀಚೆಗಷ್ಟೇ ಚಿತ್ರದ ಆಡಿಯೋವನ್ನು ಅದ್ದೂರಿಯಾಗಿ ಬಿಡುಗಡೆ ಮಾಡಲಾಯಿತು.
ಈ ಆಡಿಯೋ ಲಾಂಚ್ ಕಾರ್ಯಕ್ರಮಕ್ಕೆ ಟಾಲಿವುಡ್ ನ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಸಹ ಬಂದಿದ್ದರು. ಕಾರ್ಯಕ್ರಮದ ವೇಳೆ ಅಲ್ಲಿದ್ದ ಅಭಿಮಾನಿಗಳು ಅಲ್ಲು ಅರ್ಜುನ್ ಹಾಗೂ ವಿಜಯ್ ದೇವರಕೊಂಡ ಅವರು ಸ್ಟೇಜ್ ಮೇಲೆ ಬರಬೇಕೆಂದು ಕೂಗಾಟ ಪ್ರಾರಂಭಿಸಿದ್ದರು. ಈ ವೇಳೆ ವೇದಿಕೆ ಮೇಲೆ ಬಂದ ರಶ್ಮಿಕಾ ನನಗೆ ಗೊತ್ತು ಅಲ್ಲು ಸರ್ ಸ್ಟೇಜ್ ಮೇಲೆ ಬರಬೇಕೆಂದು ಬಯಸುತ್ತಿದ್ದೀರಿ.
ಆದರೆ, ಅದಕ್ಕೂ ಮುಂಚೆ ಎರಡು ನಿಮಿಷ ನಾನು ಮಾತನಾಡುತ್ತೇನೆ. ಒಂದು ವೇಳೆ ನೀವು ಹೀಗೆ ಚೀರಾಡಿದರೆ ಆ್ಯಸಿಡ್ ತಂದು ನಿಮ್ಮ ಮುಖದ ಮೇಲೆ ಹಾಕ್ತೀನಿ, ಮೊದಲು ನನಗೆ ಮಾತಾಡೋಕೆ ಬಿಡಿ ಎಂದು ಕೂಲಾಗಿ ಆವಾಜ್ ಹಾಕಿದ್ದಾರೆ. ರಶ್ಮಿಕಾ ಆವಾಜ್ ಗೆ ಅಭಿಮಾನಿಗಳು ಫುಲ್ ಸೈಲೆಂಟ್ ಆಗಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ