ತೆಲುಗು ಚಿತ್ರರಂಗದ ಶತಾಯುಷಿ ನಿರ್ಮಾಪಕ ಕೆ. ರಾಘವ ವಿಧಿವಶ

ಪ್ರಖ್ಯಾತ ತೆಲುಗು ಚಿತ್ರ ನಿರ್ಮಾಪಕ, ಶತಾಯುಷಿ ಕೆ. ರಾಘವ (105) ಹೈದರಾಬಾದ್ ನಲ್ಲಿ ನಿಧನರಾದರು.
ಕೆ. ರಾಘವ
ಕೆ. ರಾಘವ
ಹೈದರಾಬಾದ್: ಪ್ರಖ್ಯಾತ ತೆಲುಗು ಚಿತ್ರ ನಿರ್ಮಾಪಕ, ಶತಾಯುಷಿ ಕೆ. ರಾಘವ (105) ಹೈದರಾಬಾದ್ ನಲ್ಲಿ ನಿಧನರಾದರು. ಅನಾರೋಗ್ಯದಿಂದ ಕಳೆದ ಕೆಲ ದಿನಗಳಿಂದ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಮಂಗಳವಾರ ವಿಧಿವಶರಾದರು.
ಪ್ರತಾಪ್ ಆರ್ಟ್ಸ್‌ ಪ್ರೊಡಕ್ಷನ್ಸ್‌ನ ಮಾಲೀಕರಾಗಿದ್ದ ಹಿರಿಯ ನಿರ್ಮಾಪ ರಾಘವ  30 ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಿಸಿದ್ದರು.
1913ರಲ್ಲಿ ಜನಿಸಿದ್ದ ರಾಘವ ತಮ್ಮ ಎಂಟನೇ ವಯಸ್ಸಿನಲ್ಲಿ ಮನೆ ತೊರೆದಿದ್ದರು.ಹಲವು ವರ್ಷಗಳ ಕಾಲ ಕಷ್ಟದ ಜೀವನ ಸಾಗಿಸಿದ ಇವರು ಪ್ರಾರಂಭದ ಕೆಲ ದಿನಗಳಲ್ಲಿ ಟ್ರಾಲಿ ಎಳೆಯುವವ ಕೆಲಸ ನಿರ್ವಹಿಸಿದ್ದರು. ಕೆಲ ವರ್ಷಗಳ ಕಾಲ ಮಿರ್ಜಾಪುರದ ಮಹಾರಾಜರ ಬಳಿ ಕೆಲಸ ಮಾಡಿದ್ದ ಇವರು ನಂತರ ಚಿತ್ರ ನಿರ್ಮಾಣಕ್ಕೆ ತೋಡಗಿದ್ದರು. 
ರಾಘವ ಒಟ್ಟಾರೆ  28 ತೆಲುಗು ಚಿತ್ರ, ಒಂದು ತಮಿಳು ಹಾಗೂ ಒಂದು ಹಿಂದಿ ಚಿತ್ರಗಳಿಗೆ ಬಂಡವಾಳ ತೊಡಗಿಸಿದ್ದರು. ತಾತಾ ಮನವುಡು, ಜಗತ್ ಕಂತ್ರಿಲು, ಜಾದುವು ಸಂಸ್ಕಾರಮ್, ಇಂಟಿಲ್ಲೋ ರಾಮಣ್ಣ ವೀದಿಲೋ ಕೃಷ್ಣನ್ನ, ತರಂಗಿಣಿ, ಸೂರ್ಯ ಚಂದ್ರುಲು, ಯುಗ ಕಂತ್ರುಲು,ನಾರದ ವಿನೋದಂ - ಇವು ರಾಘವ ನಿರ್ಮಾಣದಲ್ಲಿ ತೆರೆಕಂಡ ಜನಪ್ರಿಯ ಚಿತ್ರಗಲಾಗಿದೆ.
ಶತಮಾನಗಳ ಕಾಲ ಭಾರತೀಯ ಚಿತ್ರರಂಗವನ್ನು ಕಂಡಿದ್ದ, ಚಲನಚಿತ್ರ ರಂಗಕ್ಕೆ ಸೇವೆ ಸಲ್ಲಿಸಿದ್ದ ರಾಘವ ಅವರಿಗೆ  ರಘುಪತಿ ವೆಂಕಯ್ಯ ಪ್ರಶಸ್ತಿ ಸಂದಿದೆ.
ಇನ್ನು ರಾಘವ ಎಂಟು ಭಾಷೆಗಳನ್ನು ಮಾತನಾಡುತ್ತಿದ್ದರು.  ಎನ್ ಟಿ ರಾಮರಾವ್ ಅಭಿನಯದ ಪ್ರಸಿದ್ದ ಚಿತ್ರ ಪಾತಾಳ ಭೈರವಿ ಚಿತ್ರಕ್ಕೆ ರಾಘವ ಸಾಹಸ ನಿರ್ದೇಶಕರಾಗಿ ಸಹ ಕೆಲಸ ಮಾಡಿದ್ದರು.ದಾಸರಿ ನಾರಾಯಣ ರಾವ್‌ ಅವರಂತಹಾ ಮೇರು ನಟರನ್ನು ಚಿತ್ರರಂಗಕ್ಕೆ ಪರಿಚಯಿಸಿದ ಖ್ಯಾತಿ ಸಹ ಇವರದಾಗಿತ್ತು.
ಹಿರಿಯ ನಿರ್ಮಾಪಕ ರಾಘವ ನಿಧನಕ್ಕೆ ಟಾಲಿವುಡ್ ಗಣ್ಯರು, ಕಲಾವಿದರು, ತಂತ್ರಜ್ಞರು ಸಂತಾಪ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com